ಪುಟ:ಕಥಾಸಂಗ್ರಹ ಸಂಪುಟ ೧.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 KANARESE SELECTIONS-PART I ಅಂದನು. ರಾಣಿಯು-ಇಷ್ಟು ದಿವಸ ನಾನು ನಿಮ್ಮ ಸುಖವನ್ನ ನುಭವಿಸಿದೆನು. ಇನ್ನು ಮೇಲೆ ನೀವು ಮತ್ತೊಬ್ಬಳನ್ನು ತಂದು ಮಕ್ಕಳುಗಳನ್ನು ಪಡದು ಬಾಳುವು ದನ್ನು ನೋಡುವ ಸುಖವೇ ಸಾಕು, ನನ್ನ ತಂಟೆಯು ಲೇಶಮಾತ್ರವೂ ನಿಮಗೆ ಇರು ವುದಿಲ್ಲ ಖಂಡಿತವಾಗಿಯೂ ಇನ್ನೊಬ್ಬಳನ್ನು ಮದುವೆಯಾಗಬೇಕೆಂದು ನಿರ್ಬಂಧ ವನ್ನು ಮಾಡಲು ಅರಸು ಹಾಗೇ ಆಗಲಿ ಎಂದು ಮತ್ತೊಬ್ಬಳನ್ನು ಮದುವೆಯಾಗಿ ಇಬ್ಬರೊಡನೆಯ ಕೆಲವು ಕಾಲ ಸುಖವಾಗಿದ್ದನು, ಹೀಗಿರುವಲ್ಲಿ ದೇವರ ಚಿತ್ತ ದಿಂದ ಹಿರಿಯ ಹೆಂಡತಿಯು ಗರ್ಭಿಣಿಯಾಗಲು ಕಿರಿಯ ಹೆಂಡತಿಯು ತಾನು ಬಸುರಾಗಲಿಲ್ಲವಲ್ಲಾ ! ಬಂಜೆಯಾಗಿದ್ದವಳು ಬಸುರಾದಳಲ್ಲಾ ! ಎಂದು ಹೊಟ್ಟೆ ಕಿಚ್ಚು ಪಡುತಾ ಅರಸನು ಸರ್ವಭಾಗದಲ್ಲಿ ಯೂ ತನ್ನ ಮಾತಿನಂತೆ ಇರಬೇಕೆಂದು ಯೋಚಿಸಿ ಅವನನ್ನು ತನ್ನಂತೆ ಮಾಡಿ ಕೊಂಡು ಹಿರಿಯ ಹೆಂಡತಿಯನ್ನು ಅರಮನೆ ಯಿಂದ ಬಿಡಿಸಿ ಹೊರಗೆ ದಾಟಿಸಿದ ಹೊರತು ಅನ್ನೋದಕಳನ್ನು ತೆಗೆದು ಕೊಳ್ಳು ವುದಿಲ್ಲವೆಂದು ಹಟವನ್ನು ಹಿಡಿದಳು. ಆಗ ಅರಸು ಮಂತ್ರಿಯನ್ನು ಕರಿಸಿ ಏಕಾಂತದಲ್ಲಿ ಹಿರಿಯವಳು ಮಾಡಿ ಕೊಂಡುದು ಅವಳ ಪ್ರಾಣಕ್ಕೆ ಬಂದಿತು. ಆದರೂ ವ್ಯಸನಪಡುವುದರಿಂದ ಪ್ರಯೋ ಜನವಿಲ್ಲವು, ತುದಿಪೇಟೆಯಲ್ಲಿ ಒಂದು ಅರಮನೆಯನ್ನು ಕಟ್ಟಿಸಿ ಅಲ್ಲಿ ಹಿರಿಯವ ಳನ್ನು ಇಡು ; ಗರ್ಭಿಣಿಯಾಗಿದ್ದಾಳೆ. ಆಕೆಯು ಒಂದಕ್ಕೂ ಕೊರತೆ ಪಡದಂತೆ ಬಯಸಿದ ಬಯಕೆಗಳನ್ನು ಸಲ್ಲಿ ಸುತ್ತಾ ನೀನೇ ಚೆನ್ನಾಗಿ ಪರಾಂಬರಿಸಿಕೊ ಎಂದು ಅಪ್ಪಣೆಯನ್ನು ಕೊಟ್ಟು ತನ್ನ ಸ್ವಂತ ಕತ್ತಿಯನ್ನೂ ಮುದ್ರೆ ಯ ಉಂಗುರವನ್ನೂ ಕೊಟ್ಟು ಕಳುಹಿಸಿದನು. ಪ್ರಧಾನಿಯು ಪಟ್ಟದ ರಾಣಿಯ ಬಳಿಗೆ ಬಂದು ಅಳುತ್ತಾ ಅರಸು ಹೇಳಿದ ಮಾತನ್ನು ಹೇಳಿ ಆ ಕತ್ತಿಯನ್ನೂ ಮುದ್ರೆಯ ಉಂಗುರ ವನ್ನೂ ಕೊಟ್ಟು ತುದಿಪೇಟೆಯಲ್ಲಿ ಅರಮನೆಯನ್ನು ಕಟ್ಟಿಸಿ ಆಕೆಯನ್ನು ಅಲ್ಲಿಗೆ ಕರಕೊಂಡು ಹೋಗಿ ಇಟ್ಟು ಸ್ವಲ್ಪವಾದರೂ ಚಿಂತೆಪಡದಂತೆ ದಿನಕಟ್ಟೆ ತಾನೇ ಹೋಗಿ ವಿಚಾರಿಸಿಕೊಳ್ಳುತ್ತಾ ಸಕಲ ಸೌಖ್ಯಗಳಿಂದ ಮೊದಲಿಗಿಂತಲೂ ಹೆಚ್ಚಾಗಿ ಇಟುಕೊಂಡಿದ್ದನು. ಬಳಿಕ ಪಟ್ಟದ ರಾಣಿಯು ಆರನೆಯ ತಿಂಗಳಲ್ಲಿ ಅರಸಿನ ಕತೆ ಉಂಗುರಗಳನ್ನೇ ಅರಸೆಂದು ಎಣಿಸಿ ಹಸೆಮಣೆಯ ಮೇಲೆ ಇಟ್ಟು ಕೊಂಡು ತಾನೂ ಕುಳಿತು ರಾಜ ಪುರೋಹಿತನ ಕಡೆಯಿಂದ ಪುಂಸವನ ಸೀಮಂತ ಕರ್ಮಗಳನ್ನು ನಡೆಸಿಕೊಂಡು ನವಮಾಸ ತುಂಬಿದ ಮೇಲೆ, ಹತ್ತನೆಯ ತಿಂಗಳಲ್ಲಿ ಸಕಲ ರಾಜ ಲಕ್ಷಣಗಳಿಂದ ಕೂಡಿದ ಗಂಡುಮಗುವನ್ನು ಹೆತ್ತಳು. ಆಗ ಮಂತ್ರಿಯು ಆ ಮಗು ವಿಗೆ ಜಾತಕರ್ಮ ನಾಮಕರಣ ಚೌಲೋಪನಯನಾದಿಗಳನ್ನು ಆಯಾಯ ಕಾಲದಲ್ಲಿ ನೆರವೇರಿಸಿ ಐದು ವರ್ಷವಾಗಲು ಉಪಾಧ್ಯಾಯರುಗಳನ್ನು ಇಟ್ಟು ನಾನಾ ವಿದ್ಯಾ ಭ್ಯಾಸಗಳನ್ನು ಮಾಡಿಸಿದನು, ಆ ಬಳಿಕ ರಾಜಕುಮಾರನು ಹದಿನಾರು ವರುಷದ ಪ್ರಾಯದವನಾಗಿ ಸಕಲ ವಿದ್ಯಾಪಾರಂಗತನಾದನು. ಒಂದಾನೊಂದು ದಿವಸ ಈ ರಾಜಕುಮಾರನು ಗುಜ್ಜರಿ ಹೊತ್ತಿನಲ್ಲಿ ತೇಜಿ ಯನ್ನು ಏರಿ ವೈಹಾಳಿಯನ್ನು ಮಾಡುತ್ತಿರುವಲ್ಲಿ ಬಾಡಿದ ಮೊಗಗಳ ಬಳಲಿದ