ಪುಟ:ಕಥಾಸಂಗ್ರಹ ಸಂಪುಟ ೧.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KANARESE SELECTIONS-PART I tv. ತುತ್ತಾ ಇದ್ದ ಹಾವು-ದೇವರು ನನಗೆ ಆಹಾರವನ್ನು ಕೊಟ್ಟನು ಎಂದು .ಎಂದ ಆ ಇಲಿಯನ್ನು ಹಿಡಿದು ನುಂಗಿ ಹೊಟ್ಟೆ ಯನ್ನು ತುಂಬಿಸಿಕೊಂಡು ಆ ಇಲಿ ಕೊರೆದು ಇದ್ದ ಕನ್ನದಿಂದಲೇ ಹೊರಟು ಬಂದು ಒಂದು ಹುತ್ತವನ್ನು ಸೇರಿಕೊಂಡಿತು. 11. THE DOVES, FOWLER, FALCON, AND SNAKE. ೧೧, ಪಾರಿವಾಣದ ಹಕ್ಕಿಯೂ ಬೇಡನೂ ಗಿಡಗನೂ ಹಾವೂ. ಒಂದಾನೊಂದು ಅರಣ್ಯದಲ್ಲಿ ಒಂದು ಅರಳಿಯ ಮರವಿತ್ತು, ಅದರ ಮೇಲೆ ಒಂದು ಗಂಡು ಪಾರಿವಾಣದ ಹಕ್ಕಿಯ ಒಂದು ಹೆಣ್ಣು ಪಾರಿವಾಣದ ಹಕ್ಕಿಯ ಸ್ನೇಹವಾಗಿ ಬಹಳ ದಿವಸದಿಂದ ವಾಸಮಾಡಿಕೊಂಡಿದ್ದು ವು. ಹೀಗಿರುವಲ್ಲಿ ಒಂದು ದಿವಸ ಹೆಣ್ಣು ಹಕ್ಕಿಯು ಗಂಡುಹಕ್ಕಿಯನ್ನು ಕುರಿತು ಎಲೈ ನಾಧನೇ ! ಈಗ ನಮ್ಮಿಬ್ಬರಿಗೂ ಸಾಯುವ ಕಾಲವು ಬಂದು ಇದೆ. ಅದು ಹೇಗೆಂಬೆಯಾ ? ಇದೊ ! ನೋಡು; ಈ ಮರದ ಕೆಳಗೆ ಒಬ್ಬ ಬೇಡನು ಬಿಲ್ಲಿಗೆ ಹೆದೆಯನ್ನು ಏರಿಸಿ ಅದರಲ್ಲಿ ಅಂಬನ್ನು ತೊಡಿಸಿ ನಮ್ಮಿಬ್ಬರನ್ನೂ ಹೊಡೆಯುವುದಕ್ಕೆ ಎಡದ ಮಂಡಿಯನ್ನು ಭೂಮಿಯಲ್ಲಿ ಊರಿ ಗುರಿಯನ್ನು ಕಟ್ಟುತ್ತಿದ್ದಾನೆ. ಇದನ್ನು ತಪ್ಪಿಸಿಕೊಳ್ಳುವುದ ಕ್ಕಾಗಿ ಮೇಲಕ್ಕೆ ಹಾರಿದರೆ ಹಾರಿದ ಕ್ಷಣದಲ್ಲಿಯೇ ನಮ್ಮಿಬ್ಬರನ್ನೂ ಕಚ್ಚಿ ತಿಂದು ಬಿಡಬೇಕೆಂದು ಒಂದು ಗಿಡಗವು ಮರದ ಮೇಲೆ ಮಂಡಲಾಕಾರವಾಗಿ ಸುತ್ತುತ್ತಾ ಇದೆ. ಇಂಥಾ ವಿಪತ್ತಿನಲ್ಲಿ ನಾವು ಬದುಕುವುದು ಹೇಗೆ ? ಎಂದು ದುಃಖಿಸುತ್ತಾ ಅದಕ್ಕೆ ಹೇಳಲು ಗಂಡುಹಕ್ಕಿಯು-ಎಲೆ, ಪ್ರಿಯೇ ! ಏಕೆ ಯೋಚನೆಮಾಡು ಯೇ ? ದೇವರ ದಯೆಯಿದ್ದರೆ ಬೆಟ್ಟದಹಾಗೆ ಬಂದ ಆಪತ್ತುಗಳು ಮಂಜಿನ ಹಾಗೆ ಹಾರಿ ಹೋಗುವುವು ; ಈ ಅಸಾಧ್ಯ ಕಾರ್ಯಕ್ಕೆ ನಾವ್ರ ವ್ಯಸನಪಟ್ಟರೆ ಪ್ರಯೋಜನವೇನು ? ದೇವರು ಮಾಡಿದುದಾಗಲಿ ; ಧೈರದಿಂದ ಇರು ಎಂದು ಹೇಳು ತಾ ಇರುವ ಸಮಯದಲ್ಲಿ ಒಂದು ನಾಗರಹಾವು ಬಂದು ಮರದ ಕೆಳಗೆ ಇರುವ ಬೇಡನ ಕಾಲಿನ ಹಿಮ್ಮಡಿಯನ್ನು ಕಚ್ಚಿ ತು, ಅದರ ವಿಷವೇರಿ ಈ ಬೇಡನು ತಬ್ಬಿ ಬ್ಯಾಗಿ ಬಾಣವನ್ನು ಬಿಟ್ಟನು. ಆ ಬಾಣವು ಗುರಿತಪ್ಪಿ ಹೋಗಿ ಇವುಗಳನ್ನು ತಿನ್ನ ಬೇಕೆಂದು ಮೇಲೆ ಸುತ್ತುತ್ತಾ ಇದ್ದ ಗಿಡಗನಿಗೆ ತಗುಲಲು ಅದು ಸತ್ತು ಕೆಳಗೆ ಬಿದ್ದಿತು. ಹಾವಿನ ವಿಷವು ತಲೆಗೇರಿ ಈ ಬೇಡನೂ ಸತ್ತು ಬಿದ್ದನು ದೇವರ ದಯೆ ಯಿಂದ ಎರಡು ಗಂಡಗಳೂ ತಪ್ಪಿ ಎರಡು ಪಾರಿವಾಣದ ಹಕ್ಕಿಗಳೂ ಬದುಕಿ ಕೊಂಡುವು.