ಕಥಾಸಂಗ್ರಹ-೧ನೆಯ ಭಾಗ 13 16, THE MERCHANT, BRAHMAN, AND LOST PURSE. ೧೬, ಕೋಮಟಿ ಬ್ರಾಹ್ಮಣ ಇವರ ಗಂಟು ವ್ಯಾಜ್ಯವು. ವಿಜಯನಗರದಲ್ಲಿ ಘಾತಕಸೆಟ್ಟಿ ಎಂಬ ಒಬ್ಬ ಕೋಮಟಿಗನಿದ್ದನು, ಆತನು ವ್ಯಾಪಾರಕ್ಕಾಗಿ ನೂರು ವರಹಗಳನ್ನು ಗಂಟು ಕಟ್ಟಿ ಕೊಂಡು ತನ್ನೂರಿಂದ ಹೊರಟು ಸ್ವಲ್ಪ ದೂರ ಪ್ರಯಾಣವನ್ನು ಮಾಡಿ ಹೀಗೆ ಹೋಗುತ್ತಾ ಇರಲು ಒಂದು ದಿನ ದಾರಿಯಲ್ಲಿ ಸಿಕ್ಕಿದ ಸತ್ಯಶೀಲನೆಂಬ ಒಬ್ಬ ಬ್ರಾಹ್ಮಣನೊಡನೆ ಅಕಾರಣವಾಗಿ ಜಗಳವಾಡಿಕೊಂಡು ಸಮೀಪದಲ್ಲಿ ಇರುವ ಪಟ್ಟಣಕ್ಕೆ ಹೋಗಿ ಅಲ್ಲಿನ ದೊರೆಯ ಮು೦ಗಡೆಯಲ್ಲಿ ತನ್ನ ನೂರು ವರಹದ ಗಂಟನ್ನು ಇಟ್ಟು ಹೇಳಿಕೊಂಡುದು ಏನಂ ದರೆ--ಸ್ವಾಮಿಾ ! ನನ್ನ ಊರಿಂದ ವ್ಯಾಪಾರಕ್ಕೋಸ್ಕರ ಇನ್ನೂರು ವರಹಗಳನ್ನು ಗಂಟು ಕಟ್ಟಿ ತೆಗೆದು ಕೊಂಡು ಹೊರಟು ಈ ಊರಿಗೆ ಒಂದು ಹರದಾರಿಯಲ್ಲಿರುವ ನದಿಯ ಬಳಿಗೆ ಬಂದು ಅಲ್ಲಿ ಸ್ಥಾನವನ್ನು ಮಾಡಿ ಬುತ್ತಿಯ ಅನ್ನವನ್ನು ತಿಂದು ರಾತ್ರಿಗೆ ಪಟ್ಟಣಕ್ಕೆ ಹೋಗಿ ಇಳಿದು ಕೊಳ್ಳಬೇಕು ಎಂದು ಯೋಚಿಸಿ ಗಂಟನ್ನು ನದಿಯ ಮರಳಿನ ಮೇಲೆ ಇರಿಸಿ ಅದರ ಮೇಲೆ ನನ್ನ ಚೊಗೆ ರುಮಾಲು ಹಸಿಬೆಯ ಚೀಲ ಇವುಗಳನ್ನು ಇರಿಸಿ ಹೊಳೆಯಲ್ಲಿ ಸ್ಥಾನವನ್ನು ಮಾಡಿ ಬುತ್ತಿಯ ಅನ್ನವನ್ನು ಉಂಡು ಸಾಮಾನುಗಳನ್ನೆಲ್ಲಾ ತೆಗೆದು ಕೊಂಡು ನನ್ನ ಗಂಟನ್ನು ಮಾತ್ರ ಅಲ್ಲಿಯೇ ಮರೆತು ಅರ್ಧ ಮೈಲಿ ದೂರ ಬಂದು ನೆನಸಿಕೊಂಡು ತಿರುಗಿ ಹೊಳೆಯ ಬಳಿಗೆ ಓಡಿಹೋಗುತ್ತಾ ಇರುವಾಗ ದಾರಿಯಲ್ಲಿ ಮೋಸಗಾರನಾದ ಈ ಹಾರುವನು ನನ್ನ ಎದುರಿಗೆ ಸಿಕ್ಕಿದನು ನಾನು ಈತನನ್ನು ಕುರಿತು-ನೀವು ಹೊಳೆಯಲ್ಲಿ ಇಳಿದು ಬಂದಿರಾ ? ನಿಮಗೆ ಒಂದು ಗಂಟು ಸಿಕ್ಕಿತೇ ? ಅದು ಸಿಕ್ಕಿ ಇದ್ದರೆ ಕೊಡಿ ; ಕೊಟ್ಟರೆ ನಿಮಗೆ ಹತ್ತು ವರಹಗಳನ್ನು ಕೊಡುತ್ತೇನೆಂದು ಬಹಳ ದೀನವಾಗಿ ಕೇಳಿದುದಕ್ಕೆ ನನ್ನ ಇನ್ನೂ ರುವರಹದ ಗಂಟನ್ನು ಕೊಡದೆ ಇದೋ ! ಈ ನೂರು ವರಹದ ಗಂಟು ಕೊಟ್ಟು ಇದ್ದಾನೆ ಎಂದು ಹೇಳಲು ಅರಸು ಆ ಬ್ರಾಹ್ಮಣನನ್ನು ಕುರಿತು ಈ ವಿಚಾರವೇನೆಂದು ಕೇಳಲು ನಾನು ಆ ಹೊಳೆಯಲ್ಲಿ ಸ್ಥಾನಕ್ಕೆ ಇಳಿದಾಗ ಮರಳಿನಲ್ಲಿ ಈ ಗಂಟು ಸಿಕ್ಕಿತು, ಯಾರು ಮರೆತು ಹೋದರೋ ? ಎಷ್ಟು ವ್ಯಸನಪಡುವರೋ ? ಎಂದು ಇದನ್ನು ಬಿಚ್ಚಿ ನೋಡದೆಯೇ ನಾನು ತೆಗೆದುಕೊಂಡು ಬರುತ್ತಿರುವ ದಾರಿ ಯಲ್ಲಿ ಈ ವರ್ತಕನು ಅಳುತ್ತಾ ಕರೆಯುತ್ತಾ ಓಡಿಬಂದು ಕೇಳಿದುದರಿಂದ ಇದು ಇವನದೇ ಎಂದು ನಿಶ್ಚಯಿಸಿ ಆ ಗಂಟನ್ನು ಇವನಿಗೇ ಕೊಟ್ಟುಬಿಟ್ಟೆನು ಅಂದನು. ಆ ಮೇಲೆ ಅರಸು ಒಂದು ಗಳಿಗೆಯ ವರೆಗೂ ಯೋಚಿಸಿ ಕೋಮಟಿಗನನ್ನು ಕುರಿತು-ಈ 'ನೂರು ವರಹದ ಗಂಟು ನಿನ್ನ ದಲ್ಲವೋ ? ಎಂದು ಕೇಳಲು ಅವನು ಅದಕ್ಕೆ ಸ್ವಾಮಿಾ ! ಇದಲ್ಲ ; ನನ್ನದು ಇನ್ನೂ ರು ವರಹದ ಗಂಟು ಎಂದು ಹೇಳಿ ದನು, ಆಗ ಅರಸು ಕೊತ್ತ ವಾಲನನ್ನು ಕರಿಸಿ-ಈ ಕೋಮಟಿಗನು ಇನ್ನೂ ರು ಗರಹದ ಗಂಟನ್ನು ಹೊಳೆಯಲ್ಲಿ ಮರೆತು ಬಂದು ಇದ್ದಾನೆ, ಅದು ಯಾರಿಗೆ ಸಿಕ್ಕಿ `ತಂದು ಕೊಟ್ಟರೆ ಅವರಿಗೆ ಇನಾಮು ಕೊಡಿಸುತ್ತೇವೆ ಎಂದು ಸಾರಿಸುವ ಹಾಗೆ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೫
ಗೋಚರ