66 KANARESE SELECTIONS-PART T ಎಂದು ಕೇಳಿದುದಕ್ಕೆ ರಾಜಪುತ್ರಿಯು-ಕಳ್ಳತನ ಒಂದು ವ್ಯಭಿಚಾರ ಒಂದು ಎನ್ನಲು ಅರಸುಮಗನು- ಆ ಎರಡು ವಿದ್ಯೆಗಳಲ್ಲಿಯೂ ನಿನಗೆ ಪರೀಕ್ಷೆ ಯನ್ನು ಕೊಟ್ಟನಂತರ ನಿನ್ನನ್ನು ಪರಿಗ್ರಹಿಸುವೆನು, ನೀನೇ ನನಗೆ ಪಟ್ಟದ ರಾಣಿಯು. ಇದು ಸತ್ಯವೆಂದು ನಂಬುಗೆಯನ್ನಿತ್ತು ಅಲ್ಲಿಂದ ಹೊರಟು ನಗರ ಗ್ರಾಮಾದಿಗಳನ್ನು ಸುತ್ತುತ್ತಾ ವಿಶಾಲನಗರವೆಂಬ ಪಟ್ಟಣವನ್ನು ಹೊಕ್ಕು ವಿಚಾರಿಸುವಲ್ಲಿ ಆ ಊರಿನಲ್ಲಿ ರುವ ಸುಬ್ಬಭಟ್ಟನೆಂಬ ಜೋಯಿಸನು ಚೂರವಿದ್ಯೆಯಲ್ಲಿ ಸಮರ್ಥನೆಂಬುವುದನ್ನು ಆತನ ಅಂತರಂಗದ ಆಪ್ತನಿಂದ ಭೇದಿಸಿ ತಿಳಿದು ಆತನೆಡೆಗೆ ಹೋಗಿ ಅವನ ಎರಒಟ ಕಾಲುಗಳನ್ನೂ ಹಿಡಿದು ಕೊಂಡು-ನನಗೆ ಬರುವ ವಿದ್ಯೆಯನ್ನು ನಿನಗೆ ಕಲಿಸಿ ಕೊಡು ವೆನೆಂದು ಅಭಯವನ್ನು ಕೊಡಬೇಕೆಂದು ಬೇಡಿಕೊಳ್ಳಲು ಆ ಜೋಯಿಸನು ಅವನಿಗೆ ಅಭಯವನ್ನು ಕೊಟ್ಟು ರಹಸ್ಯ ಸ್ಥಳದಲ್ಲಿ ಕೂರಿಸಿಕೊಂಡು ಚೋರವಿದ್ಯಾಮಂತ್ರ ಗಳನ್ನು ಉಪದೇಶಿಸಿ--ನನಗೆ ಮಕ್ಕಳಿಲ್ಲ ; ಆದುದರಿಂದ ನೀನು ನನಗೆ ಮಗನಾ ಗಿಯ ಶಿಷ್ಯನಾಗಿಯೂ ಇರುತ್ತೀಯೆ. ನಾನು ಚೋರನೆಂಬುವುದು ಯಾರಿಗೂ ತಿಳಿಯದು, ಮುಂದೆ ನೀನೂ ತಿಳಿಸಕೂಡದು, ನಾನು ಸತ್ತರೆ ನನಗೆ ಮಾಡತಕ್ಕೆ ಕ್ರಿಯೆಗಳನ್ನೆಲ್ಲಾ ನೀನೇ ಮಾಡಬೇಕೆಂದು ಪ್ರಮಾಣವನ್ನು ಮಾಡಿಸಿಕೊಂಡು ಸಾಯಂಕಾಲವಾದ ಮೇಲೆ ಅರಸುಮಗನೊಡನೆ ಭೋಜನವನ್ನು ಮಾಡಿ ಒಬ್ಬರಿಗೂ ತಿಳಿಯದಂತೆ ಕನ್ನ ಗುರಿಗಳನ್ನೂ ಮಂಕುಬೂದಿಯನ್ನೂ ನೂಲೇಣಿಗಳನ್ನೂ ತೆಗೆದು ಕೊಂಡು ಕಾಡಿನ ಮಾರ್ಗವಾಗಿ ಬರುತ್ತಾ ಗಂಧದ ಮರದಲ್ಲಿ ನಾಲ್ಕು ಮಂಚದ ಕಾಲುಗಳನ್ನು ಮಾಡಿಕೊಂಡು ಮುಂದೆ ಹೋಗುತ್ತಿರುವಲ್ಲಿ ಈ ಅರಸುಮಗನುಕಳುವನ್ನು ಮಾಡುವುದಕ್ಕೆ ಎಲ್ಲಿಗೆ ಹೋಗುತ್ತೀರಿ ? ಎಂದು ಕೇಳಿದನು. ಜೋಯಿ ಸನು-ಅಳಕವತೀ ಪಟ್ಟಣದ ಅಳಕಶೇಖರರಾಜನು ಕಳ್ಳರಿಗೆಲ್ಲಾ ಮಿಂಡ ಎಂದು ಹೊಗಳಿಸಿಕೊಳ್ಳುತ್ತಾ ಇದ್ದಾನೆ. ಈ ವರೆಗೂ ನಾನು ಏಕಾಂಗಿಯಾಗಿದ್ದುದರಿಂದ ಅವನ ಪಟ್ಟಣಕ್ಕೆ ಹೋಗುವುದು ನನಗೆ ಬಹು ದುರ್ಘಟವಾಗಿದ್ದಿತು. ಈಗ ನೀನು ಸಹಾಯಕನಾಗಿ ಬಂದುದರಿಂದ ಆತನ ಪಟ್ಟಣಕ್ಕೆ ಹೋಗುತ್ತೇನೆ ಅಂದನು. ಆಗ ಅರಸುಮಗನು-ರೋಗಿ ಬಯಸಿದುದೂ ಹಾಲೋಗರ ವೈದ್ಯ ಹೇಳಿದುದೂ ಹಾಲೋ ಗರ ಎಂಬ ಗಾದೆಗೆ ಸರಿಯಾಗಿ ನನ್ನ ಮನಸ್ಸಿನಲ್ಲಿ ಇದ್ದುದನ್ನೇ ಜೋಯಿಸರು ಹೇಳಿದ ರೆಂದು ಸಂತೋಷಪಟ್ಟುಕೊಂಡು, ಅವನ ಜೊತೆಯಲ್ಲಿಯೇ ಹೋದನು. ಆ ಬಳಿಕ ಆ ಸುಬ್ಬ ಜೋಯಿಸನು ಅಳಕವತಿ ಪಟ್ಟಣವನ್ನು ಸೇರಿ ಆ ಪಟ್ಟ. ಣಕ್ಕೆ ಇರುವ ಹದಿನಾಲ್ಕು ಸುತ್ತಿನ ಕೋಟೆಯನ್ನೂ ನೂಲೇಣಿಗಳಿಂದ ಹತ್ತಿ ಒಳಗೆ ಡೆಗೆ ಇಳಿದು ಕಾವಲುಗಾರರಿಗೆಲ್ಲಾ ಮಂಕುಬೂದಿಯನ್ನು ತಳಿದು ಅರಮನೆಯ ಬಳಿಗೆ ಹೋಗಿ ಆ ಅರಮನೆಯ ಏಳು ಸುತ್ತಿನ ಪಾಗರವನ್ನೂ ನೂಲೇಣಿಯಿಂದಲೇ ಹತ್ತಿ ಇಳಿದು ಅರಸು ಮಲಗುವ ಚಿಕ್ಕ ಮನೆಯ ಗೋಡೆಗೆ ಕನ್ನ ಗತ್ತರಿಯಿಂದ ಕನ್ನ ವ೩ ಕಿ.ನಾನು ಬರುವ ವರೆಗೂ ನೀನು ಹೊರಗೆ ಎಚ್ಚರವಾಗಿ ಕಾದಿರು, ಒಂದು ವೇಳೆ ನನಗೇನಾದರೂ ಅಪಾಯ ಸಂಭವಿಸಿದರೆ ಜನರಿಗೆ ನನ್ನ ಗುರುತು ಸಿಕ್ಕದಿರು
ಪುಟ:ಕಥಾಸಂಗ್ರಹ ಸಂಪುಟ ೧.djvu/೭೮
ಗೋಚರ