ಪುಟ:ಕಥಾಸಂಗ್ರಹ ಸಂಪುಟ ೧.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ ವುದಕ್ಕಾಗಿ ನೀನು ಮೊದಲು ನನ್ನ ತಲೆಯನ್ನು ತೆಗೆದು ಕೊಂಡು ಹೋಗಿ ಮುಚ್ಚಿ ಟ್ಟಿ ದ್ದು ಅವರು ಮುಂಡವನ್ನು ಸುಡುವ ಕಾಲದಲ್ಲಿ ಅದರ ಕೂಡ ರುಂಡವನ್ನೂ ಹಾಕಿ ಸುಡುವ ಹಾಗೆ ಮಾಡು ಎಂದು ಅರಸುಮಗನಿಗೆ ಹೇಳಿ ಆ ನಾಲ್ಕು ಗಂಧದ ಮಂಚದ ಕಾಲುಗಳನ್ನೂ ತೆಗೆದು ಕೊಂಡು ಕನ್ನ ದಿಂದ ಒಳಹೊಕ್ಕು ನೋಡುವಲ್ಲಿ ಪಟ್ಟದ ರಾಣಿ ಯೊಡನೆ ರಾಜನು ಮಂಚದ ಮೇಲೆ ಮಲಗಿರಲು ಅವರು ಅಲುಗದಂತೆ ಆ ಮಂಚಕೆ ತನ್ನ ಬೆನ್ನನ್ನು ಕೊಟ್ಟು ಎತ್ತಿ ಆ ಮಂಚದ ಮರು ಹವಳದ ಕಾಲುಗಳನ್ನೂ ಕಳಚಿ ಅದಕ್ಕೆ ಬದಲಾಗಿ ತಾನು ತಂದಿದ್ದ ಗಂಧದ ಕಾಲುಗಳನ್ನು ಜೋಡಿಸಿ ನಾಲ್ಕನೆಯ ಕಾಲನ್ನು ಕಳಚಿ ಗಂಧದ ಕಾಲನ್ನು ಜೋಡಿಸುವಲ್ಲಿ ಮಂಚವು ಸ್ವಲ್ಪ ಅಲುಗಾಡಿದು ದರಿಂದ ಅರಸು ತಾನು ಮಲಗಿಕೊಂಡಿದ್ದ ಹಾಗೆಯೇ ತನ್ನ ತಲೆದಿಂಬಿನ ಕೆಳಗೆ ಇಟ್ಟು ಇದ್ದ ಬಿಚ್ಚುಗತ್ತಿ ಯನ್ನು ತೆಗೆದುಕೊಂಡು ಒಂದು ವೇಳೆ ಮಂಚದ ಸುತ್ತಾ ತಿರುಗಿಸಿ ಅಲ್ಲೇ ಇಟ್ಟು ಯಧಾಪ್ರಕಾರ ಮಲಗಿಕೊಂಡನು. ತಿರುಗಿಸಿದ ಆ ಕತ್ತಿಯು ಜೋಯಿ ಸನ ಕುತ್ತಿಗೆಗೆ ತಗುಲಿ ತಲೆ ಹರಿದು ಬಿದ್ದಿತು, ಒಳಗೆ ಹೋದವನು ಬಹಳ ಹೊತ್ತಾ ದಾದ್ರೂ ಹೊರಗೆ ಬಾರದ ಕಾರಣ ಅರಸುಮಗನು ತತ್ತರಿಸಿ ಗಾಬರಿಯಾಗಿ ಒಳ ಹೊಕ್ಕು ನೋಡಿ ಬಿದ್ದಿರುವ ತನ್ನ ಗುರುವಿನ ತಲೆಯನ್ನೂ ಕಳಚಿರುವ ನಾಲ್ಕು ಹವ ಆದ ಮಂಚದ ಕಾಲುಗಳನ್ನೂ ಅಲ್ಲಿದ್ದ ರತ್ನ ಪಡಿಯ ನಗಗಳನ್ನೂ ತೆಗೆದುಕೊಂಡು ಹೊರಗೆ ಬಂದು ತನ್ನ ಸಾಮಾನುಗಳನ್ನು ಕಟ್ಟಿ ಕೊಂಡು ಅರಮನೆಯ ಪಾಗರಗಳನ್ನು ದಾಟಿ ಬಂದ ಜನರಿಗೆ ಕೂಲಿಯನ್ನು ತೆಗೆದು ಕೊಂಡು ಅಟ್ಟಿಕ್ಕುತ್ತಾ ಜೀವನ ಮಾಡಿ ಕೊಂಡು ಆ ಪಟ್ಟಣದ ಒಂದು ಸಂದಿಯಲ್ಲಿ ಹುಲ್ಲು ಗುಡಿಸಲು ಕಟ್ಟಿ ಕೊಂಡಿರುವ ಅಡು ಗೂಳಜ್ಜಿಯ ಬಳಿಗೆ ಹೋದನು. ಅವಳಿಗೆ ಸ್ವಲ್ಪ ಹಣವನ್ನು ಕೊಟ್ಟು--ನೀನು ಸಾಯುವ ಪರಿಯಂತರವೂ ನಿನಗೆ ಅನ್ನ ವಸ್ತ್ರಗಳನ್ನು ಕೊಟ್ಟು ಕಾಪಾಡುತ್ತೇನೆಂದು ಭಾಷೆ ಮಾಡಿ ಅವಳನ್ನು ತನ್ನ ಸ್ವಾಧೀನ ಮಾಡಿಕೊಂಡು ಅಮ್ಮಾ ! ಪ್ರತಿದಿನವೂ ಅರಮನೆಯಲ್ಲಿಯ ಪಟ್ಟಣದಲ್ಲಿಯೂ ನಡೆಯುವ ವಿಶೇಷ ವರ್ತಮಾನವನ್ನು ತಿಳಿ ಸುತ್ತಾ ನನಗೆ ಅನ್ನ ವನ್ನಿ ಟ್ಟು ಕೊಂಡು ಇರು ಎಂದು ಹೇಳಿ ಮಂಚದ ಕಾಲುಗಳನ್ನೂ ತಲೆಯನ್ನೂ ಸಾಮಾನುಗಳ ಸಂಗಡ ಒಂದು ಬಳಿಯಲ್ಲಿ ಹೂಳಿಟ್ಟು ಮಲಗಿಕೊಂಡನು. ಅಡು ಗೂಳಜ್ಜಿಯು ಮುಂಗೋಳಿ ಕೂಗಿದ ಕೂಡಲೆ ಎದ್ದು ಉಪಾದಾನವನ್ನು ಮಾಡುವುದಕ್ಕೆ ಹೊರಟು ಮನೆ ಮನೆಗೆ ತಿರುಗಿ, ತನ್ನ ಗುಡಿಸಲಿಗೆ ಬಂದು ರಾಜಕು ಮಾರನನ್ನು ಎಬ್ಬಿಸಿ-ಈ ದಿನ ಅರಮನೆಯಲ್ಲಿ ನಡೆದ ಸುದ್ದಿಯನ್ನು ಕೇಳು, ನಿನ್ನೆ ಯ ರಾತ್ರಿಯಲ್ಲಿ ದೊರೆಯು ಮಲಗುವ ಮನೆಗೆ ಕಳ್ಳರು ಬಿದ್ದು ಹವಳದ ಮಂಚದ ಕಾಲುಗಳನ್ನೂ ಕೆಲವು ವಜ್ರಪಡಿ ನಗಗಳನ್ನೂ ಕದ್ದು ಕೊಂಡು ಹೋದರಂತೆ. ಆ ಕಳ್ಳರೊಳಗೆ ಒಂದು ತಲೆಯಿಲ್ಲದ ಮುಂಡ ಮಾತ್ರ ಅಲ್ಲಿ ಬಿದ್ದು ಇದೆಯಂತೆ, `ಅರಸು ತನ್ನ ಮಗು ಹೋಯಿತೆಂದು ಬಹಳ ವ್ಯಸನಪಡಲು ಮಂತ್ರಿಯು-ಬಿದ್ದಿರುವ ಈ ಮುಂಡದ ಕೊರಳಲ್ಲಿ ಜನಿವಾರವಿರುವುದರಿಂದ ಕಳ್ಳನು ಬ್ರಾಹ್ಮಣನಾಗಿರುವನು. ಹೊರಗಳ್ಳನಿಗೆ ಈ ಪಟ್ಟಣಕ್ಕೆ ಬರುವ ಶಕ್ತಿ ಇಲ್ಲ, ಪ್ರಾಯಶಃ ಇವನು ಒಳಗಳ್ಳನಾ