ಕಥಾಸಂಗ್ರಹ-೧ನೆಯ ಭಾಗ 65 ಮೈಗಳ ಒಣಗಿದ ತುಟಿಗಳ ತಲೆ ಮುಸುಕುಗಳ ಹೊರಗಣಿಂದ ಕೋಟೆಯ ಒಳಗೆ ಬರುವ ತನ್ನ ಗುರುಗಳನ್ನು ಕೋಟೆಯ ಬಾಗಿಲಲ್ಲಿ ಕಂಡು ಝಗ್ಗನೆ ತೇಜಿಯನ್ನಿ ಳಿದು ಅವರಡಿಗಳಿಗೆ ಅಡ್ಡ ಬಿದ್ದು ಚಿಂತೆಯ ಕಾರಣವನ್ನು ಕೇಳಿದನು. ಅವರುನಾವು ಇಂದಿನವರೆಗೂ ವಿದ್ಯಾ ಪ್ರಸಂಗದಲ್ಲಿ ಯಾರಿಗೂ ಸೋತುಬರಲಿಲ್ಲ, ಈಗ ಅಳಕವತೀ ಪಟ್ಟಣದ ಆಳಕಶೇಖರರಾಜನ ಮಗಳು, ವಿದ್ಯಾ ಮಂಜರಿ ಎಂಬವಳು, ತನಗೆ ಅರವತ್ತು ನಾಲ್ಕು ವಿದ್ಯೆಗಳಲ್ಲಿಯ ಉತ್ತರ ಕೊಟ್ಟವನನ್ನೇ ಮದುವೆ ಮಾಡಿ ಕೊಳ್ಳುವೆನೆಂದು ಸ್ವಯಂವರಮಾಡಿರುವ ಸುದ್ದಿಯನ್ನು ಗತಾನುಗತಿಕವಾಗಿ ಕೇಳಿ ನಾವು ಹುಚ್ಚತನದಿಂದ ಹೋಗಿ ಐದಾರು ವಿದ್ಯೆಗಳಲ್ಲಿ ಯಾದರೂ ಅವಳಿಗೆ ಉತ್ತರ ವನ್ನು ಕೊಡಲಾರದೆ ಪರಾಜಿತರಾಗಿ ಬಂದೆವು. ಅಲ್ಲದೆ ಚಪ್ಪನ್ನ ದೇಶದ ಮಹಾ ಮಹಾ ವಿದ್ಯಾಂಸರೂ ಕೂಡ ಬಂದು ಸೋತು ಹೋದರು. ನಮ್ಮ ಬಾಳು ಕೆಟ್ಟ ಬಾಳು ಎಂದು ಹೇಳಿದರು. ಅದಕ್ಕೆ ರಾಜಕುಮಾರನು--ಯಾಕೆ ಇಷ್ಟು ಚಿಂತೆ ಮಾಡುತ್ತೀರಿ ? ನಿಮ್ಮ ಶಿಷ್ಯನಾದ ನಾನು ಅವಳನ್ನು ಜಯಿಸಿ ನಿಮ್ಮನ್ನು ಕರಿಸಿ ನಿಮಗೆ ಅವಳಿಂದ ಬಹುಮಾನ ಕೊಡಿಸುವೆನೆಂದು ಸಮಾಧಾನಗೊಳಿಸಿ ಅವರನ್ನು ಪಟ್ಟಣಕ್ಕೆ ಕಳುಹಿಸಿ ತಾನು ಮನೆಯನ್ನು ಹೊಗದೆ ಹಾಗೆಯೇ ಹೊರಟು ರಾತ್ರಿ ಹಗಲೆನ್ನದೆ ದಾರಿಯನ್ನು ನಡೆದು ಆಳಕವತೀ ಪಟ್ಟಣವನ್ನು ಸೇರಿ ವಿದ್ಯಾಮಂಜ ರಿಯ ಆರಮನೆಯ ಬಾಗಿಲಿನಲ್ಲಿ ಇಳಿದು ತೇಜಿಯನ್ನು ಬಾಗಿಲ ಕಂಬಕ್ಕೆ ಕಟ್ಟಿ ಪ್ರಸಂಗಮಂಟಪವನ್ನು ಹೊಕ್ಕು ಮಂಚದ ಮೇಲೆ ಕುಳಿತುಕೊಂಡನು. ಆಗೆ ವಿದ್ಯಾ ಮಂಜರಿಯ ಸಖಿಯಾದ ಕಳಾವತಿ ಎಂಬುವಳು ಈ ರಾಜಕುಮಾರನ ತೇಜಸ್ಸನ್ನೂ ಗಾಂಭೀರವನ್ನೂ ಠೀವಿಯನ್ನೂ ಸಡಕನ್ನೂ ರಾಜಲಕ್ಷಣಗಳನ್ನೂ ಸೌಂದಠ್ಯವನ್ನೂ ನೋಡಿ ವಿದ್ಯಾಮಂಜರಿಯ ಬಳಿಗೆ ಹೋಗಿ ಅಕ್ಕಾ ! ಈಗ ಬಂದಿರುವ ರಾಜಕು ಮಾರನನ್ನು ನೋಡು ; ಇವನು ನಿನಗೆ ತಕ್ಕ ವರನಾಗಿದ್ದಾನೆ. ಇವನನ್ನೂ ಕೂಡ ವಿದ್ಯಾ ಪ್ರಸಂಗದಲ್ಲಿ ಉತ್ತರವನ್ನು ಹೇಳಲಿಲ್ಲವೆಂದು ನೀನು ನಿರಾಕರಿಸಿ ಬಿಟ್ಟರೆ ಇನ್ನು ಇಂಥಾ ವೀರನು ನಿನಗೆ ಸಿಕ್ಕಲರಿಯನು ಆ ಮೇಲೆ ನೀನು ಕಾವಿಯ ಸೀರೆಯನ್ನುಟ್ಟು ವಿರಕ್ಕೆ ಯಾಗಿ ವನಕ್ಕೆ ಹೋಗಬೇಕು ಎನಲು ವಿದ್ಯಾಮಂಜರಿಯು ಕೂಡಲೆ ಪ್ರಸಂಗ ಮಂಟಪಕ್ಕೆ ಬಂದು ತೆರೆಯ ಒಳಗಡೆ ಇರುವ ಮಣಿಮಂಚದ ಮೇಲೆ ತಾನೂ ಕುಳಿತುಕೊಂಡು ಅರಸು ಮಗನನ್ನು ಒಂದೊಂದು ವಿದ್ಯೆಯಲ್ಲಿ ಕೇಳುತ್ತಾ ಬರಲು ಇವನು ಅವಳು ಕೇಳಿದ ಎಲ್ಲ ವಿಷಯಗಳಿಗೂ ಉತ್ತರವನ್ನು ಹೇಳಿದನು. ಆಗ ವಿದ್ಯಾ ಮಂಜರಿಯು ಬಹಳ ಸಂತೋಷಪಟ್ಟು ತೆರೆಯನ್ನು ಹಾರಬಡಿದು ಇವನ ಕೊರಳಿಗೆ ಹೂವಿನ ಮಾಲಿಕೆಯನ್ನು ಹಾಕಿ ತಬ್ಬಿಕೊಂಡು ಕರಕೊಂಡು ಹೋಗಿ ತನ್ನ ಮಂಚದ ಮೇಲೆ ಕೂರಿಸಿಕೊಂಡು---ನಿನು ಅರವತ್ತೆರಡು ವಿದ್ಯೆಯಲ್ಲಿಯ ನನಗೆ ಪರೀಕ್ಷೆ ಯನ್ನು ಕೊಟ್ಟುದರಿಂದ ಉಳಿದ ಎರಡು ವಿದ್ಯೆ ಗಳೂ ಬಂದಿರಬಹುದೆಂದು ನಾನು ನಿನ್ನನ್ನು ಪ್ರತಿಯಾಗಿ ವರಿಸಿದ್ದೇನೆ. ನೀನು ಗಂಧರ್ವ ವಿವಾಹದಿಂದ ನನ್ನನ್ನು ಕೈ ಕೊಳ್ಳೆಂದಳು. ಆಗ ಅರಸುಮಗನು ಉಳಿದ ಎರಡು ವಿದ್ಯೆಗಳು ಯಾವುವು ? 5
ಪುಟ:ಕಥಾಸಂಗ್ರಹ ಸಂಪುಟ ೧.djvu/೭೭
ಗೋಚರ