ಪುಟ:ಕಥಾಸಂಗ್ರಹ ಸಂಪುಟ ೧.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KANARESE SELECTIONS-PART I ಗಿದ್ದಾನೆ. ಈ ಮುಂಡವನ್ನು ಬಂಡಿಯ ಮೇಲೆ ಹಾಕಿಸಿ ಈ ಪಟ್ಟಣದಲ್ಲಿ ಎಲ್ಲ ಕಡೆ ಯಲ್ಲಿ ತಿರುಗಿಸುವುದಕ್ಕೆ ಕಳುಹಿಸಿ ಈ ಮುಂಡವನ್ನು ಕಂಡು ಯಾರು ಬಾಯಿ ಬಡು ಕೊಳ್ಳುತ್ತಾರೋ ಅವರನ್ನು ಹಿಡುಕೊಂಡು ಬರುವಂತೆ ಅಪ್ಪಣೆಯನ್ನು ಕೊಡಿಸಬೇ ಕೆಂದನಂತೆ. ದೊರೆಯು ಹಾಗೆಯೇ ಅಪ್ಪಣೆಯನ್ನು ಕೊಟ್ಟು ದರಿಂದ ಆ ಹೆಣವನ್ನು ಬೀದಿ ಬೀದಿಗಳಲ್ಲಿ ತಿರುಗಿಸಿಕೊಂಡು ಬರುತ್ತಾರೆಂದು ಹೇಳಿದಳು, ಅರಸುಮಗನು ಅಡುಗೂಳಜ್ಜಿ ಯು ಮಾಡತಕ್ಕ ಕೆಲಸಗಳನ್ನು ಅವಳಿಗೆ ಮೊದಲೇ ಹೇಳಿಕೊಟ್ಟು ತಾನು ಆ ಗುಡಿಸಲಿನ ಮುಂದೆ ಇರುವ ಒಂದು ನುಗ್ಗೆ ಯ ಮರವನ್ನು ಹತ್ತಿಕೊಂಡು ನೋಡುತ್ತಾ ಇದ್ದು ಸಮೀಪದಲ್ಲಿ ಬೀದಿಯೊಳಗೆ ಮುಂಡದ ಬಂಡಿ ಬರುವುದನ್ನು ಕಂಡು ಆ ನುಗ್ಗೆ ಯ ಮರದ ಒಂದು ಕೊಂಬೆಯನ್ನು ಮುರಿದು ಹಾಕಿ ತಾನೂ ಸಂಗಡಲೇ ಬಿದ್ದು ಉಸಿರು ಹಿಡುಕೊಂಡು ಮರ್ಛ ಹೋದವನ ಹಾಗಿದ್ದನು ಆ ಸಮಯದಲ್ಲಿ ಅಡುಗೂಳಜ್ಜಿಯು-ಇದ್ದ ಒಬ್ಬ ಮಗನು ಸತ್ತನಲ್ಲಪ್ಪಾ ನನಗೇನು ಗತಿ ? ಎಂದು ಬಾಯಿಯನ್ನು ಬಡು ಕೊಳ್ಳುತ್ತಾ ಅವನ ಮೇಲೆ ಬಿದ್ದು ಕುಯ್ಯೋ ! ಮರೋ ! ಎಂದು ಅಳುತ್ತಾ ಆ ಬಂಡಿಯವರು ತನ್ನ ಬಳಿಗೆ ಬಂದು ದನ್ನು ನೋಡಿ ಇನ್ನೂ ಚೆನ್ನಾಗಿ ಬಡಿಕೊಳ್ಳಲು ಅವರು.- ಎಲೈ ಹುಚ್ಚು ಮುದುಕಿಯೇ ! ಯಾಕೆ ದಿಗಿಲುಪಡುತ್ತೀ ? ಮರದ ಕೊನೆ ಮುರಿದುಕೊಂಡು ಇವನು ಕೆಳಗೆ ಬಿದ್ದುದರಿಂದ ಜ್ಞಾನತಪ್ಪಿ ಇದೆ ; ಎದೆಗೂ ಕಣ್ಣುಗಳಿಗೂ ನೀರನ್ನು ಹಾಕಿ ತಟ್ಟಿ ಸ್ವಲ್ಪ ಹೊತ್ತು ಬೀಸು ; ಎಚ್ಚತ್ತು ಕೊಳ್ಳುತ್ತಾನೆಂದು ಹೇಳಿದರು. ಅವರು ಹೋದಮೇಲೆ ಈ ಅರಸು ಮಗನು ಎದ್ದು ಆ ಗುಡಿಸಲನ್ನು ಕಿತ್ತು ಮತ್ತೊಂದು ಮಲೆಯಲ್ಲಿ ಒಡ್ಡಿಗೊಂಡು ಅಲ್ಲಿ ಅಡು ಗೂಳಜ್ಜಿಯೊಡನೆ ಇದ್ದನು ಬಂಡಿಯವರು ಊರಲ್ಲೆಲ್ಲ ತಿರಿಗಿಸಿಕೊಂಡು ಬಂದು--ಸ್ವಾಮಿ ! ಬದ್ದೀ ! ಈ ಹೆಣವನ್ನು ಕಂಡು ಯಾರೂ ಅಳಲಿಲ್ಲ, ಒಬ್ಬ ಮುದುಕಿಯು ಮಾತ್ರ ತನ್ನ ಮಗನು ನುಗ್ಗೆ ಯ ಮರವು ಮುರುಕೊಂಡುದರಿಂದ ಕೆಳಗೆ ಬಿದ್ದು ಜ್ಞಾನತಪ್ಪಿರುವುದನ್ನು ನೋಡಿ ತನ್ನ ಮಗನು ಸತ್ತನೆಂದು ಬಡು ಕೊಂ ಡಳು. ಅವಳಿಗೆ ನಾವು ಸಮಾಧಾನವನ್ನು ಹೇಳಿ ಬಂದವು ಇಷ್ಟೇ ಸರಿ, ಬುದ್ದಿ ! ಎನಲು ಅರಸು-ಆ ಮರದಿಂದ ಬಿದ್ದವನೇ ಕಳ್ಳನು. ಅವನ ಮೋಸಕ್ಕೆ ಮರುಗಿ ಬಿಟ್ಟು ಬಂದಿರಿ ಎಂದು ಹೇಳಿ ಅವರನ್ನು ಕಳುಳಿಸಿಬಿಟ್ಟು ವ್ಯಸನದಿಂದ ಒಳಗೆ ಹೋಗಿ ಮಲಗಿ ಕೊಂಡನು. ಮಾರಣೆಯ ದಿವಸ ಅಡುಗೂಳಜ್ಜಿಯು ಎಂದಿನಂತೆ ಯಾಯಿವಾರಕ್ಕೆ ಹೋಗಿ ಬಂದು ಅರಸುಮಗನೊಡನೆ--ಅರಸು ಆ ದಿನ ಸಾಯಂಕಾಲದಲ್ಲಿ ತಲೆಯಿಲ್ಲದ ಮುಂಡವನ್ನು ಮಸಣದಲ್ಲಿ ಸುಡುವಂತೆ ನೇಮಿಸಿ, ಅಲ್ಲಿಗೆ ಯಾರಾದರೂ ಬಂದು ಆ ಚಿತೆಯಲ್ಲಿ ತಲೆಯನ್ನು ಹಾಕಿದರೆ ಅವರನ್ನು ಹಿಡು ಕೊಂಡು ಬರುವಹಾಗೆ ಕಾವ ಲಿನವರಿಗೆ ಅಪ್ಪಣೆಯನ್ನು ಕೊಟ್ಟು ಕಳುಹಿಸಿದ್ದಾನಂತೆ ಎಂದು ಹೇಳಲು ರಾಜಕು ಮಾರನು ಬೇಗ ಅಡಿಗೆಯನ್ನು ಮಾಡಿಸಿಕೊಂಡು ಉಂಡು ಕಪ್ಪಾದ ಜರಿಯ ಕಂಬಿಯ ರುಮಾಲನ್ನು ತಲೆಗೆ ಸುತ್ತಿಕೊಂಡು ಪಟ್ಟೆಯ ತುಂಡು ಚೊಗೆಯನ್ನು