ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ ಯುತ್ತಾ ಇದ್ದನು. ಇದೋ ! ಹಿಡಿದು ತಂದು ಇದ್ದೇವೆ ಎಂದು ಜಮೇದಾರನು ಈ ಕಳ್ಳನನ್ನು ನೋಡಿ.-ಎಲೋ, ಕಳ್ಳನೇ ! ನಿನಗೆ ಒರು. ವಿದ್ಯೆಯನ್ನು ನನಗೆ ಕಲಿಸಿಕೊಟ್ಟರೆ ನಿನ್ನನ್ನು ಬಿಟ್ಟುಬಿಡುತ್ತೇನೆ. ಇಲ್ಲದಿದ್ದರೆ ಬೇಡೀ ಹಾಕಿಸುತ್ತೇನೆ ಎಂದು ಹೇಳಿದನು, ಅದಕ್ಕೆ ಆ ಕಳ್ಳನು--ಸ್ವಾಮಿಾ, ಜಮೇದಾರರೇ ! ಅದು ಎಷ್ಟರ ಕೆಲಸ ? ನಾಳಿನ ಪ್ರಾತಃಕಾಲಕ್ಕೆ ಅದನ್ನು ತಮಗೆ ಕಲಿಸಿಕೊಡುತ್ತೇನೆ ಎಂದು ಹೇಳಲು ಜಮೇದಾರನು ಬಹಳ ಸಂತೋಷಪಟ್ಟು-ಈ ಕಳ್ಳನಿಗೆ ಊಟ ಉಪಚಾರಗಳನ್ನು ಮಾಡಿಸಿ ರಾತ್ರಿಯೆಲ್ಲಾ ಪಹರೆಯಲ್ಲಿ ಇಟ್ಟು ಕೊಂಡು ಇದ್ದು ಬೆಳ ಗಾಗುತ್ತಲೇ ಕರೆದುತನ್ನಿರಿ ಎಂದು ಆಳುಗಳಿಗೆ ಅಪ್ಪಣೆ ಕೊಡಲು ಅವರು ಅದೇ ಪ್ರಕಾರ ಮಾಡಿದರು. ಆಗ ಆ ಕಳ್ಳನನ್ನು ಕುರಿತು - ಎಲ್ಲಿ ? ಕಳ್ಳತನವನ್ನು ಕಲಿಸು ಎಂದು ಕೇಳಲು ಕಳ್ಳನು ಆ ಕುದುರೆಗಳಲ್ಲಿ ಒಂದು ಒಳ್ಳೆಯ ಕುದುರೆಗೆ ಜೇನು ಕಟ್ಟಿಸಿ ತಾನು ಅದರ ಮೇಲೆ ಹತ್ತಿ ಕೊಂಡು--ಅಯ್ಯಾ, ಜಮೇದಾರರೇ ! ನೋಡಿ ; ಹೀಗೆಯೇ ಕಳ್ಳತನವನ್ನು ಮಾಡುವುದು ಎಂದು ನಾಗಾಲು ಓಟವನ್ನು ಓಡಿಸಿಕೊಂಡು ಹೋದನು. ಜಮೇದಾರನು ಎಷ್ಟು ಜನರನ್ನು ಬೆನ್ನಟ್ಟಿ ಓಡಿಸಿದಾಗ ಕಳ್ಳನು ಅವರಿಗೆ ಸಿಕ್ಕದೆ ಹೋದುದರಿಂದ ಮೋಸವಾಯಿತು ಎಂದು ಬಹಳ ಪಶ್ಚಾತ್ತಾಪವನ್ನು ಹೊಂದಿದನು. 10, THE SNAKE-CHARMER, SNAKE AND RAT. ೧೦ ಹಾವಾಡಿಗನೂ ಹಾವೂ ಇಲಿಯೂ. ಒಬ್ಬ ಹಾವಾಡಿಗನು ಅಡೈಕಟ್ಟಿ ಅದರಲ್ಲಿ ಹಾವುಗಳ ಬುಟ್ಟಿಗಳನ್ನು ಇರಿಸಿ ಅದನ್ನು ಹೊತ್ತು ಕೊಂಡು ಒಂದು ಊರಿಗೆ ಹೋಗಿ ಹಾವುಗಳನ್ನು ಆಡಿಸಿ ದವಸ ಧಾನ್ಯ ದುಡ್ಡು ಕಾಸುಗಳನ್ನು ಸಂಪಾದಿಸಿಕೊಂಡು ಬರಬೇಕೆಂದು ಹೊರಟು ಬರುವ ದಾರಿಯಲ್ಲಿ ಒಂದು ನಾಗರಹಾವು ಇವನು ಕಾಣುವಂತೆ ಹುತ್ತವನ್ನು ಹೊಕ್ಕು ದರಿಂದ ಈ ಹಾವಾಡಿಗನು ಆ ಹುತ್ತವನ್ನು ಅಗಿದು ಅದನ್ನು ಹಿಡಿದು ಒಂದು ಪುಟ್ಟಿಯಲ್ಲಿ ಇಟ್ಟು ಮುಚ್ಚಳವನ್ನು ಹಾಕಿ ಪೂರ್ವದಂತೆ ಹೋಗಿ ಮತ್ತೊಂದು ಊರಿನ ಒಂದು ಗುಡಿಯಲ್ಲಿ ಇಳಿದು ಕೊಂಡನು ಮಾರನೆಯ ದಿವಸ ಆ ಹಾವಾಡಿಗನಿಗೆ ಮಾರ್ಗ ಯಾಸದಿಂದ ಚಳಿಯ ಜ್ವರವೂ ಬಂದು ಎರಡು ಮೂರು ದಿವಸ ಅಲ್ಲಿಯೇ ಬಿದ್ದು ಕೊಂಡು ಇದ್ದು, ಹೊಸದಾಗಿ ಹಿಡಿದಹಾವು ಬುಟ್ಟಿಯಲ್ಲಿ ಸಿಕ್ಕಿ ಕೊಂಡು--ಅಯೊ ದೇವರೇ ! ಇಂಥಾ ಸಂಕಟವನ್ನು ಕೊಟ್ಟೆಯಾ ? ಮೂರು ದಿವಸದಿಂದ ಆಹಾರವಿಲ್ಲದೆ ಸಾಯುವ ದುರವಸ್ಥೆಯು ಬಂದಿತಲ್ಲಾ ! ಇನ್ನೇನು ಗತಿ ? ಎಂದು ಯೋಚಿಸುತ್ತಿರುವ ವೇಳೆಯಲ್ಲಿಯೇ ಆ ಗುಡಿಯ ಬಿಲದಲ್ಲಿ ಇದ್ದ ಒಂದು ಇಲಿಯು ರಾತ್ರಿಯಾದುದರಿಂದ '೧ರಗೆ ಬಂದು ಈ ಬುಟ್ಟಿಯನ್ನು ನೋಡಿ-ಓಹೋ ! ಈ ದಿನ ನನಗೆ ಒಳ್ಳೆಯ ರ ದೊರಕಿತು. ಈ ಬುಟ್ಟಿಯಲ್ಲಿ ಯಾವುದೋ ಒಂದು ವಿಧವಾದ ಧಾನ್ಯವು ರುವುದು ಇದಕ್ಕೆ ತೂತು ಮಾಡಿ ಒಳಹೊಕ್ಕು ಧಾನ್ಯವನ್ನು ತಿಂದು ಜೀವಿ ೦ದು ಆಲೋಚಿಸಿ ಆ ಪ್ರಕಾರವೇ ಮಾಡಿ ಒಳಹೊಕ್ಕಿತು. ತತ್ ಕ್ಷಣದಲ್ಲಿಯೇ