ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 KANARESE SELECTIONS-PART 1 ಬ್ರಾಹ್ಮಣನ ಕಾಲನ್ನು ಹಿಡಿದುಕೊಂಡು ಭಕ್ಷಿ ಸುವುದಕ್ಕೆ ಪ್ರಾರಂಭಿಸಿತು. ಆಗ ವಿಪ್ರನು ಮೊಸಳೆಯನ್ನು ನೋಡಿ-ಎಲೈ ಮೊಸಳೆಯೇ! ಸ್ವಲ್ಪ ನೀರಿ ನಲ್ಲಿ ಶ್ರಮಪಡುತ್ತಿದ್ದ ನಿನ್ನನ್ನು ಹೊತ್ತು ಕೊಂಡು ಬಂದು ಮಹಾಪುಣ್ಯಸ್ಥಳ ವಾದ ಗಂಗೆಯಲ್ಲಿ ಬಿಟ್ಟು ಸಂರಕ್ಷಣೆ ಮಾಡಿದ ನನ್ನ ನ್ನು ನೀನು ಭಕ್ಷಿಸುವುದಕ್ಕೆ ಉದ್ಯೋಗಿಸಒಹುದೇ ? ಎನಲು ಮೊಸಳೆಯು--ಈ ಕಾಲದಲ್ಲಿ ಉಪಕಾರವನ್ನು ಮಾಡಿದವರಿಗೆ ಆಪಕಾರವನ್ನು ಮಾಡಬಹುದೆಂದು ಮರು ಸಾಕ್ಷಿಗಳನ್ನು ನುಡಿಸು ತೇನೆ ಎಂದು ಹೇಳಿತು. ಆ ಬ್ರಾಹ್ಮಣನು-ಹಾಗೆ ಸಾಕ್ಷಿಯನ್ನು ನುಡಿಸಿದ ತರು. ವಾಯ ನನ್ನ ನ್ನು ಭಕ್ಷಿಸೆಂದು ಹೇಳಲು ಮೊಸಳೆಯು ಗಂಗಾತೀರದಲ್ಲಿ ಇದ್ದ ಒಂದು ಮಾವಿನ ಮರವನ್ನು ನೋಡಿ-ಎಲೋ ವೃಕ್ಷರಾಜಾ ! ಉಪಕಾರವನ್ನು ಮಾಡಿದವರಿಗೆ ಅಪಕಾರವನ್ನು ಮಾಡಬಹುದೇ ? ಎಂದು ಕೇಳಿತು. ಆ ವೃಕ್ಷವುನಾನು ಸಕಲರಿಗೂ ಪುಷ್ಪ ಫಲಗಳಿಂದಲೂ ನೆರಳಿನಿಂದಲೂ ಉಪಕಾರವನ್ನು ಮಾಡು ತೇನೆ. ಅವರು ನನ್ನ ಉಪಕಾರವನ್ನು ಅರಿಯದೆ ಕಲ್ಲುಗಳಿಂದ ಹೊಡೆಯುವರು. ಮನೆಗಳನ್ನು ಕಟ್ಟುವುದಕ್ಕೆ ನನ್ನನ್ನು ಕಡಿಯುವರು, ಮತ್ತು ಮೇಲೆ ಹತ್ತಿ ಕಾಲು ಗಳಿ೦ದ ಒದೆಯುವರು. ಹೀಗೆ ನಾನಾ ಪ್ರಕಾರ ಶ್ರಮಪಡಿಸುವರು. ಆದುದರಿಂದ ಉಪಕಾರವನ್ನು ಮಾಡಿದವರಿಗೆ ಆಪಕಾರವನ್ನು ಮಾಡಬಹುದೆಂದು ನುಡಿಯಿತು, ಎಲೋ ವಿಪ್ರನೇ ! ಒಂದು ಸಾಕ್ಷಿ ಆಯಿತಲ್ಲಾ ! ಎಂದು ಮೊಸಳೆಯು ಹೇಳುವಷ್ಟ ರಲ್ಲೇ “ಒಂದು ಮುದಿ ಆಕಳು ನೀರಿಗಾಗಿ ಬರುತ್ತಾ ಇರಲು ಮೊಸಳೆಯು ಅದನ್ನು ನೋಡಿ-ಎಲೈ ಆಕಳೇ ! ಉಪಕಾರಿಗಳಿಗೆ ಅಪಕಾರವನ್ನು ಮಾಡಬಹುದೇ ? ಎಂದು ಕೇಳಿತು. ಆ ಹಸುವು-ನಾನು ದೇವಶರ್ಮನೆಂಬ ಬ್ರಾಹ್ಮಣನ ಮನೆಯಲ್ಲಿ; ಇರುವೆನು, ಅವನಿಗೆ ನನ್ನಿಂದ ಹತ್ತು ಕಾಲುನಡೆಗಳು ಅದುವು. ಅಲ ದೆ ವಿಶೇಷ ವಾಗಿ 'ಕ್ಷೀರವನ್ನು ಕರೆಯುತ್ತಿದ್ದೆನು, ನಾನು ನಿನ್ನೆ ಯ ದಿವಸ ಶರೀರದ ಜಾಡ್ಯದಿಂದ ಹಾಲು ಕೊಡದೆ ಇರಲು ನನ್ನನ್ನು ಸೊಂಟ ಮುರಿಯುವ ಹಾಗೆ ಹೊಡೆದು ಹೊರ ಡಿಸಿದನು. ಆದುದರಿಂದ ಉಪಕಾರವನ್ನು ಮಾಡಿದವರಿಗೆ ಅಪಕಾರವನ್ನು ಮಾಡ ಬಹುದು ಎಂದು ಹೇಳಲು ಮೊಸಳೆಯು-ಎರಡು ಸಾಕ್ಷಿಗಳಾದವು ಎಂದು ಹೇಳುವಷ್ಟರಲ್ಲೇ ಅಲ್ಲಿಗೆ ಒಂದು ಜಂಬುಕವು ಬಂದಿತು. ಮೊಸಳೆಯು-ಎಲೋ ಜಂಬುಕರಾಜಾ ! ಉಪಕಾರಿಗಳಿಗೆ ಅಪಕಾರವನ್ನು ಮಾಡಬಹುದಲ್ಲ ವೇ ? ಎಂದು ಕೇಳಿತು. ಆ ಜಂಬುಕವು- ಈ ಕಾಲದಲ್ಲಿ ಉಂಟಾದ ಮಾತನ್ನು ಹೇಳಿದರೆ ಅದು ಲೋಕವಿರುದ್ದ ವಾಗಿ ಕಾಣುವುದು. ಇದಲ್ಲದೆ ಮನುಷ್ಯರು ಮಹಾ ಪಾಪಿಗಳು, ನೀರೊಳಗಿರುವವರಿಗೆ ನ್ಯಾಯವನ್ನು ಹೇಳಬಾರದೆಂಬ ನೀತಿ ಉಂಟು. ಆದುದರಿಂದ ನೀವು ನೀರನ್ನು ಬಿಟ್ಟು ಈಚೆಗೆ ಬಂದರೆ ನ್ಯಾಯವನ್ನು ವಿಚಾರಿಸಿ ಹೇಳಬಹುದು ಎನ್ನಲು ಮೊಸಳೆಯು ಬ್ರಾಹ್ಮಣನ ಕಾಲನ್ನು ಬಿಟ್ಟು ತಡಿಗೆ ಬಂದು ತಮ್ಮ ವ್ಯಾಜ್ಯವನ್ನು ಹೇಳಿತು. ನರಿಯು ಬ್ರಾಹ್ಮಣನ ಮೇಲೆ ಕೋಪಿಸಿಕೊಂಡು-ಈ ಮೊಸಳೆಯನ್ನು ಹೇಗೆ ತಂದೆ ? ಎಂದು ಗದರಿಸಿ ಕೇಳಲು ವಿಪ್ರನು-ಸಂಚಿಯಲ್ಲಿ