ಕಥಾಸಂಗ್ರಹ-೧ ನೆಯ ಭಾಗ 14, THE BRAHMAN AND OPPRESSING KoTWAL. ೧೪, ಬ್ರಾಹ್ಮಣನೂ ಕೊತ್ತವಾಲನೂ. ಒಬ್ಬ ಬ್ರಾಹ್ಮಣನು ತನಗೆ ಯಾರೋ ಒಬ್ಬನು ಕೊಟ್ಟ ಅರಬೀ ದೇಶದ ಟಾಕಣದ ಮೇಲೆ ಹತ್ತಿಕೊಂಡು ಒಂದು ಪಟ್ಟಣದ ಕೋಮಟಿಗರ ಬೀದಿಯಲ್ಲಿ ಬರುತ್ತಾ ಇರಲು ಆ ಊರಿನ ಕೊತ್ತ ವಾಲನಈ ಟಾಕಣ ಬಹು ಒಳ್ಳೆಯದು ; ಹೇಡಿಯ ಕೈಗೆ ಚಂದ್ರಾಯುಧ ಸಿಕ್ಕಿದಹಾಗೆ ಈ ಬಡ ಹಾರವನಿಗೆ ಇಂಧಾ ಉತ್ತಮವಾದ ಕುದುರೆ ಎಲ್ಲಿ ದೊರಕಿತೋ ? ಇದನ್ನು ಅಪಹರಿಸಬೇಕೆಂದು ಮನಸ್ಸಿನಲ್ಲಿ ಎಣಿಸಿ, ಓಡುತ್ತಾ ಒಂದು ಬ್ರಾಹ್ಮಣನನ್ನು ಕುದುರೆಯ ಮೇಲಿನಿಂದ ಎಳೆದುಹಾಕಿ ತಾನು ಅದರ ಮೇಲೆ ಹತ್ತಿ ಕೊಂಡು ತನ್ನ ಮನೆಗೆ ಹೋದನು, ಈ ಬ್ರಾಹ್ಮಣನು ಅಳುತ್ತಾ ಕರೆಯುತ್ತಾ ಆ ಊರಿನ ದೊರೆಯ ಸಭೆಗೆ ಹೋಗಿ ದೂರುಹೇಳಿಕೊಂಡನು. ಆಗ ದೊರೆಯು ಬಿಲ್ಲೆ ಯವರನ್ನು ಕಳುಹಿಸಿ ಕೊತ್ವಾಲನನ್ನು ಕರಿಸಿ ವಿಚಾರಿಸುವಲ್ಲಿ... ಈ ಬಡಹಾರವ ಎಲ್ಲಿ ? ಇಂಧಾ ಜಾತಿ ಟಾಕಣವೆ ? ಇವನದು ಎಂದಿಗೆ ಆದೀತು ? ಇದು ನನ್ನ ದು ಎಂದು ಕೊತ್ತ ವಾಲನು ಹೇಳಿದನು ಅದಕ್ಕೆ ಆ ಬ್ರಾಹ್ಮಣನು--ಈ ಕುದುರೆಯು ನನ್ನದು ಎಂಬುವುದನ್ನು ಈ ಊರಿನ ಕೋಮಟಿಗರೆಲ್ಲಾ ಚೆನ್ನಾಗಿ ಬಲ್ಲ ರು. ದಣಿಯವರು ಅವರನ್ನು ಕರಿಸಿ ವಿಚಾರಿಸಬಹುದು ಎಂದು ಅರಿಕೆ ಮಾಡಿ ದನು. ಆಗ ದೊರೆಯು ಆಳುಗಳನ್ನು ಕಳುಹಿಸಿ ಕೋಮಟಿಗರನ್ನು ಆರಿಸಲು ಕೋಮಟಿಗರೆಲ್ಲಾ ಗುಂಪುಕೂಡಿ--ಇದೇನಪ್ಪಾ! " ಪೀಕಲಾಟ ಬಂದಿತು ಎಂದು ಯೋಚಿಸುತ್ತಾ ಚಾವಡಿಗೆ ಒಂದು ದೊರೆಗೆ ಕೈ ಮುಗಿದು ಕೂತುಕೊಂಡರು. ಆಗ ಈ ಕುದುರೆ ಯಾರದು ? ನೀವು ಬಲ್ಲಿರಾ ? ಎಂದು ಅರಸನು ಕೇಳಲು ಆ ಕೋಮ ಟಿಗರಲ್ಲಿ ಒಬ್ಬ ಮುದುಕನು ಎದ್ದು ಆ ಕುದುರೆಯ ಬಳಿಗೆ ಹೋಗಿ ಅದರ ಮುಂದು ಗಡೆಯನ್ನೆಲ್ಲಾ ಚೆನ್ನಾಗಿನೋಡಿ ಆ ಮೇಲೆ ಅದರ ಹಿಂದುಗಡೆಯನ್ನೂ ನೋಡಿ ಅರಸಿನ ಬಳಿಗೆ ಬಂದು ಕೈಮುಗಿದು.ಸಾಮೀಾ ! ಈ ಟಾಕಣವು ಮುಂದೆ ಬಾಹಣ ನದಾಗಿಯ ಹಿಂದೆ ಕೊತ್ತ ವಾಲನದಾಗಿಯೂ ಇದೆ. ಸರ್ವಜ್ಞರಾದ ದೊರೆಗಳ ಚಿತ್ರಕ್ಕೆ ತೋರಿದ ಪ್ರಕಾರ ಮಾಡಿಸಬಹುದು ಎಂದು ಹೇಳಿದನು, ಆ ಮೇಲೆ ಉಳಿದವ ರೆಲ್ಲರೂ ಹಾಗೆಯೇ ಹೇಳಲು ಇವರು ಕೊತ್ವಾಲನಿಗೆ ಅಂಜಿ ಹೀಗೆ ಮಾತಾಡು ತಾರೆ ಎಂದು ದೊರೆಯು ನಕ್ಕು ಇದು ಬ್ರಾಹ್ಮಣನದೇ ಎಂದು ನಿಶ್ಚಯಿಸಿ ಕುದು ರೆಯನ್ನು ಅವನಿಗೆ ಕೊಡಿಸಿ ಕಳುಹಿಸಿ ಕೊತ್ವಾಲನಿಗೆ ಶಿಕ್ಷೆ ಯನ್ನು ಮಾಡಿಸಿದನು. 15, THE KING, MANTRI, AND MILK-CHEAT. ೧೫, ದೊರೆಯೂ ಮಂತ್ರಿಯೂ ಹಾಲು ತುಂಬದೆ ನೀರು ತುಂಬಿದವರೂ. ಮಧುರಾಪುರಿಯಲ್ಲಿ ವಿವೇಕ ಚಿಂತಾಮಣಿ ಎಂಬ ಅರಸು ಬುದ್ದಿ ಸಾಗರನೆಂಬ ನನೊಡನೆ ರಾಜ್ಯಭಾರವನ್ನು ಮಾಡಿ ಕೊಂಡು ಇದ್ದನು. ಹೀಗಿರುವಲ್ಲಿ ಅರಸು
ಪುಟ:ಕಥಾಸಂಗ್ರಹ ಸಂಪುಟ ೧.djvu/೨೩
ಗೋಚರ