ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ ಳ್ಳಲಿಲ್ಲ ; ಹೊಟ್ಟೆಬೇನೆ ಎಂದು ಹೇಳಿಕೊಂಡು ದಕ್ಕೆ ಹೊಟ್ಟೆಗೆ ಔಷಧ ಕಣ್ಣುಗಳಿಗೆ ಔಷಧವನ್ನು ಹಾಕುವುದಕ್ಕೆ ಬರುತ್ತೀರಿ. ಇದೇನಾಶ್ಚರ ? ಎಂಒ ಕೇಳಿ ದನು, ಅದಕ್ಕೆ ಆ ಪಂಡಿತನು-ನಿನಗೆ ಚೆನ್ನಾಗಿ ಕಣ್ಣು ಕಾಣಿಸುತ್ತಾ ಇದ್ದ ಪಕ್ಷದಲ್ಲಿ ನಿನ್ನೆಯ ರಾತ್ರಿಯಲ್ಲಿ ಸೀದ ರೊಟ್ಟಿಯನ್ನು ತಿನ್ನು ತ್ತಾ ಇರಲಿಲ್ಲ. ಆದು ದರಿಂದ ನಿನ್ನ ಕಣ್ಣುಗಳಿಗೆ ಪರೆ ಮುಚ್ಚಿ ಕೊಂಡಿದೆ. ಅದು ಪರಿಹಾರವಾಗುವಂತೆ ಚಿಕೆತ್ಸೆಯನ್ನು ಮಾಡಿದರೆ ಪದಾರ್ಥಗಳನ್ನು ಚೆನ್ನಾಗಿ ನೋಡಿ ತಿನ್ನು ವಿ. ಆ ಮೇಲೆ ಹೊಟ್ಟೆ ಬೇನೆ ಬರಲಾರದು ಎಂದು ಹೇಳಿದನು. ಆಗ ಕೋಮಟಿಗನು ನಾಚಿಕೊಂಡು ಮನೆಗೆ ಹೋದನು. 7, THE GREEDY JACKAL. - ೭. ನರಿಯು ಲೋಭ ಬುದ್ದಿ ಯಿಂದ ಸತ್ತುದು, ಗೊಂಡಾರಣ್ಯದಲ್ಲಿ ಭೈರವನೆಂಬ ಒಬ್ಬ ಬೇಡನು ಇರುವನು, ಅವನು ಒಂದು ದಿವಸ ಬೇಟೆಯನ್ನು ಆಡುವಾಗ ಒಂದು ಹುಲ್ಲೇಕರುವನ್ನು ಹೊಡೆದನು, ಅದನ್ನು ತೆಗೆದುಕೊಂಡು ಮಾರ್ಗದಲ್ಲಿ ಬರುತ್ತಾ ಒಂದು ದೊಡ್ಡ ಕಾಡು ಹಂದಿಯನ್ನು ಕಂಡು ಕೈಯ್ಯಲ್ಲಿದ್ದ ಸತ್ತ ಹುಲ್ಲೆಯನ್ನು ಕೆಳಗೆ ಇಟ್ಟು ಬಿಲ್ಲಿಗೆ ಅಂಬನ್ನೇರಿಸಿ ಹಂದಿ ಯನ್ನು ಹೊಡೆದನು, ಅದು ಆ ಪೆಟ್ಟನ್ನು ಹೊಂದಿ ಕೋಪದಿಂದ ವೇಗವಾಗಿ ಓಡಿ ಬಂದು ಈ ಬೇಡನ ಮೇಲೆ ಬಿದ್ದಿತು. ಆಗ ಮೊನೆಯಾದ ಅದರ ಕೋರೆದಾಡೆಗಳ ಇರಿತದಿಂದ ಬೇಡನ ಹೊಟ್ಟೆ ಯು ಸೀಳಿಹೋಗಿ ಅವನು ಕೆಳಗೆ ಬಿದ್ದು ಸತ್ತನು. ಈ ಹಂದಿ ಬೇಡ ಇವರಿಬ್ಬರ ಹೊಡೆದಾಟದಲ್ಲಿ ಅಕಸ್ಮಾತ್ತು ಸಿಕ್ಕಿದ ಒಂದು ಹಾವು ಕೂಡಾ ಸತ್ತು ಹೋಯಿತು, ಆ ಸಂದರ್ಭದಲ್ಲಿ ದೀರ್ಘರಾವನೆಂಬ ಒಂದು ಗುಳ್ಳೆನರಿಯು ಅಶ ನಾರ್ಧಿಯಾಗಿ ಬರುತ್ತಾ ಬಿದ್ದಿರುವ ಈ ಶವಗಳನ್ನು ಕಂಡು-ಆಹಾ! ನನಗೆ ಆರು ತಿಂಗಳಾಹಾರವು ಸಿಕ್ಕಿತು. ಈ ಹಾವಿನಿಂದ ಒಂದು ದಿವಸದ ಆಹಾರವು; ಈ ಹುಲ್ಲೇ ಕರುವಿನಿಂದ ಒಂದು ತಿಂಗಳಿನ ಆಹಾರವು ; ಈ ಹಂದಿಯಿಂದ ಎರಡು ತಿಂಗಳಹಾ ರವು ! ಈ ಮನುಷ್ಯನಿಂದ ಮೂರು ತಿಂಗಳಾಹಾರವು ಆಗುತ್ತದೆ. ಈ ದಿನದ ಮಟ್ಟಿಗೆ ಈ ಬಿಲ್ಲಿನ ನರದ ಹೆದೆಯನ್ನು ಕತ್ತರಿಸಿ ತಿಂದು ಕಾಲಕ್ಷೇಪವನ್ನು ಮಾಡುತ್ತೇನೆ. ನಾಳಿನ ದಿವಸದಿಂದ ಹಾವು ಹುಲ್ಲೆ ಹಂದಿ ಮನುಷ್ಯ ಇವರನ್ನು ಪಾಜ್ಯವಾಗಿ ತಿನ್ನು ನೆನೆಂದು ನಿಶ್ಚಯಿಸಿ ಬಿಲ್ಲಿನ ಹೆದೆಯನ್ನು ಕಡಿಯಲು ಅದು ಕಿತ್ತು ಹೋದುದ ರಿಂದ ಬಿಲ್ಲಿನ ಕಪ್ಪು ಸಿಡಿದುಬಂದು ಕೊರಳಿಗೆ ಬಡಿಯಲು ನರಿಯು ಸತ್ತುಹೋ। ಮಿತು. ಈ ರೀತಿಯಿಂದ ದೇವರು ಕೊಟ್ಟ ೦ಥಾ ಕಾಲದಲ್ಲಿ ಹೆಡ್ಡರು ಲೋಭಬುದ್ದಿ »ದ ಉಣ್ಣದೆ ಉಡದೆ ಕೊಡದೆ ದ್ರವ್ಯವನ್ನು ಕೂಡಿಸಿ ಹೂಣಿಟ್ಟು `ವರು.