KANARESE SELECTIONS-PART I .ವನ್ನು ನಡುಕ ಮಗನೂ ಒಂಭತ್ತರಲ್ಲಿ ಒಂದು ಭಾಗವನ್ನು ಕಿರಿಯ ಮಗನ ತೆಗೆದುಕೊಂಡು ಚೆನ್ನಾಗಿ ಆರೈಕೆ ಮಾಡಿಕೊಂಡು ಬನ್ನಿರಿ ; ಮಿಕ್ಕ ಒಡವೆ ವಸ್ತು ಧನ, ಧಾನ್ಯ ಪಂಚಲೋಹ ಪಶ್ಯಾದಿಗಳನ್ನು ಮೂವರೂ ಸಮಭಾಗೆ ವಾಗಿ ಹಂಚಿಕೊಳ್ಳಿರಿ ಎಂದು ಹೇಳಿ, ಸತ್ತು ಹೋದನು. ತರುವಾಯ ಮರು ಮಂದಿ ಮಕ್ಕಳೂ ಆತನಿಗೆ ಉತ್ತರಕ್ರಿಯಾದಿಗಳನ್ನು ಮಾಡಿ ತಂದೆ ಸಂಪಾದಿಸಿದ್ದ ಸಕಲ ಆಸ್ತಿಯನ್ನೂ ಮೂರು ಪಾಲು ಮಾಡಿ ಒಬ್ಬರೊಬ್ಬರು ಒಂದೊಂದು ಪಾಲು ತೆಗೆದುಕೊಂಡು ಆನೆಗಳನ್ನು ತಂದೆ ಹೇಳಿದ್ದ ಪ್ರಕಾರ ಭಾಗಗಳನ್ನು ಮಾಡಿ ತೆಗೆದು ಕೊಳ್ಳುವುದಕ್ಕೆ ತಮಗೆ ತಿಳಿಯದೆ ಈ ವಿಷಯವನ್ನು ಯಾರಲ್ಲಿ ಹೋಗಿ ಹೇಳಿಕೊ೦ ಡರೂ ಪ್ರತಿಯೊಬ್ಬರೂ-ನಮ್ಮಿಂದ ಆಗದು ಎಂದು ಹೇಳಿಬಿಟ್ಟುದರಿಂದ ಇವರು ಬಹಳ ವ್ಯಸನ ಪಡುವವರಾಗಿ ಆನೆಗೊಂದಿ ಸಂಸ್ಥಾನದ ರಾಯರ ಅಪ್ಪಾಜಿ ಎಂಬ ಮಂತ್ರಿಯ ಬಳಿಗೆ ಹೋಗಿ ಹೇಳಿಕೊಳ್ಳಲು ಆತನು ಒಂದು ಗಳಿಗೆ ಆಲೋಚಿಸಿ ಈ ಮೂವ ರನ್ನ ಕುರಿತು-ನಿಮ್ಮ ತಂದೆ ಹೇಳಿದ ಪ್ರಕಾರವೇ ಆನೆಗಳನ್ನು ಭಾಗಮಾಡಿ ಕೊಡು ತೇನೆಂದು ಹೇಳಿ ತಾನು ಒಂದು ಆನೆಯ ಮೇಲೆ ಕುಳಿತುಕೊಂಡು ವಿಜಯನಗರಕ್ಕೆ ಒಂದು-ನಿಮ್ಮ ಹದಿನೇಳು ಆನೆಗಳಜೊತೆಗೆ ನನ್ನದೊಂದು ಆನೆಯನ್ನು ಸೇರಿಸಿಕೊಂಡು ನಿಮ್ಮ ತಂದೆ ಹೇಳಿದಮೇರೆಗೆ ನಿಮ್ಮ ನಿಮ್ಮ ಭಾಗಕ್ಕೆ ಬಂದ ಆನೆಗಳನ್ನು ತೆಗೆದು ಕೊಂಡು ಹೋಗಿರಿ ಎಂದು ಹೇಳಲು ಆನೆಗಳು ಮತ್ತೂ ಹೆಚ್ಚಾದುವು ಎಂದು ಸಂತೋಷಪಟ್ಟು ಕೊಂಡು ಹಿರಿಯ ಮಗನು ಒಂಭತ್ತು ಆನೆಗಳನ್ನೂ ನಡುಕಲವನು ಆರು ಆನೆಗಳನ್ನೂ ಕಿರಿಯವನು ಎರಡು ಆನೆಗಳನನ್ನೂ ತೆಗೆದು ಕೊಂಡು ಹೋದರು, ಆ ಮೇಲೆ ರಾಯರ ಅಪ್ಪಾಜಿಯು ತಾನು ಕೊಟ್ಟು ಇದ್ದ ಆನೆ ಉಳಿದುದರಿಂದ ಅದರ ಮೇಲೆ ಹತ್ತಿ ಕೊಂಡು ಅಲ್ಲಿಂದ ಹೊರಟು ಬಂದು ಆನೆಗೊಂದಿ ಸಂಸ್ಥಾ ನವನ್ನು ಸೇರಿದನು. 6, THE MISERLY MERCHANT AND THE DOCTOR. ೬, ಲೋಭಿಯಾದ ಕೋಮಟಿಗನೂ ವೈದ್ಯನೂ. ಒಂದು ಊರಿನಲ್ಲಿ ಲೋಭಿಯಾದ ಒಬ್ಬ ಕೋಮಟಿಗನು ಇದ್ದನು. ಅವನಿಗೆ ಒಂದು ದಿವಸದ ಪ್ರಾತಃಕಾಲದಲ್ಲಿ ಹೊಟ್ಟೆಯ ಬೇನೆಯು ಬಹಳವಾದುದರಿಂದ ಒಬ್ಬ ವೈದ್ಯನ ಬಳಿಗೆ ಹೋಗಿ-ಅಯ್ಯಾ, ಪಂಡಿತರೇ ! ನಾನು ಹೊಟ್ಟೆಬೇನೆಯಿಂದ ಸಾಯು ತೇನೆ ನನಗೆ ಏನಾದರೂ ಔಷಧವನ್ನು ಕೊಡಿಸಬೇಕೆಂದು ಬಹಳವಾಗಿ ಕೇಳಿಕೊ ಡನು. ಅದಕ್ಕೆ ಆ ವೈದ್ಯನು-ನಿನ್ನೆ ಯ ರಾತ್ರಿಯಲ್ಲಿ ಏನು ತಿಂದೆ ? ಎಂದು ಕೇಳ ಸೀದ ರೊಟ್ಟಿಯನ್ನು ತಿಂದೆನು ಎಂದು ಹೇಳಿದನು. ಆಗ ವೈದ್ಯನು ತನ್ನ ಬೆರಳಿಗೆ ನವನ್ನು ಹಚ್ಚಿಕೊಂಡು, ಆ ಕೋಮಟಿಗನ ಕಣ್ಣುಗಳಿಗೆ ಹಾಕುವುದಕ್ಕೆ ಕೋಮಟಿಗನು-ಪಂಡಿತರೇ ! ನಿಮ್ಮ ಬಳಿಯಲ್ಲಿ ನಾನು ಕಣ್ಣು ಬೇನೆ ಎಂದು?
ಪುಟ:ಕಥಾಸಂಗ್ರಹ ಸಂಪುಟ ೧.djvu/೧೬
ಗೋಚರ