ಕಥಾಸಂಗ್ರಹ-೧ನೆಯ ಭಾಗ 69 ಇಟ್ಟು ಕೊಂಡು ಚಿನ್ನದ ಕಂಬಿಯ ಬುಗುಡಿಯ ಹಾಕಿರುವ ಅಂಚಿನ ಮಡಿಕೆಯ ಧೋತ್ರವನ್ನು ಮಲಗಜ್ಜೆ ಹಾಕಿ ಉಟ್ಟು ಕೊಂಡು ಪಟಾಣಿಯ ಹಚ್ಚಡವನ್ನು ಹೊದ್ದುಕೊಂಡು ಎದೆಯಲ್ಲಿ ಹಾವೇರಿಯ ಚೌಕದ ಕರಡಿಗೆಯನ್ನೂ ಕೊರಳಲ್ಲಿ ರುದ್ರಾಕ್ಷ ಮಾಲಿಕೆಯನ್ನೂ ಮುಖದಲ್ಲಿ ವಿಭೂತಿಯನ್ನೂ ಧರಿಸಿ ದೇಶದ ಜೋಡನ್ನು ಮೆಟಿ ಕೈಯಲಿ ಬೆತದ ಚಡಿಯನ್ನು ಹಿಡಿದು ಕಲ್ಯಾಣಪುರದ ಕೊರೀಬಸವಸಟರ ಕಡೆಯ ಗುಮಾಸ್ತನೆಂದು ಕೇಳಿದವರಿಗೆ ಹೇಳಿಕೊಂಡು ಗಂದಿಗ ಸಾವಕಾರನ ಬಳಿಗೆ ಹೋಗಿ ಐದು ಸಾವಿರ ರುಪಾಯಿಗಳಿಗೆ ಒಂದು ರತ್ನವನ್ನು ಕೊಟ್ಟು ಅದಕ್ಕೆ ಸರಿ ಯಾಗಿ ಪರಿಮಳದ ಎಣ್ಣೆಗಳನ್ನೂ ಆರತಿಕರ್ಪೂರ ಗಂಧ ಮುಂತಾದ ವಸ್ತುಗಳನ್ನೂ ಗೋಣಿಗಳಲ್ಲಿಯ ಬುದ್ದಲಿಗಳಲ್ಲಿ ಯ ತುಂಬಿಸಿ ಒಬ್ಬರೂ ಕಾಣದಂತೆ ಒಂದು ಗೋಣಿಯ ಮೂಲೆಗೆ ಆ ತಲೆಯನ್ನು ಹಾಕಿಕೊಂಡು ನೂರಾರು ಬಾಡಿಗೆ ಎತ್ತುಗಳ ಮೇಲೆ ಅವುಗಳನ್ನೆಲ್ಲಾ ಹೇರಿಸಿ ಬಾಡಿಗೆದಾರರನ್ನು ಕೂಡಿಕೊಂಡು ಹೊರಟು ಸಾಯಂಕಾಲವಾದ ಜಾವಹೊತ್ತಿಗೆ ಕಾಡುಪುರದ ಬಳಿಗೆ ಹೋದನು, ನೂರಾರು ಎತ್ತುಗಳ ಕೊರಳುಗಳಿಗೆ ಕಟ್ಟಿದ್ದ ಘ೦ಟೆಗಳ ಘಣ ಘಣ ಶಬ್ದದಿಂದ ಕೂಡಿ ಬರು ತಿರಲು ಇವರಾರು ಇಷ್ಟು ಹೊತ್ತಿನಲ್ಲಿ ಒರುವವರು ? ಇಲ್ಲಿ ಬರುವುದಕ್ಕೆ ಅಪ್ಪಣೆ ಯಿಲ್ಲ, ದಾರಿಯನ್ನು ಹಿಡುಕೊಂಡು ಹೋಗಿರಿ ಎಂದು ಮಸಣದ ಕಾವಲಿನವರು ಅವರನ್ನು ಅಡ್ಡಿ ಮಾಡಲು ಅರಸುಮಗನು ಅವರನ್ನು ಕುರಿತು-ವಿದ್ಯಾಮಂಜರಿಯ ಮದುವೆಗಾಗಿ ದೊರೆ ಅಪ್ಪಣೆ ಕೊಟ್ಟ ಪ್ರಕಾರ ದ್ವೀಪಾಂತರಗಳಿಂದ ಸಾಮಾನುಗಳನ್ನು ತಂದು ಇದ್ದೇನೆ. ನಾನು ದೊರೆಗೆ ಪ್ರಿಯನಾದ ಧನಪಾಲಶೆಟ್ಟಿ ಎಂಬುದನ್ನು ಕಾಣಿರಾ ? ಪರಸ್ಥಳದ ಬಾಡಿಗೆದಾರರು ದಾರಿತಪ್ಪಿ ಕಾಣದೆ ಬಂದರು. ಅಡ್ಡಿ ಮಾಡ ಬೇಡಿರಿ ಎಂದು ಎಷ್ಟು ಒಡಂಬಡಿಸಿದಾಗ ಕೇಳದೆ ಇದ್ದುದರಿಂದ ಕೋಪಿಸಿಕೊಂಡು ಬೆಳಿಗ್ಗೆ ಅರಸಿಗೆ ಹೇಳಿ ಇವರಿಗೆ ತಕ್ಕ ಪ್ರಾಯಶ್ಚಿತ್ರವನ್ನು ಮಾಡಿಸುತ್ತೇನೆ, ಈ ಗೋಣಿ ಬುದ್ದಲಿಗಳನ್ನೆಲ್ಲಾ ಈ ಬೆಂಕಿಗೆ ಹಾಕಿಬಿಡಿ ಎಂದು ಬಾಡಿಗೆದಾರರಿಗೆ ಅಪ್ಪಣೆಯನ್ನು ಕೊಡಲು ಅವರು ಕೇ ವು ಎಣ್ಣೆಯ ಬುದ್ದಲಿಗಳನ್ನು ಬೆಂಕಿಗೆ ಹಾಕಲು ಅದರ ಉರಿಗೆ ಹತ್ತರ ನಿಣ ಲಾರದೆ ಕಾವಲಿನವರು ದೂರವಾಗಿ ಓಡಿಹೋಗಿ ನಿಂತುಕೊಂಡು ನೋಡುತ್ತಿದ್ದರು ಇವನು ಉಳಿದ ಬುದ್ದಲಿಗಳನ್ನೂ ಗೋಣಿಗಳೆಲ್ಲವನ್ನೂ ಬೆಂಕಿಗೆ ಹಾಕಿಸಿ ಕಾವಲುಗಾರರನ್ನು ನೋಡಿ ಒಳ್ಳೆಯದೆಲೆ ! ಸೆರಗಿನಲ್ಲಿ ಗಂಟುಹಾಕಿಕೊಂ ಡಿರಿ ! ಬೆನ್ನಿಗೆ ಎಣ್ಣೆ ಸವರಿಕೊಂಡಿರಿ ! ನಾಳೆ ನಿಮ್ಮ ಮನೆಗಳನ್ನೆಲ್ಲಾ ಮುಟು ಗೋಳ ಹಾಕಿಸಿಕೊಳ್ಳುತ್ತೇನೆ ? ನಿಮ್ಮ ತಲೆಗೆ ಬಂತು ! ಎಂದು ಹೇಳುತ್ತಾ ಸ್ವಲ್ಪ ದೂರ ಹೋಗಿ ಬಾಡಿಗೆದಾರರಿಗೆ ಬಾಡಿಗೆಯ ಹಣಗಳನ್ನೂ ಉಡಿಗೆರೆಗಳನ್ನೂ ಕೊಟ್ಟು ತಾನು ಅಡುಗೂಳಜ್ಜಿಯ ಮನೆಗೆ ಹೋಗಿ ಉಂಡು ಮಲಗಿಕೊಂಡನು. ಬೆಳಿಗ್ಗೆ ಯಥಾಪ್ರಕಾರ ಅಡುಗೂಳಜ್ಜಿಯು ತಿರಿಗಿಕೊಂಡು ಬಂದು-- ಅಪ್ಪಾ ! ಈ ಹೊತ್ತಿನ ಸುದ್ದಿಯನ್ನು ಕೇಳೋ ; ನಿನ್ನೆಯ ದಿವಸದ ರಾತ್ರಿ ಸ್ಮಶಾನದಲ್ಲಿ ಕಾವಲಿದ್ದವರು ಬೆಳಿಗ್ಗೆ ಅರಸಿನ ಬಳಿಗೆ ಬಂದು ಅಡಿದಂಡ ಸಡಿದಂಡ ಬಿದ್ದು
ಪುಟ:ಕಥಾಸಂಗ್ರಹ ಸಂಪುಟ ೧.djvu/೮೧
ಗೋಚರ