ಪುಟ:ಕಥಾಸಂಗ್ರಹ ಸಂಪುಟ ೧.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 KANARESE SELECTIONS—PART I ಅಪ್ಪಣೆ ಕೊಟ್ಟು ಕಳುಹಿಸಲು ಅವನು ಅದೇ ಪ್ರಕಾರ ಮಾಡಿದನು, ಅರಸು ಬ್ರಾಹ್ಮ ಣನನ್ನು ಕರೆದು ಈ ಗಂಟು ಇವನದಲ್ಲಿ ವಂತೆ ; ನಿನ್ನ ಪುಣ್ಯದಿಂದ ಇದು ನಿನಗೆ ಸಿಕ್ಕಿತು ; ನೀನೇ ತೆಗೆದು ಕೊಂಡು ಹೋಗು ಎಂದು ಅದನ್ನು ಅವನಿಗೆ ಕೊಟ್ಟು ಕಳು ಹಿಸಿ ಆಮೇಲೆ ಆ ಕೋಮಟಿಗನಿಗೆ--ನಿನ್ನ ಗಂಟು ಸಿಕ್ಕುವ ವರೆಗೂ ನೀನು ಈ ಪಟ್ಟಣದಲ್ಲಿಯೇ ಕಾದು ಇರಬೇಕೆಂದು ಹೇಳಿ ಕಳುಹಿಸಿದನು, ಆಗ ಕೋಮಟಿ ಗನು ಕೆಟ್ಟೆನಲ್ಲಾ! ಇನ್ನೇನು ಗತಿ? ಎಂದು ಬ್ರಾಹ್ಮಣನ ಬಳಿಗೆ ಬಂದು ಅಡ್ಡ ಬಿದ್ದು ಅವನಿಗೆ ಇಪ್ಪತ್ತು ವರಹಗಳನ್ನು ಕೊಟ್ಟು ತನ್ನ ಗಂಟನ್ನು ತೆಗೆದು ಕೊಂಡು ಹೋದನು. 17. THE VAIN JACKAL. ೧೭, ಹೆಮ್ಮೆ ಬಂದ ನರಿಯು. ಜಂಬೂವನದಲ್ಲಿ ಶೀಘ್ರಬುದ್ದಿ ಎಂಬ ಒಂದು ನರಿಯು ಆಹಾರಾರ್ಧವಾಗಿ ಸಂಚರಿಸುತ್ತಾ ಸಂಜೆಯ ವೇಳೆಯಲ್ಲಿ ನೀಲಿಯನ್ನು ಮಾಡುವ ಒಬ್ಬ ಸಾಹುಕಾರನ ನೀಲಿಯ ಕಾರು ಖಾನೆಯೊಳಗೆ ಹೊಕ್ಕು ಅಲ್ಲಿರುವ ನೀಲಿಯ ಗುಡಾಣದಲ್ಲಿ ಬಿದ್ದು ಮೇಲಕ್ಕೆ ಏಳುವುದಕ್ಕೆ ಚೈತನ್ಯವಿಲ್ಲದೆ ಬೆಳಿಗ್ಗೆ ಸಾಹುಕಾರನು ಅಲ್ಲಿಗೆ ಬರುವ ಹೊತ್ತಿನಲ್ಲಿ ಹೊಟ್ಟೆಯನ್ನು ಉಬ್ಬಸಿಕೊಂಡು ಹಲ್ಲುಗಳನ್ನು ಕಿರಿದುಕೊಂಡು, ಸತ್ತ ಹಾಗೆ ಕಾಣಿಸಿಕೊಂಡು ಬಿದ್ದಿತ್ತು, ಅದನ್ನು ಸಾಹುಕಾರನು ನೋಡಿ ತನ್ನ ಆಳುಗ ಳಿಂದ ದೂರಕ್ಕೆ ಎತ್ತಿ ಹಾಕಿಸಿದನು ತರುವಾಯ ಅದು ತನ್ನ ಮೈ ಬಳಿಪ ಬಣ್ಣವು ಹೋಗಿ ನೀಲಿಯ ಬಣ್ಣವಾಗಿರುವುದನ್ನು ನೋಡಿ ಇದರಿಂದ ಒಂದು ಯುಕ್ತಿಯನ್ನು ಮಾಡಿ ಎಲ್ಲಾ ಮೃಗಗಳಿಂದಲೂ ಪ್ರತಿಷ್ಠೆಯನ್ನು ಹೊಂದಬೇಕೆಂದೆಣಿಸಿ ನರಿಗಳ ಗುಂಪನ್ನು ಸೇರಿ ಅವುಗಳನ್ನು ಕುರಿತು--ಎಲೈ ನರಿಗಳಿರಾ ! ಇನ್ನು ಮೇಲೆ ನೀವು ನನ್ನನ್ನು ಮೊದಲಿನಂತೆ ತಿಳಿಯಬೇಡಿರಿ. ನಿನ್ನೆ ಯ ರಾತ್ರಿಯಲ್ಲಿ ಈ ವನದೇವತೆಯು ನನ್ನಲ್ಲಿ ದಯೆಯುಳ್ಳವಳಾಗಿ ಸಮಸ್ತವನೌಷಧಿರಸಗಳಿಂದ ತನ್ನ ಕೈಯಿಂದಲೇ ನನಗೆ ಈ ವನರಾಜ್ಯಕ್ಕೆ ಪಟ್ಟಾಭಿಷೇಕವನ್ನು ಮಾಡಿದುದರಿಂದ ಇದೋ ನೋಡಿರಿ ! ನನ್ನ ಮೈಯೆಲ್ಲಾ ನೀಲಿಯ ಬಣ್ಣವಾಗಿದೆ; ಇನ್ನು ಮೇಲೆ ನೀವೆಲ್ಲರೂ ನನ್ನನ್ನು ಅರಸನೆಂದು ಓಲೈಸಿರಿ ಎಂದು ಹೇಳಲು ಆ ನರಿಗಳೆಲ್ಲಾ ತಮ್ಮ ಜಾತಿಯವನು ಅರಸನಾದರೆ ತಮಗೂ ಒಳ್ಳೆಯದೆಂದು ಎಣಿಸಿ ಹಾಗೆಯೇ ಮಾಡುತ್ತಾ ಇದ್ದುವು. ಕೆಲವು ದಿನ ಗಳ ಮೇಲೆ ಈ ಸುದ್ದಿಯನ್ನು ಕೇಳಿ ಹುಲಿ ಸಿಂಹ ಮುಂತಾದ ಸರ್ವಮೃಗಗಳೂ ಈ ನರಿಯ ಬಳಿಗೆ ಬಂದು ಇದನ್ನು ನೋಡಿ ಇದು ವಿಜಾತೀಯ ಮೃಗವು; ಇದಕ್ಕೆ ವನ ದೇವತೆಯು ಪಟ್ಟಾಭಿಷೇಕವನ್ನು ಮಾಡಿರಬಹುದೆಂದು ನಿಶ್ಚಯಿಸಿ ಅವುಗಳೂ ಈ ನರಿಯನ್ನು ಓಲೈಸುತ್ತಾ ಬಂದುವು. ಆಗ ಈ ನರಿಯು ತನ್ನನ್ನು ಅನ್ಯ ಜಾತಿಯ ದೊಡ್ಡ ದೊಡ್ಡ ಮೃಗಗಳೆಲ್ಲಾ ಓಲೈಸುತ್ತವೆ ಎಂಬ ಗರ್ವದಿಂದ ತನ್ನ ಜಾತಿಯ ನರಿ ಗಳನ್ನು ತಿರಸ್ಕರಿಸುತ್ತಾ ಬಂದಿತು. ಅದನ್ನು ನೋಡಿ ನರಿಗಳೆಲ್ಲಾ ಯೆ'