ಪುಟ:ಕಥಾಸಂಗ್ರಹ ಸಂಪುಟ ೧.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 KANARESE SELECTIONS-PART 1 ಬುದ್ದಿ ಕೆಲವರು ದುರುಳರು ಧನಪಾಲಸೆಟ್ಟಿಗೆ ದಾರಿಯನ್ನು ಕೊಡದೆ ಹೋದುದ ರಿಂದ ಸೆಟ್ಟರು ಕೋಪಿಸಿಕೊಂಡು ಸಾವಿರಾರು ಹೇರುಗಳನ್ನು ಬೆಂಕಿಗೆ ಹಾಕಿಸಿ ಸುಟ್ಟುಬಿಟ್ಟರು, ಪಾದದ ಚಾಕರರು ನಾವೊಬ್ಬರೂ ತಪ್ಪುಮಾಡಲಿಲ್ಲ, ಮನ್ಸಿ ಸಬೇ ಕೆಂದು ಬೇಡಿಕೊಂಡರಂತೆ, ಅರಸು ಅವರ ಮಾತಿಗೆ ನಕ್ಕು-ಪಕ್ಕಾ ಕಳ್ಳ ? ಅವನು ರುಂಡವನ್ನು ಮುಂಡಕ್ಕೆ ಹೇರಿನಲ್ಲಿ ಹಾಕಿ ಇದ್ದು ಕೂಡಿಸಿಬಿಟ್ಟನು. ಶಾಬಾಸು ! ಎಂದು ಕಳ್ಳನನ್ನು ಕೊಂಡಾಡಿ ಬೂದಿ ತೆಗೆದು ಕೊಂಡು ಹೋಗುವುದಕ್ಕೆ ಕಳ್ಳನು ಕಾಡುಪುರಕ್ಕೆ ಈ ದಿವಸ ಬರುವನು. ಇನ್ನು ಯಾರನ್ನು ಕಾವಲಿಟ್ಟ ರೂ ಅವರಿಗೆ ಎಂಗಿ ಹಾಕಿ ತೆಗೆದು ಕೊಂಡು ಹೋಗುವನು, ನಾನೇ ಹೋಗಿ ಕಳ್ಳನನ್ನು ಹಿಡಿಯು ತೇನೆಂದು ಕಾಡು ಪುರದಲ್ಲಿ ಗುಡಾರವನ್ನು ಹಾಕಿಸಿಕೊಂಡು ಸುತ್ತು ಮುತ್ತೂ ಸಹ ರೆಯನ್ನು ಇಟ್ಟು ಕೊಂಡು ದೊರೆಯೇ ಹೋಗಿ ಬೂದಿಯ ಬಳಿಯಲ್ಲಿ ಕೂತಿದ್ದಾನಂತೆ ಎಂದು ಹೇಳಿದಳು, ಅದನ್ನು ಕೇಳಿ ಈ ಅರಸುಮಗನು ಸಾಯಂಕಾಲದವರೆಗೂ ಮಲಗಿ ನಿದ್ದೆ ಮಾಡಿ ಎದ್ದು ಕನ್ನ ಗುರಿಯನ್ನು ತೆಗೆದುಕೊಂಡು ಹೊರಟು ಅರ ಸಿನ ನಿದ್ದೆಯ ಕೊಟಡಿಗೆ ಕನ್ನ ವನ್ನು ಇಕ್ಕಿ ಒಳಹೊಕ್ಕು ನೋಡುವಲ್ಲಿ ಬೇಸಿಗೆಯ ಕಾಲವಾದುದರಿಂದ ಅರಸಿಯು ತನ್ನ ಎಲ್ಲ ಒಡವೆಗಳನ್ನೂ ಕಳಚಿ ಚಿನ್ನದ ಹರಿವಾ ಣದಲ್ಲಿಟ್ಟು ತೊಟ್ಟ ಮಾಣಿಕ್ಯದ ಕುಪ್ಪಸವನ್ನೂ ಮುತ್ತಿನ ಸೀರೆಯನ್ನೂ ನೆರೆಕಟ್ಟು ಸಹಿತ ಗೂಟಕ್ಕೆ ತಗಲಹಾಕಿ ಸಣ್ಣ ಶಲ್ಯವನ್ನು ಉಟ್ಟು ಕೊಂಡು ಮಲಗಿ ನಿದ್ರೆಯ ನ್ನು ಮಾಡುತ್ತಾ ಇದ್ದಳು. ಇವನು ಆ ಒಡವೆಗಳನ್ನೆಲ್ಲಾ ಇಟ್ಟು ಕೊಂಡು ಮುತ್ತಿನ ಸೀರೆಯನ್ನು ಉಟ್ಟು ಕೊಂಡು ಮಾಣಿಕ್ಯದ ಕುಪ್ಪಸವನ್ನು ತೊಟ್ಟು ಕೊಂಡು ಕನ್ನೂ ರಿಯ ತಿಲಕವನ್ನು ಇಟ್ಟು ಕಣ್ಣಿಗೆ ಕಾಡಿಗೆ ಹಚ್ಚಿ ಕೊಂಡು ತಲೆಯನ್ನು ಬಾಚಿ ತುರುಬು ಹಾಕಿಕೊಂಡು ಮೆಲ್ಲ ಗೆ ಕದವನ್ನು ತೆಗೆದು ಅವನಾರೋ ಬಾಗಿಲಲ್ಲಿ ಗೊಲ್ಲರವನು ? ಎಂದು ಕೂಗಲು ಗೊಲ್ಲರ ಗೊತ್ತುಗಾರನು ಓಡಿಬಂದು ಅಡ್ಡಬಿದ್ದು--ಬುದ್ದೀ ! ಏನಪ್ಪಣೆ ? ಎಂದು ಭಯದಿಂದ ಕೇಳಲು ದೊರೆಗಳು ಕಳ್ಳನ ಕೈಗೆ ಸಿಕ್ಕಿ* ಭಂಗಪಡುವುದಾಗಿ ಕನಸು ಕಂಡೆವು, ಎದೆ ಝಗ್ಗನ್ನು ತ್ತದೆ. ತಾಳಲಾರೆವು ಬೇಗ ಪಾಲಕಿಯನ್ನು ತರಿಸು ಎಂದು ಹೇಳಿ ತರಿಸಿಕೊಂಡು ಗೌಸು ಹಾಕಿಸಿ ಕಾಡುಪುರಕ್ಕೆ ಬರಲು ಮುಂಚಿತವಾಗಿಯೇ ಗೊಲ್ಲರ ಗೊತ್ತು ಗಾರನು ವರದಿಯನ್ನು ಹೇಳಿದುದರಿಂದ ಅರಸು ಕೋಪದಿಂದ ಉರಿದುಬೀಳುತ್ತಾ ಇದ್ದನು. ಅಷ್ಟರಲ್ಲಿಯೇ ಪಾಲಕಿಯನ್ನು ಹೊತ್ತು ಇದ್ದ ಬೆಸ್ತರು ಗುಡಾರದ ಒಳಗೆ ಪಾಲಕಿ ಯನ್ನು ಇರಿಸಿ ಹೊರಗೆ ಹೋದರು. ಈ ಅರಸುಮಗನು ಗೌಸನ್ನು ತೆಗೆದು ಹೊರಗೆ ಬಂದು ಅರಸನ ಬಳಿಯಲ್ಲಿ ನಿಂತನು. ಅರಸು ಕೋಪದಿಂದ ಕಣ್ಣೆತ್ತಿ ನೋಡದೆ ನಿನಗೇನು ಹುಚ್ಚು ಹಿಡಿಯಿತೇ ? ಈ ರಾತ್ರಿ ವೇಳೆಯಲ್ಲಿ ಮಸಣಕ್ಕೆ ಬರಬಹುದೇ ? ಎಂದು ತಳ್ಳಲು ಅಷ್ಟು ಮಾತ್ರಕ್ಕೆ ಕೆಳಗೆ ಬಿದ್ದು ಕತ್ತಿನ ಮುತ್ತಿನಸರವನ್ನು ಕಿತ್ತು ಅಗಲಕ್ಕೆ ಚೆಲ್ಲಿ ಶಿಖೀಸರ ಹರಿದು ಚೆಲ್ಲಿತೆಂದು ಅಳುತ್ತಾ ಒಂದೊಂದು ಮುತ್ತಾಗಿ ಹುಡುಕಿ ಆಯುತ್ತಾ ಇರಲು ಆ ಶಿಖೀಸರವು ತಮ್ಮ ಕುಲಕ್ರಮವಾಗಿ ಬಂದಂಥಾದು