KANARESE SELECTIONS-PART I THE BRAHMAN, SON, AND GRANDFATHER. ೮, ತಂದೆಯು ಮಗನು ಮತ್ತು ಅಜ್ಞನು. ಒಂದು ಊರಿನಲ್ಲಿ ಒಬ್ಬ ಬ್ರಾಹ್ಮಣನು ಇದ್ದನು, ಆತನಿಗೆ ಬಹಳ ಮುದುಕ ನಾದ ತಂದೆಯ ಒಬ್ಬ ಚಿಕ್ಕಮಗಳೂ ಇದ್ದರು. ಈ ಬ್ರಾಹ್ಮಣನು ಪ್ರತಿದಿನದಲ್ಲಿಯ ಅನ್ನ ಸಾರು ಕಾಯಿ ಪಲ್ಯ ಮುಂತಾದುದನ್ನು ಮಾಡಿ ಮಗನಿಗೆ ಬಡಿಸಿ ತಾನೂ ಬಡಿಸಿಕೊಂಡು ಉಂಡಮೇಲೆ ಆ ಅನ್ನ ದಿಂದ ಬಸಿದ ಗಂಜೆಯನ್ನು ಒಂದು ಬಕ್ಕರೆಗೆ ಹಾಕಿ ಆ ಮುದುಕನಾದ ತಂದೆಗೆ ಕುಡಿಸುತ್ತಾ ಇದ್ದನು ಇದನ್ನು ಆ ಚಿಕ್ಕ ಹುಡುಗನು ಕಂಡು-ಅಯ್ಯೋ ! ಮುದುಕನಾದ ಅಜ್ಜಯ್ಯನಿಗೆ ಬುದ್ದಿ ಇಲ್ಲದ ಈ ನನ್ನ ತಂದೆಯು ಹೀಗೆ ಮಾಡುತ್ತಾನಲ್ಲಾ ! ಈ ದುಷ್ಕೃತ್ಯವನ್ನು ತಪ್ಪಿಸುವುದು ಹೇಗೆ ? ಎಂದು ಯೋಚಿಸಿ ಒಂದು ದಿವಸ ಆ ಗಂಜೇ ಹಾಕುತ್ತಿದ್ದ ಬಕ್ರರೆಯನ್ನು ತಂದೆ ಕಾಣದಂತೆ ಒಂದು ಕಡೆಯಲ್ಲಿ ಬಚ್ಚಿಟ್ಟನು, ಬ್ರಾಹ್ಮಣನು ಎಂದಿನಂತೆ ತಾನು ಮಗನು ಸಹ ಉಂಡಮೇಲೆ ತಂದೆಗೆ ಗಂಜಿಯನ್ನು ಕುಡಿಸುವುದಕ್ಕೆ ಬಕ್ಕರೆಯನ್ನು ಇಟ್ಟ ಬಳಿಯಲ್ಲಿ ನೋಡಿದನು, ಅದು ಅಲ್ಲಿ ಇಲ್ಲದುದರಿಂದ ಅವನು--ಬಕ್ಕರೆಯನ್ನು ಎಲ್ಲಿ ಹಾಳುಮಾಡಿದೆ ? ಎಂದು ಮುದುಕನಾದ ತಂದೆಯನ್ನು ಬೈದು ಹೊಡೆಯುತ್ತಾ ಇರುವಲ್ಲಿ ಈ ಚಿಕ್ಕ ಹುಡುಗನು-ಅಪ್ಪಾ ! ಅಪ್ಪಾ ! ಅಜ್ಜಯ್ಯನನ್ನು ಏಕೆ ಬೈ ಯು ? ಎಂದು ಕೇಳಲು ನೋಡು, ಹುಡುಗನೇ ! ಮುಂದಣ ಯೋಚನೆ ಇಲ್ಲದ ಇವನು ಗಂಜೆಯ ಬಕ್ಕರೆಯನ್ನು ಎಲ್ಲಿಯೋ ಹಾಳು ಮಾಡಿದನು, ಮತ್ತೊಂದು ಬಕ್ಕ ರೆಯನ್ನು ಎಲ್ಲಿಂದ ತರಲಿ ? ಎಂದು ಹೇಳಿದನು, ಆಗ ಆ ಹುಡುಗನು-ಆ ಬಕ್ಕರೆ ಯನ್ನು ಅಜ್ಜಯ್ಯನು ಹಾಳು ಮಾಡಲಿಲ್ಲ, ನೀನು ಮುದುಕನಾದಾಗ್ಗೆ ನಿನಗೆ ಗಂಜಿ ಯನ್ನು ಎರೆಯುವುದಕ್ಕೆ ನಾನು ಬೇರೆ ಬಕ್ಕರೆಯನ್ನು ಎಲ್ಲಿಂದ ತರಲಿ ? ಎಂದು ನಾನೇ ಅದನ್ನು ಬಚ್ಚಿಟ್ಟಿದ್ದೇನೆಂದು ಹೇಳಲು ಆ ಮಾತನ್ನು ಕೇಳಿದ ಮಾತ್ರದಿಂದಲೇ ಬ್ರಾಹ್ಮಣನಿಗೆ ಬುದ್ದಿ ಯುಂಟಾಗಿ ತಂದೆಯನ್ನು ಆ ದಿನ ಮೊದಲು ಚೆನ್ನಾಗಿ ಆರೈಕೆ ಮಾಡಿದನು. 9, THE JAMEDAR AND THE THIEF. ೯, ಜಮೇದಾರನಿಗೆ ಕಳ್ಳನು ಮೋಸಮಾಡಿದುದು. ಒಂದು ಪಟ್ಟಣದಲ್ಲಿ ಒಬ್ಬ ಜಮೇದಾರನು ಇಪ್ಪತ್ತು ಕುದುರೆಗಳನ್ನು ಸಾಕಿ ಕಟ್ಟಿಕೊಂಡಿದ್ದನು. ಆ ಕುದುರೆಗಳನ್ನು ಕದಿಯಬೇಕು ಎಂದು ಒಬ್ಬ ಕಳ್ಳನು ಬಹಳ ದಿವಸದಿಂದ ಸಾಧಿಸಿಕೊಂಡೇ ಇದ್ದನು. ಒಂದು ದಿವಸ ಅರ್ಧರಾತ್ರಿಯಲ್ಲಿ ಆ ಕಳ್ಳ; ಬಂದು ಕುದುರೆಯ ಆಗಾಡಿ ವಿಚಾಡಿಯ ಹಗ್ಗಗಳನ್ನು ಕೊಯ್ಯುತ್ತಾ ಇಗ | ಆ ಜಮೇದಾರನ ಕಡೆಯ ಆಳುಗಳು ಕಂಡು ಹಿಡಿದು ಹಿಂಗಟ್ಟು ಕಟ್ಟಿ ತಮ್ಮ ಧಣಿಯ ಬಳಿಗೆ ಕರೆದು ಕೊಂಡು ಹೋಗಿ--ಈ ಕಳ್ಳನು ಕುದುರೆಯ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೮
ಗೋಚರ