ಪುಟ:ಕಥಾಸಂಗ್ರಹ ಸಂಪುಟ ೧.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 KANARESE SELECTIONS-PART I ಮೇಲೆ ಕುಳಿತು ಶರೀರವನ್ನು ತುರಿಸುತ್ತಾ ಇರಲು ಆ ಗಜವು ಶರೀರವನ್ನು ತಿಳಿಯದೆ ಪರವಶತೆಯಿಂದ ಇರುವ ವೇಳೆಯಲ್ಲಿ ಅದರ ಎರಡು ಕಣ್ಣುಗಳನ್ನು ತಿವಿದು ಬಂದಿತು. ಆಗ ಮಕ್ಷಿಕನನ್ನು ಕರೆದು-ನಿನ್ನ ಸಮೂಹದ ಕೂಡ ಹೋಗಿ ಅದರ ಶರೀರದ ರಕ್ತ ವನ್ನೆಲ್ಲಾ ಕುಡಿ ಎಂದು ಹೇಳಿ ಕಳುಹಿಸಲು ಅದು ಹಾಗೆಯೇ ಮಾಡಿತು. ಆ ಮೇಲೆ ಕಪ್ಪೆಯನ್ನು ಕರೆದು--ನೀನು ಹಾಳುಬಾವಿಯಲ್ಲಿ ನಿನ್ನ ಸಮೂಹದೊಡನೆ ಕೋಲಾ ಹಲಧ್ವನಿಯನ್ನು ಮಾಡಿಕೊಂಡು ಇರು ಎಂದು ಹೇಳಿ ಕಳುಹಿಸಿ ತಾನು ತನ್ನ ಕುಲ ಕೋಟಿಯನ್ನು ಕರೆದು ಕೊಂಡು ಹೋಗಿ ಸಿದ್ಧವಾಗಿ ಕಾದು ಇರಲು ಆ ಮದಗಜವು ಕಣ್ಣು ಕಾಣದೆ ನೊಣದ ಕಾಟಗಳಿಂದ ತೊಳಲಿಬಳಲಿ ದಾವರಗೊಂಡು ಕಪ್ಪೆಯ ಧ್ವನಿಯನ್ನು ಕೇಳಿ ಇದು ಉದಕವಿರುವ ಸ್ಥಳವೆಂದು ನೆನಸಿ ಬಂದು ಆ ಹಾಳುಬಾವಿ ಯಲಿ ಬೀಳಲು ಆಗ ಆ ಜಂಬುಕಗಳು ಕಟ್ಟಿಗೆ ಸೊಪ್ಪು ಕಲು ಮುಳ್ಳುಗಳನ್ನು ತಂದು ಅದರಲ್ಲಿ ಹಾಕಿ ಬೆಂಕಿಯನ್ನು ಹತ್ತಿ ಸಲು ಆನೆಯು ಅಲ್ಲೇ ಮೃತವಾಯಿತು. 21. THE TWO MERCHANTS. ೨೧. ಇಬ್ಬರು ವರ್ತಕರು. ಶಯ್ಯಾವತಿ ಎಂಬ ಪಟ್ಟಣದಲ್ಲಿ ವಿವೇಕ ದರ್ಪಣನೆಂಬ ವರ್ತಕನು ಇದ್ದನು. ಅವನು ಕಬ್ಬಿಣದ ಪಾಳುಗಳನ್ನು ಹೇರುಗಳಲ್ಲಿ ತುಂಬಿಕೊಂಡು ಕಳಾವತಿ ಎಂಬ ಪಟ್ಟಣಕ್ಕೆ ಹೋಗಿ ವಿಚಾರಿಸಲು ಅಲ್ಲಿ ಕಬ್ಬಿಣವು ಬಹಳ ಅಗ್ಗವಾಗಿದ್ದಿತು ; ಈಗ ಮಾರಿದರೆ ಮಲಧನವೇ ಮುಣಗೀತು ಎಂದು ಯೋಚಿಸಿ ಆ ಕಬ್ಬಿಣದ ಹೇರುಗಳನ್ನು ಅದೇ ಪಟ್ಟಣದಲ್ಲಿರುವ ಕ್ರೂರವರ್ಮನೆಂಬ ವರ್ತಕನ ಮನೆಯಲ್ಲಿ ಹಾಕಿ ಆ ಸ್ಥಳಕ್ಕೆ ಬಾಡಿಗೆಯನ್ನು ನಿರ್ಣಯ ಮಾಡಿ ಅದನ್ನು ಅವನಿಗೆ ಕೊಟ್ಟು ತಿರಿಗಿ ತನ್ನ ಪಟ್ಟಣಕ್ಕೆ ಹೋದನು. ಹೀಗೆ ಕೆಲವು ದಿವಸಗಳು ಕಳೆದ ಮೇಲೆ ಕಬ್ಬಿಣವು ತಗ್ಗಾಗಿ ಗಿರಾಕಿ ಗಳು ಬಹಳವಾಗಿ ಬರಲು ಈ ಕ್ರೂರವರ್ಮನು ಆ ಕಬ್ಬಿಣವನ್ನು ಮಾರಿ ಹಣವನ್ನು ಇಟ್ಟು ಕೊಂಡು ಏನೂ ಅರಿಯದವನ ಹಾಗೆ ಇದ್ದನು. ಕೆಲವು ದಿನಗಳ ಮೇಲೆ ಆ ವಿವೇಕ ದರ್ಪಣನು ಬಂದು ಇಟ್ಟಿದ್ದ ಕಡೆಯಲ್ಲಿ ತನ್ನ ಕಬ್ಬಿಣವನ್ನು ಕಾಣದೆ ಕ್ರೂರವರ್ಮನ ಬಳಿಗೆ ಬಂದು ನನ್ನ ಕಬ್ಬಿಣವೇನಾಯಿತೆಂದು ಕೇಳಿದನು. ಅದಕ್ಕೆ ಆ ವರ್ತಕನು- ನೀನು ಹೋಗಿ ಬಹಳ ದಿವಸಗಳಾದ ಕಾರಣ ಉತ್ಪಾತವಾದೆ. ಇಲಿಗಳು ಬಂದು ಕಬ್ಬಿಣವೆಲ್ಲ ವನ್ನೂ ತಿಂದು ಹೋದವು ಎನ್ನಲು ಆ ವಿವೇಕದರ್ಪ ಇನು ಅವನ ಸಂಗಡ ವ್ಯವಹಾರವನ್ನಾಡದೆ-ಅದು ನನಗೆ ಲಭ್ಯವಿಲ್ಲ ದಕಾರಣ ಹೋಯಿತೆಂದು ಹೇಳಿ ಅವನಲ್ಲಿ ಮತ್ತೂ ಹೆಚ್ಚಾಗಿ ಸ್ನೇಹವನ್ನು ಬಳಸಿಕೊಂಡು ಇದ್ದು ಒಂದಾನೊಂದು ದಿನ ಆ ವರ್ತಕನ ಮಗನನ್ನು ತನ್ನ ಸಂಗಡ ಕರೆದು ಕೊಂಡು ಹೋಗಿ ತನಗೆ ಆಪ್ತನಾದ ಒಬ್ಬ ವರ್ತಕನ ಮನೆಯಲ್ಲಿ ಆ ಹುಡುಗನನ್ನು ಇರಿಸಿ ಸಾಯ ಕಾಲದ ವೇಳೆಯಲ್ಲಿ ಬಳಲುತ್ತಾ ಒಬ್ಬನೇ ಈ ವರ್ತಕನ ಮನೆಗೆ ಬಂದನು.