ಪುಟ:ಕಥಾಸಂಗ್ರಹ ಸಂಪುಟ ೧.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ ನೆಯ ಭಾಗ 12. THE UNCORRECTED SON. ೧೨. ತಂದೆ ಶಿಕ್ಷಿಸದ ಮಗ. ಲೀಲಾವತಿ ಎಂಬ ಪಟ್ಟಣದಲ್ಲಿ ಹೆದ್ದ ಭಟ್ಟನೆಂಬ ಜೋಯಿಸನು ಇದ್ದನು. ಅವನಿಗೆ ನಾಲ್ಕು ವರುಷದ ಒಬ್ಬ ಮಗನಿದ್ದನು, ಮತ್ತೊಂದು ಗ್ರಾಮದಲ್ಲಿರುವ ತನ ನೆಂಟರ ಮನೆಯಲ್ಲಿ ನಡೆಯುವ ವಿವಾಹಕಾರ್ಯಕ್ಕಾಗಿ ಹೆಂಡತಿಯನ್ನೂ ಮಗ ನನ್ನೂ ಕರೆದುಕೊಂಡು ಹೋಗಿ ಪ್ರಸ್ತವನ್ನು ಬೆಳೆಸಿಕೊಂಡು ತಿರುಗಿ ಪಟ್ಟಣಕ್ಕೆ ಬರುವಾಗ ಮಗನನ್ನು ತನ್ನ ಹೆಗಲಿನ ಮೇಲೆ ಕುಳ್ಳಿರಿಸಿಕೊಂಡು ಬರುತ್ತಾ ಇದ್ದನು. ಆ ದಾರಿಯಲ್ಲಿಯೇ ಕೆಲವರು ಆ ಪಟ್ಟಣದ ಸಂತೆಯಲ್ಲಿ ಮಾರುವುದಕ್ಕಾಗಿ ಗೂಡೆ ಯಲ್ಲಿ ಬಾಳೆಯ ಹಣ್ಣುಗಳನ್ನು ತುಂಬಿ ಹೊತ್ತು ಕೊಂಡು ಹೋಗುತ್ತಾ ಇದ್ದರು. ಈ ಜೋಯಿಸನ ಹೆಗಲಿನ ಮೇಲೆ ಕುಳಿತಿದ್ದ ಹುಡುಗನ ಕೈಗೆ ಮುಂದೆ ಹೋಗುವವನ ಬಾಳೆಯ ಹಣ್ಣಿನ ಗೋಡೆಯು ಎಟಕಿದುದರಿಂದ ಒಂದು ಚಿಪ್ಪು ಬಾಳೆಯ ಹಣ್ಣನ್ನು ತೆಗೆದುಕೊಂಡು ತಾನು ಹೊದೆದಿದ್ದ ಒಲ್ಲಿಯ ಒಳಗೆ ಅದನ್ನು ಬಚ್ಚಿಟ್ಟು ಕೊಂಡಿದ್ದು ಜೋಯಿಸನು ಮನೆಗೆ ಹೋಗಿ ಮಗನನ್ನು ಇಳಿಸಿದಾಗ-ಅಪ್ಪಾ, ಇದೊ ! ಬಾಳೆಯ ಹಣ್ಣು ! ಇದನ್ನು ಸಂತೆಗೆ ಹೋಗುವವರ ಗೂಡೆಯಿಂದ ತೆಗೆದು ಕೊಂಡು ಬಚ್ಚಿಟ್ಟು ಕೊಂಡಿದ್ದನು ಎಂದು ತೋರಿಸಲು ತಂದೆಯು-ಶಾಬಾಸು, ಹುಡುಗಾ ! ಎಂದು ತಬ್ಬಿ ಕೊಂಡು ಮುದ್ದಾಡಿದನು. ಆ ಹುಡುಗನು.ತಂದೆ ಸಂತೋಷ ಪಟ್ಟನು ; ಇದು ಒಳ್ಳೆಯ ಕೆಲಸ ಎಂದು ಎಣಿಸಿ ಅಂದಿನಿಂದ ನೆರೆಹೊರೆಯವರ ಮನೆ ಗಳಲ್ಲಿ ಸಿಕ್ಕಿದ ಪದಾರ್ಥಗಳನ್ನು ಕದ್ದು ಕೊಂಡು ಒರುತ್ತಾ ಇದ್ದು ಪ್ರಾಯಸ್ಥ ನಾದಮೇಲೆ ಒಂದು ದಿನ ದೊರೆಯ ಅರಮನೆಗೆ ನುಗ್ಗಿ ವಜ್ರ ಪಡಿಯ ನಗಗಳನ್ನು ಕದ್ದು ಕೊಂಡು ಬರುವಲ್ಲಿ ಕಾವಲಿನವರು ಅವನನ್ನು ಒಡವೆಸಹಿತ ಹಿಡಿತಂದು ಅರಸಿಗೆ ಒಪ್ಪಿಸಿದರು, ಅರಸನು-ಸಂಕೋಲೆಹಾಕಿ, ಇವನನ್ನು ಸೆರೆಯಲ್ಲಿ ಇಡಿ ಎಂದು ಅಪ್ಪಣೆ ಕೊಟ್ಟನು. ಆಗ ಈ ಹುಡುಗನು--ನನಗೆ ಸಂಕೋಲೆಹಾಕ ಕೂಡದು ; ನಮ್ಮಪ್ಪನಿಗೆ ಹಾಕಬೇಕು ಎನಲು ಅರಸನು-ನೀನು ಕದ್ದರೆ ನಿಮ್ಮಪ್ಪನಿಗೆ ಏಕೆ ಹಾಕಬೇಕೆಂದು ಕೇಳಿದನು. ಅದಕ್ಕೆ ನಾನು ಚಿಕ್ಕವನಾಗಿರುವಾಗ ಬಾಳೆಯ ಹಣ್ಣನ್ನು ಕದ್ದು ನನ್ನ ತಂದೆಗೆ ತೋರಿಸಿದೆನು ; ಅವನು ಹೊಗಳಿ ನನ್ನನ್ನು ತಬ್ಬಿ ಕೊಂಡು ಮುದ್ದಾಡಿದುದರಿಂದ ಇದು ಒಳ್ಳೆಯ ಕೆಲಸವೆಂದು ತಿಳಿದು ನಾನು ಹೀಗೆ ಕದಿಯುತ್ತಾ ಬಂದೆನು. ಇಂಥಾ ಕೆಲಸವನ್ನು ಏಕೆ ಮಾಡಿದೆ ? ಎಂದು ಆ ದಿವಸವೇ ಆತನು ಬೈದು ಎರಡು ಪಟ್ಟು ಹೊಡೆದು ಇದ್ದಲ್ಲಿ ನಾನು ಯಾವಾಗಲೂ ಕದಿಯುತ್ತಿರಲಿಲ್ಲ. ಆದುದರಿಂದ ಈ ತಪ್ಪ ನಮ್ಮ ತಂದೆಯದು, ಆತನಿಗೆ ಶಿಕ್ಷೆಮಾಡ `ಕೆಂದು ಹೇಳಿದೆನೆನಲು ಅರಸು ಆ ಹುಡುಗನ ಮಾತಿಗೆ ಮೆಚ್ಚಿ ಅವನ ತಂದೆಯನ್ನು - ಅವನಿಗೆ ಹುಡುಗನು ಹೇಳಿದ ಮಾತನ್ನು ಹೇಳಿ ಹೀಯಾಳಿಸಿ ವಿವೇಕವನ್ನು `ಸಿ ಹುಡುಗನನ್ನು ಅವನ ವಶಕ್ಕೆ ಕೊಟ್ಟು ಕಳುಹಿಸಿದನು. ಆದುದರಿಂದ