ಪುಟ:ಕಥಾಸಂಗ್ರಹ ಸಂಪುಟ ೧.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KANARESE SELECTIONS PART I ನಾನು ದೀವಿಟಿಗೆಯನ್ನು ಹೊತ್ತಿಸಿಕೊಂಡು ಬಂದುದರಿಂದ ಜನರೂ ದನbuಗಳೂ ನನ್ನ ಮೇಲೆ ಬೀಳಲಾರವು ; ನನಗೆ ಒಂದು ಅನರ್ಥವೂ ಉಂಟಾಗ ಲಾರದು ಇದೆಲ್ಲಾ ನನಗೆ ಪ್ರಯೋಜನವಲ್ಲವೇ ? ಇದು ಅಲ್ಲದೆ ಹಾವು ಚೇಳು ಮುಂತಾದುವುಗಳು ನಾನು ಹೋಗುವ ದಾರಿಯನ್ನು ಬಿಟ್ಟು ತೊಲಗಿ ಹೋಗುವುವು. ಎಂದು ಹೇಳಿದ ಮಾತನ್ನು ಕೇಳಿದ ಮನುಷ್ಯನು ಆ ಕುರುಡನ ವಿವೇಕಕ್ಕೆ ಒಪ್ಪಿ ಕೊಂಡು ಹೊರಟುಹೋದನು. 2, THE TIGER AND THE MAN. ೨. ಹುಲಿಯೂ ಮನುಷ್ಯನೂ. ಒಂದು ಊರಿನಲ್ಲಿ ಒಂದು ಹುಲಿಯ ಒಬ್ಬ ಮನುಷ್ಯನೂ ಸ್ನೇಹಿತರಾಗಿ ದ್ದರು. ಅವರು ಒಂದು ದಿನ ಮಾರ್ಗವಶದಿಂದ ಒಂದು ಮಸೀತಿಗೆ ಹೋದರು. ಆ ಮಸೀತಿಯಲ್ಲಿರುವ ಒಂದು ಚಿತ್ರಪಟದಲ್ಲಿ ಒಬ್ಬ ಮನುಷ್ಯನು ಒಂದು ಹುಲಿಯ ಮೇಲೆ ಏರಿಕೊಂಡು ಅದನ್ನು ಕರಾರಿಯಿಂದ ತಿವಿಯುತ್ತಾ ಇರುವ ಆಕಾರವು ಬರೆಯಲ್ಪಟ್ಟಿದ್ದಿತು ಅದನ್ನು ಆ ಮನುಷ್ಯನು ನೋಡಿ--ಅಯ್ಯಾ, ಹುಲಿರಾಯನೇ ! ನೋಡು ; ಈ ಮನುಷ್ಯನು ಎಷ್ಟು ಗಟ್ಟಿಗನು ! ಇಂಥಾ ಕರವಾದ ಹುಲಿಯ ಮೇಲೆ ತಾನು ಹತ್ತಿಕೊಂಡು, ಅದನ್ನು ಕಠಾರಿಯಿಂದ ಇರಿಯುತ್ತಾನೆ ಎಂದು ಹೇಳಲು ; ಅದಕ್ಕೆ ಆ ಹುಲಿಯು--ಈ ಚಿತ್ರವನ್ನು ಮನುಷ್ಯನು ಬರೆದು ಇದ್ದಾನೆ. ಹುಲಿಯು ಎಂದಿಗೂ ಹೀಗೆ ಬರೆಯಲಾಗದು ಎಂದು ಹೇಳಿದುದರಿಂದ ಅವನು ನಾಚಿಕೊಂಡು ಸುಮ್ಮನಾದನು 3. THE MUSSALMAN AND HIS WIFE. ೩, ತುರುಕನೂ ಅವನ ಹೆಂಡತಿಯೂ. ಒಂದು ಹಳ್ಳಿಯಲ್ಲಿ ಒಬ್ಬ ತುರುಕನು ಸಂಸಾರವನ್ನು ಮಾಡಿಕೊಂಡು ಇದ್ದನು. ಹೀಗಿರುವಲ್ಲಿ ಆತನು ಒಂದು ದಿವಸ ಸಾಯಂಕಾಲವಾದ ಮೇಲೆ ಪೇಟೆಗೆ ಹೋಗಬೇಕೆಂದು ಹೊರಟು ಅರ್ಧಮಾರ್ಗವನ್ನು ಬಂದು ಅಲ್ಲಿ ಧಟ್ಟನೆ ನಿಂತು ಕೊಂಡು-ಅಯ್ಯೋ ! ಮೋಸಹೋದೆನು, ನನ್ನ ಹೆಂಡತಿಯು ನಾನು ಬರುವ ತನಕ ಮನೆಯ ದೀಪವನ್ನು ನಂದಿಸದೆ ಉರಿಸಿ ಎಣ್ಣೆಯನ್ನು ಹಾಳುಮಾಡುತ್ತಾಳೋ ? ಹೇಗೋ ? ನಾನು ಬರುವಾಗ ಹೇಳಿ ಬರಲಿಲ್ಲವಲ್ಲಾ ಎಂದು ಯೋಚಿಸಿ ತಿರಿಗಿ ಮನೆಗೆ ಬರುವ ಹೊತ್ತಿಗೆ ಅವನ ಹೆಂಡತಿಯು ಮನೆಯ ಬಾಗಿಲನ್ನು ಹಾಕಿಕೊಂಗ ಮಲಗಿದ್ದಳು. ಈ ತುರುಕನು ಬಾಗಿಲಲ್ಲಿ ನಿಂತು ಏನೇ ! ಏನೇ ! ದೀಪ ನಂದಿಸಿದೆಯೋ ? ಇಲ್ಲ ವೋ ? ಎಂದು ಕೇಳಲು ಅದಕ್ಕೆ ಆಕೆಯು--ನಾನ ನಂದಿಸದೆ ಇದ್ದೇನು ? ನಾನು ಹೆಚ್ಚಳಲ್ಲ, ನನ್ನ ತಂದೆತಾಯಿಗಳು ನನಗೆ