ಪುಟ:ಕಥಾಸಂಗ್ರಹ ಸಂಪುಟ ೧.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 KANARESE SELECTIONS-PART T ಒಂದು ಕಾರವನ್ನು ಆಲೋಚಿಸಿ ಅದನ್ನು ಹೀಗೆ ಮಾಡಬೇಕೆಂದು ತನ್ನ ಮನದ ಲ್ಲಿಯೇ ನಿಶ್ಚಯಿಸಿ ಈ ಕಾರಕ್ಕೆ ನಮ್ಮ ಮಂತ್ರಿಯು ಏನು ಹೇಳುತ್ತಾನೋ ? ನೋಡೋಣ ಎಂದು ಅಮಾತ್ಯನನ್ನು ಕರಿಸಿ ಅಂತರಂಗದಲ್ಲಿ ಕುಳಿತು ಆ ಕಾಠ್ಯವನ್ನು ಅವನಿಗೆ ಹೇಳಿ ಇದಕ್ಕೆ ಹೇಗೆ ಮಾಡಬೇಕೆಂದು ಕೇಳಲು ಅರಸು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿದ್ದ ಪ್ರಕಾರವೇ ಪ್ರಧಾನನೂ ಹೇಳಿದನು ಅದಕ್ಕೆ ಅರಸು-ಎನ ಯ್ಯಾ, ಮಂತ್ರಿಯೇ ! ನನ್ನ ಮನಸ್ಸಿನಲ್ಲಿ ನಿಶ್ಚಯಿಸಿದ್ದ ಪ್ರಕಾರವೇ ನೀನು ಹೇಗೆ ಹೇಳಿದೆ ? ಎನ್ನಲು ಮಂತ್ರಿಯು-ಸ್ವಾಮಿಾ ! ಬುದ್ದಿವಂತರ ಆಲೋಚನೆಗಳೆಲ್ಲಾ ಒಂದೇ ಪ್ರಕಾರವಾಗಿರುವುವು ಅಂದನು. ಅದಕ್ಕೆ ಅರಸನು--ಈ ಅರ್ಧರಾತ್ರಿಯಲ್ಲಿ ನೀನು ಹೊರಗೆ ಹೋಗದೆ ನನ್ನ ಬಳಿಯಲ್ಲಿಯೇ ಇದ್ದು ಕೊಂಡು ಅದಕ್ಕೆ ನಿದರ್ಶನ ವನ್ನು ತೋರಿಸು ಎನ್ನಲು ಆ ಕ್ಷಣವೇ ಮಂತ್ರಿಯು ಬುದ್ಧಿವಂತರಾದ ಇಪ್ಪತ್ತು ಜನರನ್ನು ದೊರೆಯ ಬಳಿಗೆ ಕರಿಸಿ ದೊರೆಯ ಮುಂದುಗಡೆಯಲ್ಲಿಯೇ ಅವರನ್ನು ಕುರಿತು-ನೀವು ಒಬ್ಬರೊಬ್ಬರಾಗಿ ಈ ಕತ್ತಲೆಯ ಮನೆಯಲ್ಲಿರುವ ಗಾರೆಯ ಗುಂಡಿಗೆ ಒಂದೊಂದು ಹರವಿ ಹಾಲನ್ನು ಸುರಿದು ಅದನ್ನು ತುಂಬಿಸಿ ನಮ್ಮ ಬಳಿಗೆ ಬಂದು ಹೇಳಬೇಕೆಂದು ಅಪ್ಪಣೆ ಕೊಡಲು ಎರಡು ಗಳಿಗೆಯಲ್ಲಿ ಅವರೆಲ್ಲಾ ಅಪ್ಪಣೆಯ ಪ್ರಕಾರವೇ ಆ ತೊಟ್ಟಿ ಯನ್ನು ತುಂಬಿಸಿ ದೊರೆಯ ಬಳಿಗೆ ಬಂದು ಅಪ್ಪಣೆ ಆದಂತೆ ತೊಟ್ಟಿ ಯನ್ನು ಹಾಲಿನಿಂದ ತುಂಬಿಸಿ ಇದ್ದೇವೆ ಎಂದು ಹೇಳಲು ಅವರನ್ನೆಲ್ಲಾ ಬೇರೆ ಬೇರೆ ಪಹರೆಯಲ್ಲಿ ಇಡಿಸಿ ದೊರೆಯು ಪ್ರಧಾನನೊಡನೆ ದೀವಟಿಗೆಯನ್ನು ಹಿಡಿಸಿಕೊಂಡು ಆ ಗಾರೆಯ ಗುಂಡಿಯ ಬಳಿಗೆ ಬಂದು ನೋಡುವಾಗ ಅದರಲ್ಲಿ ಬರಿಯ ನೀರೇ ತುಂಬಿತ್ತು. ಮಂತ್ರಿಯು ಆ ಇಪ್ಪತ್ತು ಜನರೊಳಗೆ ಒಬ್ಬನನ್ನು ಕರಿಸಿ--ನೀನು ಅಪ್ಪಣೆಯ ಪ್ರಕಾರ ಒಂದು ಹರವಿ ಹಾಲು ತಂದು ಸುಗಿದೆಯೋ ? ಇಲ್ಲ ವೋ ? ಸುಳ್ಳನ್ನು ಹೇಳಿದರೆ ಶಿಕ್ಷೆಯಾದೀತು ; ನಿಜವನ್ನು ಹೇಳಿದರೆ ಮನ್ನಿಸುವೆವು ಎಂದು ಕೇಳಲು--ಸ್ವಾಮಿಾ ! ನಾನು ಹಾಲನ್ನು ತಂದು ಸುರಿಯಲಿಲ್ಲ ; ನೀರನ್ನು ತಂದು ಸುರಿದೆನು ಎಂದನು ಅದಕ್ಕೆ ಮಂತ್ರಿಯು-ದೊರೆಗಳ ಅಪ್ಪಣೆಯ ಮೇರೆ ಹಾಲನ್ನು ತಂದು ಸುರಿಯದೆ ನೀರನ್ನು ತಂದು ಸುರಿಯುವುದಕ್ಕೆ ಕಾರಣವೇನೆಂದು ಕೇಳಲು ಅವನು--ಈ ಅರ್ಧರಾತ್ರಿಯಲ್ಲಿ ಹಾಲನ್ನು ತರುವುದಕ್ಕೆ ಅನುಕೂಲಿಸದೆ ಹತ್ತೊಂಭತ್ತು ಹರವಿ ಹಾಲಿನೊಳಗೆ ಒಂದು ಹರವಿ ನೀರು ಬೆರೆದರೆ' ಭೇದವಿಲ್ಲದಂತೆ ಕೂಡಿ ಹೋಗತ್ತದೆ ಎಂದು ಎಣಿಸಿ ನೀರನ್ನು ತಂದು ಸುರಿದೆನು ಅಂದನು. ತರು ವಾಯ ಇವನನ್ನು ಬೇರೆ ಇರಿಸಿ ಉಳಿದವರನ್ನು ಒಬ್ಬೊಬ್ಬರಾಗಿ ಕರಿಸಿ ವಿಚಾರಿ ಸುವಲ್ಲಿ ಎಲ್ಲರೂ ಮೊದಲಿನವನು ಹೇಳಿದ ಹಾಗೆಯೇ ಹೇಳಿದರು. ಆಗ ದೊರೆಯು ಇದಕ್ಕಾಗಿ ಸಂತೋಷಪಟ್ಟು ಮಂತ್ರಿ ಗೂ ಆ ಇಪ್ಪತ್ತು ಜನಕ್ಕೂ ಬಹುಮಾನವನ್ನು ಮಡಿ ಕಳುಹಿಸಿದನು.