10 KANARESE SELECTIONS-PARTI ತಂದೆತಾಯಿಗಳು ತಮ್ಮ ಮಕ್ಕಳು ಕೆಟ್ಟ ಕೆಲಸವನ್ನು ಮಾಡಿದರೆ ಅವರನ್ನು ಚಿಕ್ಕಂದಿ ದಲೇ ಶಿಕ್ಷಿಸುತ್ತಾ ಬರಬೇಕು. 13. THE IMAGINARY DEMON. ೧೩, ಅಡುಗೂಲಜ್ಜಿ ಯು ಘಂಟಾಕರನನ್ನು ಓಡಿಸಿದುದು. - ವಿದ್ಯಾನಗರದಲ್ಲಿ ವೇದಸಿಂಧು ಎಂಬ ಒಬ್ಬ ಅರಸು ಇರುವನು ಆ ಪಟ್ಟಣದ ಪ್ರಜೆಗಳು ಅಲ್ಲಿ ಒಂದು ಪ್ರದೇಶದಲ್ಲಿ ಘಂಟಾಕರನೆಂಬ ಒಬ್ಬ ಬ್ರಹ್ಮರಾಕ್ಷಸನು ಇದ್ದು ಕೊಂಡು ಜನರನ್ನು ಬಾಧಿಸುತ್ತಾನೆಂಬ ವರ್ತಮಾನವನ್ನು ಗತಾನು ಗತಿಕವಾಗಿ ಕೇಳಿ ಹೆದರಿಕೊಂಡಿದ್ದರು. ಅಲ್ಲದೆ ಈ ಸುದ್ದಿಯು ಅರಸಿಗೂ ತಿಳಿದಿತ್ತು, ಹೀಗಿರು ವಲ್ಲಿ ಆ ಪಟ್ಟಣದ ಸಮೀಪದಲ್ಲಿರುವ ಕಾಡಿನಲ್ಲಿ ಒಂದು ಹುಲಿಯು ಒಬ್ಬ ಕಳ್ಳ ನನ್ನು ಕೊಂದುಹಾಕಿತು. ಆ ಕಳ್ಳನ ಬಳಿಯಲ್ಲಿ ಒಂದು ಘಂಟೆ ಇದ್ದಿತು. ಅದನ್ನು ಒಂದು ಕೋತಿಯು ಎತ್ತಿ ಕೊಂಡು ಮನಸ್ಸು ಬಂದಹಾಗೆ ಬಾರಿಸುತ್ತಾ ಇದ್ದಿತು. ಆ ಘಂಟೆಯ ಶಬ್ದವನ್ನು ಕೇಳಿ ಹುಲಿ ಕೊಂದ ಮನುಷ್ಯನನ್ನು ನೋಡಿ-ಘಂಟಾಕಲ್ಲನು ಘಂಟೆಯನ್ನು ಬಾರಿಸುತ್ತಾ, ಪಟ್ಟಣದ ಸವಿಾಪಕ್ಕೆ ಬಂದು ಮನುಷ್ಯರನ್ನು ತಿನ್ನು ತಾನೆಂದು ದಿಗಿಲು ಬಿದ್ದು ಆ ಪಟ್ಟಣದವರೆಲ್ಲರೂ ಊರನ್ನು ಬಿಟ್ಟು ದೂರವಾಗಿ ಹೋಗಬೇಕೆಂದು ಎಣಿಸಿಕೊಂಡು ಇದ್ದರುಈ ಸುದ್ದಿಯನ್ನು ರಾಜನು ಕೇಳಿ ತುಂಬಾ ಚಿಂತೆಯನ್ನು ಮಾಡುತ್ತಾ ಇದ್ದನು. ಆಗ ಸೌದೆಯ ನಿಮಿತ್ತವಾಗಿ ನಿತ್ಯವೂ ಕಾಡಿಗೆ ಹೋಗುತ್ತಿದ್ದ ಆ ಪಟ್ಟಣದ ಅಡುಗೂಲಜ್ಜಿಯು ಈ ಮರವನ್ನು ಕಂಡಿದ್ದವ ಳಾದಕಾರಣ ಅವಳು ಅರಸಿನ ಬಳಿಗೆ ಬಂದು ಸ್ವಾಮೀಾ ! ತಾವು ನನಗೆ ಬಹಳ ದ್ರವ್ಯವನ್ನು ಕೊಟ್ಟರೆ ನಾನು ಕಾಡಿಗೆ ಹೋಗಿ ಆ ಘಂಟಾಕರನನ್ನು ನಮ್ಮ ದೇಶದಿಂದ ದೂರಕ್ಕೆ ಹೊರಡಿಸಿಬಿಟ್ಟು ಬರುತ್ತೇನೆ ಎನಲು ಆ ಅರಸು ಸಂತೋಷದಿಂದ ಅವಳಿಗೆ ಬಹಳ ಹಣವನ್ನು ಕೊಟ್ಟನು. ಆಕೆಯು ಆ ಹಣವನ್ನೆಲ್ಲಾ ಮನೆಯಲ್ಲಿ ಹೂಣಿಟ್ಟು ಸ್ವಲ್ಪ ಅನ್ನ ವನ್ನೂ ಕಜ್ಜಾಯಗಳನ್ನೂ ಮಾಡಿ ತೆಗೆದುಕೊಂಡು ಕಾಡಿಗೆ ಹೋಗಿ ಅಲ್ಲಿ ಒಂದು ಸ್ಥಳದಲ್ಲಿ ಇಡಲು ಆ ಕೋತಿ ಬಂದು ಘಂಟೆಯನ್ನು ಬಿಟ್ಟು ಅನ್ನ ವನ್ನೂ ಕಜ್ಜಾಯಗಳನ್ನೂ ತಿನ್ನು ತ್ತಾ ಇದ್ದಿತು. ಆ ಸಮಯದಲ್ಲಿ ಈ ಅಡು ಗೂಲಜ್ಜೆಯು ಘಂಟೆಯನ್ನು ತೆಗೆದುಕೊಂಡು ಬಂದು ತನ್ನ ಮನೆಯಲ್ಲಿಟ್ಟು ಅರಸಿನ ಬಳಿಗೆ ಬಂದು ಬಹು ಶ್ರಮದಿಂದ ಘಂಟಾಕರನನ್ನು ಓಡಿಸಿ ಬಂದೆನೆಂದು ಹೇಳಿ ದಳು. ಆಮೇಲೆ ಊರಿನ ಜನರೆಲ್ಲರೂ ಘಂಟೆಯ ಶಬ್ದವನ್ನು ಕೇಳದಿರುವುದರಿಂದ ಸಂತೋಷಪಟ್ಟು ಆ ಅಡುಗೂಲಜ್ಜೆಯನ್ನು ಮಹಾತ್ಮ ಳೆಂದು ಭಾವಿಸಿ ಬಹಳವಾಗಿ ಪೂಜಿಸುತ್ತಾ ಬಂದರು. ಆದುದರಿಂದ ಬುದ್ದಿವಂತರಾದವರು ಸಮಯವರಿತು ಉ? ಯಗಳನ್ನು ಮಾಡಿ ಜೀವಿಸುವರು.
ಪುಟ:ಕಥಾಸಂಗ್ರಹ ಸಂಪುಟ ೧.djvu/೨೨
ಗೋಚರ