ಪುಟ:ಕಥಾಸಂಗ್ರಹ ಸಂಪುಟ ೧.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 17 ಮುಟ್ಟಿ ಅಶುಚಿ ಮಾಡಿದ್ದ ಕಾರಣ ಆ ಹಳೆಯ ನೀರುಗಳನ್ನೆಲ್ಲಾ ಯಾತದಿಂದ ಮೇಲಕ್ಕೆ ಎತ್ತಿ ಸುರಿಸಿ ಹೊಸದಾಗಿ ಬಂದ ನೀರಿಗೆ ಸಂಪ್ರೋಕ್ಷಣೆಯನ್ನು ಮಾಡಿ ಶುದ್ದಿ ಮಾಡಿದೆವು ಎಂದು ಹೇಳಿದನು. ಆಗ ಶಿವಪ್ಪನಾಯಕನು--ಬುದ್ಧಿ ಬುದ್ದಿ ! ಬಹಳ ಒಳ್ಳೆಯ ಕೆಲಸವನ್ನು ಮಾಡಿದಿರಿ ! ಆದರೆ ಹಾರುವ ಪರವಾದಿಯನ್ನು ಮುಟ್ಟಿ ಅಶುಚಿಯಾದ ತಮ್ಮ ಪಾದಗಳಿಗೆ ತಮ್ಮ ಶಿಷ್ಯನಾದ ನಾನು ಶರಣುಮಾಡಿದರೆ ಕೆಟ್ಟು ಹೋಗುವೆನಲ್ಲ ವೋ ? ಎಂದು ಹೇಳಿ ತನ್ನ ಕೈಯ್ಯಲ್ಲಿ ಇದ್ದ ಕತ್ತಿಯಿಂದ ಆ ಜಂಗಮ ಯ್ಯನ ಎರಡು ಹೆಜ್ಜೆಗಳನ್ನೂ ಕತ್ತರಿಸಿಬಿಟ್ಟನು. ಆಗ ಜಂಗಮರೆಲ್ಲಾ ಆ ಸುದ್ದಿಯನ್ನು ಕೇಳಿ ಭಯಸ್ಥರಾಗಿ ಹೆಮ್ಮೆ ಮುರಿದು ನ್ಯಾಯ ದಿಂದ ನಡೆದು ಕೊಳ್ಳುತ್ತಾ ಬಂದರು. 20. THE LARK AND THE ELEPHANT. ೨೦. ಟಿಟ್ಟಿಭವೂ ಆನೆಯೂ. ಕಾರು ಕವೆಂಬ ವನದಲ್ಲಿ ವಿನಾಡಿಕವೆಂಬ ಟಿಟ್ಟಿಭವು ನೆಲದಲ್ಲಿ ಗೂಡು ಮಾಡಿ ಕೊಂಡು ಆ ಗೂಡಿನಲ್ಲಿ ತತ್ತಿಗಳನ್ನು ಇಟ್ಟು ಕೊಂಡು ಸುಖದಿಂದ ಇರಲು ಒಂದು ದಿನ ಆ ಮಾರ್ಗವಾಗಿ ಮದಿಸಿದ ಒಂದು ಅನೆಯು ಹೋಗುತ್ತಾ ಆ ತತ್ತಿಗಳನ್ನು ತುಳಿಯಿತು, ಆಗ ಟಿಟ್ಟಿಭನು ಅತಿದುಃಖದಿಂದ ಆ ಮದದಾನೆಯ ಬಳಿಗೆ ಹೋಗಿ ಎಲೋ ಗಜರಾಜಾ ! ನೀನು ಈ ಪ್ರಕಾರವಾಗಿ ನನ್ನ ತತ್ತಿಗಳನ್ನು ತುಳಿಯಬಹುದೋ ? ಎನಲು ಆ ಗಜವು-ನಾನು ತಿಳಿಯದೆ ನಿನ್ನ ತತ್ತಿಗಳನ್ನು ತುಳಿದೆನು. ಇನ್ನು ಮೇಲೆ ಈ ಪ್ರಕಾರವಾಗಿ ನಿನಗೆ ದ್ರೋಹವನ್ನು ಮಾಡುವುದಿಲ್ಲ ಎಂದು ನಂಬಿಕೆಯನ್ನು ಕೊಟ್ಟು ಅದನ್ನು ಕಳುಹಿಸಿತು. ಆ ಟಿಟ್ಟಿಭನು ಕೆಲವು ದಿನಗಳ ತರುವಾಯ ಪುನಃ ತತ್ತಿಗಳನ್ನು ಇಟ್ಟಿರಲು ಆ ಗಜವು ಅದೇ ಮಾರ್ಗದಲ್ಲಿ ಬರುತ್ತಾ ಕೊಟ್ಟ ನಂಬಿಕೆಯನ್ನು ಮರೆತು ಬಿಟ್ಟು ತಿರಿಗಿ ಅದರ ತತ್ತಿಗಳನ್ನು ತುಳಿಯಿತು. ಆಗ ಟಿಟ್ಟಿಭನು--ಈ ಆನೆಯಿಂದ ನನ್ನ ಸಂತತಿಯು ಅಭಿವೃದ್ಧಿಯಾಗುವುದಿಲ್ಲ ಎಂದು ಭಾವಿಸಿ ಮಹಾ ಕೋಪದಿಂದ-ಪೂರ್ವ ದಲ್ಲಿ ಕಾಗೆಯು ಸರ್ಪವನ್ನು ಕೊಲ್ಲಿಸಿದ ಪ್ರಕಾರ ಈ ಆನೆಯನ್ನು ಕೊಲ್ಲಿಸಬೇಕೆಂದು ಯೋಚಿಸಿ ತನ್ನ ಸ್ನೇಹಿತನಾದ ಮಂಡೂಕನ ಬಳಿಗೆ ಬಂದು ಅವನಿಗೆ ಈ ವಿವರವನ್ನು ಹೇಳಲು ಆ ಮಂಡೂಕವು ತನ್ನ ಸ್ನೇಹಿತರಾದ ವಾಯಸಮಕ್ಷಿಕಗಳನ್ನು ಕರಿಸಿಕೊಂಡು ಆಲೋಚನೆಯನ್ನು ಮಾಡಿ ಆಮೇಲೆ ಟಿಟ್ಟಿಭನೊಡನೆ ಕೂಡಿ ತಂತ್ರ ಯುಕನೆಂಬ ಜಂಬುಕರಾಜನ ಬಳಿಗೆ ಬಂದು ಅವನಿಗೆ ವಂದನೆಯನ್ನು ಮಾಡಿ ಟಿಟಿ ಭದ ಗತಿಯನು. ಹೇಳಿ-ಇದಕ್ಕೆ ತಕ್ಕ ಯೋಚನೆ ಯಾವುದು ? ಎಂದು ಕೇಳಿತು.” ಆ ಜಂಬುಕು ಒಂದು ಕುಹಕವನ್ನು ನೆನೆದು ವಾಯಸವನ್ನು ನೋಡಿ ನೀನು ಹೋಗಿ ಆನೆಯ ಮೇಲೆ ಕುಳಿತುಕೊಂಡು ಅದರ ಶರೀರದ ತೀಟೆ ಹೋಗುವಹಾಗೆ ಕಾಲಿನಿಂದ ತುರಿಸುತ್ತಾ ದರ ಎರಡು ಕಣ್ಣುಗಳನ್ನೂ ತಿವಿದು ಬಾ ಎಂದು ಹೇಳಲು ಅದು-ಒಳ್ಳೆಯದೆಂದು ದೋನ್ಮತ್ತವಾಗಿರುವ ಆ ಆನೆಯ ಸವಿಾಪಕ್ಕೆ ಅತಿವೇಗದಿಂದ ಬಂದು ಅದರ