ಪುಟ:ಕಥಾಸಂಗ್ರಹ ಸಂಪುಟ ೧.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 | KANARESE SELECTIONS-PART T ಎಂದು ಕೂಗುತ್ತಿರಲು ಶಿವಪ್ಪನಾಯಕನು--ಬುದ್ದೀ ! ಕೈಲಾಸದವರುಂಟು ವೈಕುಂಠದವರುಂಟು ; ನಾನೇನು ಮಾಡಲಿ ? ಅಂದನು. ಆಗ ಜಟ್ಟಿಗಳು ಆ ಜಂಗಮ ನನ್ನು ಗುದ್ದಿ ನೆಲಕ್ಕೆ ಕೆಡವಿ ಅರಸಿನ ಸಂಜ್ಞೆಯಿಂದ ಅವನನ್ನು ಬಿಟ್ಟು ಬಿಟ್ಟರು. ಆ ದಿವಸಾರಭ್ಯ ಆ ಜಂಗಮಯ್ಯನು ಅಂಥಾ ಮಾತಾಡುವುದನ್ನು ಬಿಟ್ಟು ಬಿಟ್ಟನು. 19, SHIVAPPANAIK CUTS OFF THE JANGAMA'S FEET. ೧೯, ಶಿವಪ್ಪನಾಯಕನು ಜಂಗಮನ ಪಾದಗಳನ್ನು ಕತ್ತರಿಸಿದುದು. ನಗರ ಸಂಸ್ಥಾನದಲ್ಲಿ ಶಿವಪ್ಪನಾಯಕನೆಂಬ ಅರಸು ರಾಜ್ಯಭಾರವನ್ನು ಮಾಡಿ ಕೊಂಡು ಪಕ್ಷಪಾತವಿಲ್ಲದೆ ನ್ಯಾಯಾನ್ಯಾಯಗಳನ್ನು ವಿಚಾರಿಸಿ ಶಿಕ್ಷೆರಕೆ ಗಳನ್ನು ಮಾಡುತ್ತಾ ಬಹಳ ಧರಿಷ್ಟನಾಗಿದ್ದನು. ಅವನು ಶಿವಭಕ್ತನಾದುದರಿಂದ ಅವನ ದೇಶ ದಲ್ಲಿರುವ ಜಂಗಮರು ಅರಸು ನಮ್ಮ ಶಿಷ್ಯನಾಗಿದ್ದಾನೆಂಬ ಹೆಮ್ಮೆಯಿಂದ ಬ್ರಾಹ್ಮ ಣಾದಿ ಇತರ ಜಾತಿಯವರಿಗೆ ಅನ್ಯಾಯವಾಗಿ ಅವಮಾನ ಮಾಡುತ್ತಾ ಬಂದರು ಶಿವೆ. ಪ್ರನಾಯಕನು ಈ ದೂರನ್ನು ಬಹಳವಾಗಿ ಕೇಳಿ ಈ ಜಂಗಮರುಗಳ ಪುಂಡನ್ನು ನಿಲ್ಲಿಸಬೇಕೆಂದು ಮೊದಲೇ ಯೋಜಿಸಿಕೊಂಡು ಇದ್ದನು. ಹೀಗಿರುವಲ್ಲಿ ಒಂದು ದಿವಸ ದೇಶಾಂತರಿಯಾದ ಒಬ್ಬ ಬ್ರಾಹ್ಮಣನು ಅರಸಿನ ಬಳಿಗೆ ಬಂದು-ಅಯ್ಯಾ, ಅರಸನೇ ! ಈ ಊರ ಹೊರಗಿನ ನಿನ್ನ ಪೂದೋಟದಲ್ಲಿ ಒಂದು ಕೊಳವು ತಿಳಿನೀರುಗಳಿಂದ ಕೂಡಿ ಮನಸ್ಸಿಗೆ ಪ್ರಶಸ್ತವಾಗಿದ್ದುದರಿಂದ ಅಲ್ಲಿ ಸ್ನಾನವನ್ನು ಮಾಡಿ ಸಾಲಗ್ರಾಮಪೂಜೆ ಯನ್ನು ಮಾಡುತ್ತಾ ಇದ್ದೆನು. ಅಲ್ಲಿಗೆ ಒಬ್ಬ ಜಂಗಮಯ್ಯನು ಬಂದು ನನ್ನ ಸಾಲ ಗ್ರಾಮ ಪೆಟ್ಟಿಗೆಗಳನ್ನು ಎತ್ತಿ ಬಾವಿಗೆ ಒಗೆದು ನನ್ನನ್ನು ಕಾಲಿನಿಂದ ಒದ್ದು ಕೆಡ ವಿದನು ಎಂದು ಹೇಳಿದುದನ್ನು ಕೇಳಿ ಶಿವಪ್ಪನಾಯಕನು ಬಹಳ ವ್ಯಸನಪಟ್ಟು ಆ ಬ್ರಾಹ್ಮಣನಿಗೆ ಧನಕನಕವಸ್ತ್ರಾಭರಣಗಳಿಂದ ಸನ್ಮಾನವನ್ನು ಮಾಡಿ ಅವನನ್ನು ಸಮಾ ಧಾನಪಡಿಸಿ ಕಳುಹಿಸಿಬಿಟ್ಟನು. ಆ ಬಳಿಕ ಒದ್ಧ ಜಂಗಮಯ್ಯನು ಅರಸಿಗೆ ಮುಖ್ಯ ಗುರುವಾಗಿದ್ದುದರಿಂದ ತಾನು ಮಾಡಿದ ಕೆಲಸವನ್ನು ಹೇಳಿದರೆ ಸಂತೋಷಪಡುವನೆಂ ದು ಯೋಚಿಸಿಕೊಂಡು ಚಾವಡಿಗೆ ಬರಲು ಅರಸು ಎದ್ದು ಅಯ್ಯನ ಕಾಲಿಗೆ ಶರಣು ಮಾಡಿ ದೊಡ್ಡ ಗದ್ದುಗೆಯ ಮೇಲೆ ಆತನನ್ನು ಕೂರಿಸಿ ಮತ್ತೇನು ಬಿಜಮಾಡಿದ ಕಾರ್ಯ ? ಎಂದು ಕೇಳಿದನು. ಆಗ ಜಂಗಮಯ್ಯನು--ಕೇಳೋ, ಶಿವಗಾ ! ಈ ದಿನ ಮಧ್ಯಾಹ್ನದಲ್ಲಿ ಒಬ್ಬ ಹಾರುವ ಪರವಾದಿಯು ಬಂದು ನಮ್ಮ ಮನದ ಬಾವಿಯನ್ನು ಮುಟ್ಟಿ, ಅಶುಚಿಮಾಡಿ ಅದರ ಪಾವಟಿಗೆಯ ಮೇಲೆ ಕುಳಿತುಕೊಂಡು ಕರಿಯ ದುಂಡು ಕಲ್ಲುಗಳನ್ನು ಸಾಲಾಗಿ ಇಟ್ಟು ತುಲಸಿಯ ಸೊಪ್ಪಿನಿಂದ ಪೂಜಿಸುತ್ತಾ ಇರುವ ಸಮಯದಲ್ಲಿ ನಾವು ಹೋಗಿ ಆ ಕಲ್ಲುಗಳನ್ನೆಲ್ಲಾ ಬಾವಿಗೆ ಹಾಕಿ ಆ ಹಾರುವ ಪರವಾದಿಯನ್ನು ಜುಟ್ಟು ಹಿಡಿದು ಕೆಡವಿ ಎರಡು ಪಾದಗಳಿಂದಲೂ ಚೆನ್ನಾಗಿ ಪಾಲಿಸಿ ಆ ಮೇಲೆ ನಮ್ಮ ಜಳಕದ ಬಾವಿಯ ನೀರುಗಳನ್ನು ಹಾರುವ ಪರವಾಗಿ