ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ ನೆಯ ಭಾಗ ಬುದ್ದಿ ಕಲಿಸಿದ್ದಾರೆ. ನೀನು ನನ್ನ ಸ್ವಭಾವವನ್ನು ತಿಳಿಯದೆ * ಹೋಗಿ ಹಿಂದಿರುಗಿ ಬಂದು ಜೋಡನ್ನು ವ್ಯರ್ಥವಾಗಿ ಸಮೆಯಿಸಿಬಿಟ್ಟೆ ಯಲ್ಲಾ ಎಂದು ಹೇಳಲು ಅದಕ್ಕೆ ಇವನು ಹೆಂಡತಿಯನ್ನು ಕುರಿತು-ಶಾಬಾಸು ! ನೀನು ಬಹು ಬುದ್ಧಿವಂತಳು ನೀನು ಯೋಚನೆ ಮಾಡಬೇಡ : ಹಿಂತಿರುಗಿ ಬರುವಾಗ್ಗೆ ಸಮೆಯು ತದೆ ಎಂದು ಜೋಡನ್ನು ಕಂಕುಳಲ್ಲಿ ಇಟ್ಟು ಕೊಂಡು ಬಂದಿದ್ದೇನೆಂದು ಸಮಾಧಾನ ಪಡಿಸಿ ತಿರುಗಿ ಪೇಟೆಗೆ ಹೋದನು. 4, THE CUCKoo AND THE ASS. ೪, ಕೋಗಿಲೆಯೂ ಕತ್ತೆಯೂ. ಒಂದಾನೊಂದು ಅರಣ್ಯದಲ್ಲಿರುವ ನೂರಾರು ಕೋಗಿಲೆಗಳು ಒಂದು ಮಾವಿನ ಮರದ ಮೇಲೆ ವಾಸಮಾಡಿಕೊಂಡು ಇದ್ದುವು. ಹೀಗಿರುವಲ್ಲಿ ಒಂದು ಕೋಗಿಲೆಯು ಮೇವಿಗೋಸ್ಕರ ಅಲ್ಲಲ್ಲಿ ತಿರುಗುತ್ತಾ ಇರುವಲ್ಲಿ ಒಂದು ಕಾಗೆಯು ಅದನ್ನು ಕಂಡು ಜಾತಿದ್ವೇಷದಿಂದ ಅಟ್ಟಿಕೊಂಡು ಬರಲು ಕೋಗಿಲೆ ಹೆದರಿ ಹಾರಿಬಂದು ಒಂದು ಹಳ್ಳಿಯಲ್ಲಿರುವ ಒಬ್ಬ ಅಗಸನ ಕೊಟ್ಟಿಗೆಯನ್ನು ಹೊಕ್ಕಿತು ಆಗ ಅಲ್ಲಿ ಕಟ್ಟಿದ್ದ ಕತ್ತೆ ಯು ಈ ಕೋಗಿಲೆಯನ್ನು ನೋಡಿ- ಛೇ ! ಛೇ ! ನೀನು ನನ್ನ ಹತ್ತಿರಕ್ಕೆ ಬರಬೇಡ ; ಅತ್ತ ಹೋಗು ! ನೀನು ಜನ್ಮಾರಭ್ಯ ಒಬ್ಬರಿಗಾದರೂ ಒಂದು ಸಹಾಯವನ್ನೂ ಮಾಡಿ ದವನಲ್ಲ, ನಾನು ನನ್ನ ಶಕ್ತಿ ತಗ್ಗುವವರೆಗೂ ಪರರಿಗೆ ಸಹಾಯವನ್ನೇ ಮಾಡಿಕೊಂ ಡಿದ್ದೇನೆಂದು ಹೇಳಲು ಕೋಗಿಲೆಯು ಕತ್ತೆಯನ್ನು ಕುರಿತು-ನೀನು ಪರರಿಗೆ ಎಷ್ಟು ಸಹಾಯ ಮಾಡಿದರೂ ಕ್ರೂರವಾದ ವಾಕ್ಕುಳ್ಳವನಾದುದರಿಂದ ನಿನ್ನನ್ನು ಎಲ್ಲರೂ ನಿಂದಿಸುತ್ತಾರೆ, ನಾನು ಯಾರಿಗೂ ಉಪಕಾರಮಾಡದೇ ಇದ್ದರೂ ಮಧುರವಾದ ವಾಕ್ಕುಳ್ಳವನಾದುದರಿಂದ ನನ್ನನ್ನು ಎಲ್ಲರೂ ಹೊಗಳುತ್ತಾರೆಂದು ಉತ್ತರವನ್ನು ಕೊಟ್ಟು ಹಾರಿಹೋಗಿ ತನ್ನ ಗುಂಪನ್ನು ಸೇರಿಕೊಂಡಿತು. 5, THE MANTRI APPAJI AND THE SEVENTEEN ELEPHANTS. ೫, ಮಂತ್ರಿ ಅಪ್ಪಾಜಿಯು ವರ್ತಕನ ಮೂರು ಮಂದಿ ಮಕ್ಕಳಿಗೆ ಹದಿನೇಳು ಆನೆಗಳನ್ನು ಪಾಲುಮಾಡಿದುದು. - ವಿಜಯನಗರದಲ್ಲಿ ಮಣಿ ಕಾರನೆಂಬ ಒಬ್ಬ ವರ್ತಕನಿದ್ದನು, ಆತನಿಗೆ ಮೂರು ೦ದಿ ಗಂಡುಮಕ್ಕಳು ಇದ್ದರು. ಆತನು ಸಾಯುವ ಕಾಲದಲ್ಲಿ ತನ್ನ ಮೂರು ಮಕ್ಕಳನ್ನೂ ಕರೆದು-ನಾನು ಹದಿನೇಳು ಆನೆಗಳನ್ನು ಸಂಪಾದಿಸಿದ್ದೇನೆ. ಹಳ ಲಕ್ಷಣಗಳುಳ್ಳ ಆನೆಗಳು. ಇವುಗಳನ್ನು ಯಾರಿಗೂ ಕ್ರಯಕ್ಕೆ ಮಾರ | LL