ಪುಟ:ಕಥಾಸಂಗ್ರಹ ಸಂಪುಟ ೧.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 63 ತಂದನು ಎನ್ನಲು ಜಂಬುಕನು ವಿಪ್ರನನ್ನು ಜರಿದುತಂದ ವಿವರವನ್ನು ತೋರಿಸು ಎಂದು ಕೇಳಿತು. ಬ್ರಾಹ್ಮಣನು ಮೊಸಳೆಯನ್ನು ಸಂಚಿಯಲ್ಲಿ ಹೊಗಿಸಿ ಹತ್ರ ಕಟ್ಟಿ ತಲೆಯ ಮೇಲೆ ಹೊತ್ತು ಕೊಂಡು- ಹೀಗೆ ತಂದೆನು ಅಂದನು. ಆ ಮೇಲೆ ಜಂಬಕನು ಮೊಸಳೆಯನ್ನು ಸ್ವಲ್ಪ ದೂರ ಹೊರಿಸಿಕೊಂಡು ಹೋಗಿ ನಿರ್ಜಲಭೂಮಿಯಲ್ಲಿ ಇಳಿಸಿಎಲೋ ಶುದ್ದ ಸಾತ್ವಿಕಬಾಹ್ಮಣೋತ ಮನೇ ! ಇಂಥಾ ದುಷ, ಜಂತುಗಳಿಗೆ ಎಂದಿಗೂ ಉಪಕಾರವನ್ನು ಮಾಡಬೇಡ ಎಂದು ಒಎದ್ದಿ ಯನ್ನು ಹೇಳಿ ಆತನಿಂದ ಒಂದು ಚಾಪು ಕಲ್ಲನ್ನು ತರಿಸಿ ಆ ಮೊಸಳೆಯ ತಲೆಯ ಮೇಲೆ ಹಾಕಿಸಿ ಕೊಂದ ಮೇಲೆ ತಾನು ಅದನ್ನು ಸಮೃದ್ಧಿ ಯಾಗಿ ಭಕ್ಷಿಸಿ ಹೋಯಿತು. ಆದುದರಿಂದ ಇಂಥಾ ದುಷ್ಟ ಜಂತುಗಳನ್ನು ಪ್ರಾಣಸಹಿತ ಬಿಡಬಾರದೆಂದು ಹೇಳಿ ಆ ಕಾಗೆಯನ್ನು ಕೊಲ್ಲಿಸಿತು. ಆ ವಿಪ್ರನು ಮಂಡೂಕದೊಡನೆ ಕಾಶಿಯನ್ನು ಸೇರಿ ಗಂಗೆಯಲ್ಲಿ ಅದನ್ನು ಬಿಟ್ಟು ಸ್ನಾನವನ್ನು ಮಾಡಿ ಆ ಕಾಶಿಯಲ್ಲಿ ಇರುವ ವಿಶ್ವನಾಥನಿಗೆ ವಂದ ನೆಯನ್ನು ಮಾಡಿ ಗಯಾವರ್ಜನೆಯನ್ನು ಮಾಡಿಕೊಂಡು ಹೆಗಲ ಮೇಲೆ ಕಾವಡಿ. ಯನ್ನು ಹೊತ್ತು ಕೊಂಡು ತಿರುಗಿ ತನ್ನ ಊರಿಗೆ ಬಂದು, ತಂದೆತಾಯಿಗಳಿಗೆ ಗಂಗೋ ದಕದಿಂದ ಅಭಿಷೇಕವನ್ನು ಮಾಡಿ ಪುತ್ರಮಿತ್ರ ಕಳತ್ರಸಮೇತನಾಗಿ ಸುಖಧಿಂದ ಬಾಳುತ್ತಿದ್ದನು. 46. A PRINCE WINS A PRINCESS BY DISPLAYS OF SKILL ೪೬, ರಾಜಕುಮಾರನು ವಿದ್ಯೆಗಳನ್ನು ಪರೀಕ್ಷೆ ಕೊಟ್ಟು, ಅರಸನ ಮಗಳನ್ನು ಮದುವೆಯಾದುದು. ಅಮರಾವತಿ ಎಂಬ ಪಟ್ಟಣದಲ್ಲಿ ಅಮರಶೇಖರನೆಂಬ ಅರಸು ಇರುವನು. ಅವನಿಗೆ ಸರ್ವಗುಣಸಂಪನ್ನೆಯಾದ ಸುಶೀಲೆ ಎಂಬ ಪತ್ನಿ ಯು ಇರುವಳು, ಈತನು ಸುಬುದ್ದಿ ಎಂಬ ಮಂತ್ರಿಯೊಡನೆ ಕೂಡಿ ನ್ಯಾಯವಾಗಿ ರಾಜ್ಯಭಾರವನ್ನು ಮಾಡಿ ಕೊಂಡು ಹಲವು ಕಾಲ ಸುಖವಾಗಿದ್ದನು. ಒಂದು ದಿವಸ ರಾತ್ರಿಯಲ್ಲಿ ಅರಸಿಯು ರಾಯನೊಡನೆ-ನಮ್ಮಿಬ್ಬರಿಗೂ ಮುಪ್ಪಿನ ಕಾಲವಾಗುತ್ತಾ ಬಂತು. ಪಟ್ಟಕ್ಕೆ ಮಕ್ಕಳಾಗಲಿ, ಮಕ್ಕಳಿಲ್ಲದ ರಾಜ್ಯವು ಅನಾಯಕವಾಗಿ ಕಂಡವರ ಪಾಲಾಗುವು ದಿಲ್ಲ ವೇ ? ಯಾಕೆ ಹೀಗೆ ಸುಮ್ಮನಿರುವಿರಿ ? ನಾನೆಂತೂ ಬಂಜೆಯು, ಇನ್ನು ಮೇಲೆ ನನ್ನನ್ನು ಕಟ್ಟಿ ಕೊಂಡು ಏನು ಮಾಡುವಿರಿ ? ಇನ್ನೊಬ್ಬಳನ್ನಾ ದರೂ ತಂದು ಅವ ಳಲ್ಲಿ ರಾಜ್ಯಭಾರಕ್ಕೆ ಸಂತಾನವನ್ನು ಪಡೆಯಿರಿ ಅಂದಳು. ರಾಯನು--ದೇವರು ಮಾಡಿದುದಾಗಲಿ, ನಾನು ನಿನ್ನ ಮೇಲೆ ಮತ್ತೊಬ್ಬಳನ್ನು ತರುವುದಿಲ್ಲ, ಇಬ್ಬರು ಹೆಂಡರಕಾಟ ಇರಳು ತಿಗಣೆಯ ಕಾಟವೆಂಬ ಗಾದೆಯನ್ನು ನೀನು ಕೇಳರಿಯೆಯಾ ?