ಕಥಾಸಂಗ್ರಹ-೧ ನೆಯ ಭಾಗ 15 ಮಾಡುತ್ತಾ ಇರುವಲ್ಲಿ ಒಂದು ಮುದಿನರಿಯು ಅವುಗಳನ್ನು ಕುರಿತು ಹೇಳಿದುದೇ ನಂದರೆ--ಲೋಕದಲ್ಲಿ ಯಾವ ಅರಸು ಸ್ವಂತಜನರಲ್ಲಿ ವಿರೋಧವನ್ನು ಬೆಳಸುವನೋ ತನಗಿಂತ ಬಲಿಷ್ಠನಲ್ಲಿ ಜಗಳವನ್ನು ಮಾಡುವನೋ ಮತ್ತು ರಾಜನೀತಿಗೆ ತಕ್ಕುದಲ್ಲದ ಕೆಲಸವನ್ನು ಮಾಡುವನೋ ಅಂಧವನಿಗೆ ಬೇಗ ಕೇಡು ಉಂಟಾಗುವುದು. ಇದು ಸಿದ್ದವು. ಆದುದರಿಂದ ಇದರ ಹೆಮ್ಮೆ ಯನ್ನು ಮುರಿಯಬೇಕು. ನೀವೆಲ್ಲರೂ ಸಂಜೆಯ ವೇಳೆಯಲ್ಲಿ ಒಂದು ಕಡೆ ಗುಂಪು ಕೂಡಿ ಗಟ್ಟಿಯಾಗಿ ಬೊಗುಳಿರಿ ಎನ್ನಲು ಅವುಗಳು ಅದೇ ಪ್ರಕಾರವಾಗಿ ಬೊಗುಳಿದುವು. ಆಗ ಈ ನರಿಯೂ ಕೂಡಾ ಜಾತಿಸ್ವಭಾವದಿಂದ ಕೂಗಲು ಅಲ್ಲಿದ್ದ ಹುಲಿಯು--ಇದು ನರಿ ಎಂದು ಅರಿತು ಅದನ್ನು ಕೊಂದುಬಿಟ್ಟಿತು. ಆದಕಾರಣ ಸ್ವಜನರನ್ನು ತಿರಸ್ಕರಿಸುವುದರಿಂದ ಯಾರಿಗೂ ಒಳ್ಳೆಯದಾಗಲಾರದು. 18. SIVAPPANAIK AND THE JANGAMA. ೧೮, ಶಿವಪ್ಪನಾಯಿಕನು ಜಟ್ಟಿಗಳಿಂದ ಜಂಗಮನನ್ನು ಶಿಕ್ಷಿಸಿದುದು. ನಗರದ ಸಂಸ್ಥಾನದ ಶಿವಪ್ಪನಾಯಕನು ಚಾವಡಿಯಲ್ಲಿ ಕುಳಿತು ಆಡಳಿತ ವನ್ನು ಮಾಡುತ್ತಿರುವಾಗ ಪ್ರತಿದಿನದಲ್ಲಿಯ ಒಬ್ಬ ಜಂಗಮಯ್ಯನು ಬಂದುನಾವು ಕೈಲಾಸದಿಂದ ಬಂದೆವೋ ಅಲ್ಲಿ ಪಟ್ಟೆಯ ಮಂಚದ ಮೇಲೆ ಪಾರ್ವತಿಯ ಪರಮೇಶ್ವರನೂ ಪವಡಿಸಿದ್ದರು ವಿಷ್ಣುವು ಪರಮೇಶ್ವರನ ಕಾಲನ್ನು ಒತ್ತುತ್ತಿದ್ದನು ; ಲಕ್ಷ್ಮಿಯ ಪಾರ್ವತಿಯಮ್ಮನವರ ಕಾಲೊತ್ತುತ್ತಿದ್ದಳು ಎಂದು ಹೇಳುತ್ತಾ ಇದ್ದನು. ಅರಸು ಇದನ್ನು ಸಹಿಸಲಾರದೆ ಒಂದು ದಿವಸ ಇಬ್ಬರು ಜಟ್ಟಿ ಗಳಿಗೆ ಗುಟ್ಟಾಗಿ ಕೆಲವು ಯುಕ್ತಿಗಳನ್ನು ಹೇಳಿಕೊಟ್ಟು ಅವರನ್ನು ಚಾವಡಿಯ ಅಟ್ಟದ ಮೇಲೆ ಕೂರಿಸಿದ್ದನು. ಆ ದಿವಸ ಆ ಜಂಗಮಯ್ಯನು ಬಂದು ಮೊದಲಿನಂತೆಯೇ ಹೇಳುತ್ತಿರುವಲ್ಲಿ ಮೈಮೊ ಗಗಳಿಗೆಲ್ಲಾ ನಾಮಗಳನ್ನು ಬರೆದು ಕೊಂಡು ಕ೦ರದಲ್ಲಿ ತುಲಸಿಯ ದಂಡೆಯನ್ನು ಹಾಕಿಕೊಂಡಿರುವ ಇಬ್ಬರು ಜಟ್ಟಿಗಳು ಅಟ್ಟದಿಂದ ಚಾವಡಿಗೆ ದುಮುಕಲು ಅಗಸು ಎದ್ದು ಕೈಮುಗಿದು-ಸ್ವಾಮಿಗಳೇ ! ಎಲ್ಲಿಂದ ಬಿಜಮಾಡಿದಿರಿ ? ಎಂದು ಕೇಳಿದನು. ಅದಕ್ಕೆ ಅವರು--ನಾವು ವೈಕುಂಠದಿಂದ ಬಂದೆವು, ಅಲ್ಲಿ ಮಹಾವಿಷ್ಣುವೂ ಲಕ್ಷ್ಮೀ ದೇವಿಯ ಆದಿಶೇಷನ ಮೇಲೆ ಮಲಗಿದ್ದರು. ಶಿವನು ಮಹಾವಿಷ್ಣುವಿನ ಕಾಲುಗ ಳನ್ನೂ ಪಾರ್ವತಿಯು ಮಹಾಲಕ್ಷ್ಮಿದೇವಿಯರ ಕಾಲುಗಳನ್ನೂ ಒತ್ತುತ್ತಿದ್ದರು ಅಂದ ಕೂಡಲೇ ಆ ಒಡೆಯರಯ್ಯನು--ಇವರು ತುಂಟರು, ಸುಳ್ಳು ಹೇಳುತ್ತಾರೆ. ಎಲೋ, ಶಿವಗಾ ! ಇವರನ್ನು ಚೆನ್ನಾಗಿ ದಂಡಿಸು ಅಂದನು, ಆಗ-ನಮ್ಮನ್ನು ತುಂಟರು ಅನ್ನುತ್ತೀಯಾ ? ಎಂದು ಆ ಇಬ್ಬರು ಜಟ್ಟಿಗಳೂ ಬಂದು ಈ ಜಂಗಮ ನನ್ನು ಹಿಡುಕೊಂಡು ಗುದ್ದಿ ಗುದ್ದಿ ಹಿಂಸಿಸುತ್ತಾ ಇರಲು ಜಂಗಮಯ್ಯನುಲಲಾ, ಶಿವಗಾ ! ಈ ವೈಕುಂಠದವರು ನಮ್ಮನ್ನು ಸಾಯುವಂತೆ ಬಡಿಯುತ್ತಾರಲ್ಲೋ! “ ನೀನು ನೋಡಿ ಕಂಡು ಸುಮ್ಮನೇ ಇದ್ದೀಯಾ ? ಬಂದು ಬಿಡಿಸೋ !
ಪುಟ:ಕಥಾಸಂಗ್ರಹ ಸಂಪುಟ ೧.djvu/೨೭
ಗೋಚರ