ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ ೧ ನೆಯ ಭಾಗ ಪಂಚತಂತ್ರಾದಿ ಗ್ರಂಥಗಳಿಂದ ಸಂಗ್ರಹಿಸಿದ ಕಥೆಗಳು 1. THE BLIND MAN AND HIS TORCH. ೧, ಕುರುಡನು ದೀವಟಿಗೆಯನ್ನು ಹಿಡಿದುಕೊಂಡು ಬಂದುದು. ಒಂದು ಊರಿನಲ್ಲಿದ್ದ ಒಬ್ಬ ಕುರುಡನು ರಾತ್ರಿವೇಳೆಯಲ್ಲಿ ನೀರು ತುಂಬಿದ ಗಡಿಗೆಯನ್ನು ತಲೆಯ ಮೇಲೆ ಹೊತ್ತು ಕೊಂಡು ಒಂದು ದೀವಟಿಗೆಯನ್ನು ಹಚ್ಚಿಸಿ ಕೈಯ್ಯಲ್ಲಿ ಹಿಡಿದು ಕೊಂಡು ಬರುತ್ತಾ ಇದ್ದನು. ಅವನಿಗೆ ಎದುರಾಗಿ ಬರುವ ಒಬ್ಬ ಮನುಷ್ಯನು ಈ ಮುದುಕನಿಗೆ ಕುರುಡತನವು ಅಲ್ಲದೆ ಹುಚ್ಚು ತನವೂ ಇರುವ ಹಾಗೆ ಕಾಣುತ್ತದೆ. ಒಳ್ಳೆಯದು , ಮಾತಾಡಿಸಿ ನೋಡೋಣ ಎಂದು ಏನಯ್ಯಾ, ಹಳೆಯ ಮನುಷ್ಯನೇ ! ನಿನಗೆ ರಾತ್ರಿ ಹಗಲೂ ಸಹ ಒಂದೇ. ಹೀಗಿರುವಲ್ಲಿ ಈ ದೀವಟಿಗೆಯನ್ನು ಕೈಯ್ಯಲ್ಲಿ ಹಿಡಿದು ಕೊಂಡು ಬರುವುದರಿಂದ ನಿನಗೆ ಪ್ರಯೋಜನ ವೇನು ? ಎಂದು ಕೇಳಿದನು. ಅದಕ್ಕೆ ಆ ಮುದುಕನು--ಅಯ್ಯಾ, ಕೇಳುವ ಮನು ಷ್ಯನೇ ! ಇದರಿಂದ ನನಗೆ ಆಗುವ ಪ್ರಯೋಜನವು ನಿನ್ನೆ ಬುದ್ದಿ ಗೆ ತೋರದಿರುವುದ ರಿಂದ ನಿನ್ನ ಬುದ್ದಿ ಬಹಳ ದಪ್ಪವು ಎಂದು ಎಣಿಸುತ್ತೇನೆ, ಆದರೂ ಹೇಳುವೆನು ; ಕೇಳು ! ದೀವಟಿಗೆಯನ್ನು ಈ ರಾತ್ರಿವೇಳೆಯಲ್ಲಿ ನಾನು ಹಚ್ಚಿಕೊಂಡು ಬಾರದೆ ದ್ದರೆ ನನಗೆ ಎದುರಾಗಿ ಬರುವ ಜನರಾಗಲಿ ದನಕರುಗಳಾಗಲಿ ಕಾಣದೆ ನನ್ನ ”, ಬಿದ್ದರೆ ನಾನು ಗಡಿಗೆಯನ್ನು ಎತ್ತಿಹಾಕಿಕೊಂಡು ಬೀಳುವೆನಲ್ಲ ವೋ ? ಗಿದ್ದರೆ ನನ್ನ ಮೈ ಗಾಯವಾಗುವುದಲ್ಲದೆ ಕಷ್ಟ ಪಟ್ಟು ಹೊತ್ತು ಕೊಂಡು ರೂ ಹೋಗಿ ಕ್ರಯ ಕೊಟ್ಟು ತಂದ ಗಡಿಗೆಯಡಿ ಹೋಗುವುದಿಲ್ಲವೋ ?