ಪುಟ:ಕಥಾಸಂಗ್ರಹ ಸಂಪುಟ ೧.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 19 ವರ್ಮನು ವಿವೇಕದರ್ಪಣನನ್ನು ನೋಡಿ-ಚಿಕ್ಕವನು ಎಲ್ಲಿ ? ಎಂದು ಕೇಳಲು ಆ ವರ್ತಕನು ಖಿನ್ನನಾಗಿ -ಅಯಾ, ಕರವರ್ಮನೇ ! ನಾನು ಮಾಡಿದ ಕಾರ್ಯ ವನ್ನು ಏನೆಂದು ಹೇಳಲಿ ! ನಾನು ನಿನ್ನ ಹುಡುಗನನ್ನು ಕರೆದುಕೊಂಡು ತಟಾಕದ ತಡಿಯಲ್ಲಿ ಕುಳ್ಳಿರಿಸಿ ತಟಾಕದೊಳಗೆ ಮುಖಮಜ್ಜನವನ್ನು ಮಾಡುತ್ತಿರಲು ಒಂದು ಉತ್ಪಾತವಾದ ಹದ್ದು ಬಂದು ನಿನ್ನ ಸುಕುಮಾರನನ್ನು ಎತ್ತಿ ಕೊಂಡು ಹೋಯಿತು ಅಂದನು. ಕ್ರೂರವರ್ಮನು ಕೇಳಿ ಆಗ್ರಹಪಟ್ಟು ಆ ವರ್ತಕನ ಸೆರಗನ್ನು ಹಿಡಿದು ಎಳೆದು ಕೊಂಡು ಹೋಗಿ ಅಧಿಕಾರಿಗಳ ಮುಂದೆ ನಿಲ್ಲಿಸಲು ಸಭೆಯವರು ವಿವೇಕ ದರ್ಪಣನನ್ನು ನೋಡಿ--ನಿನ್ನ ನ್ಯಾಯವೇನೆಂದು ಕೇಳಲು ಅವನು--ಸ್ವಾಮಿಾ ! ನಾನು ಈ ವರ್ತಕನ ಮಗನನ್ನು ಕರೆದುಕೊಂಡು ಹೋಗಿ ಕೆರೆಯ ತಡಿಯಲ್ಲಿ ಕುಳ್ಳಿರಿಸಿ ಮು ವಿಮಜ್ಜನವನ್ನು ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಒಂದು ಉತ್ಪಾತವಾದ ಹದ್ದು ಬಂದು ಆ ಹುಡುಗನನ್ನು ಎತ್ತಿ ಕೊಂಡು ಹೋಯಿತು ಎನ್ನಲು ಆ ಸಭೆಯವರೆಲ್ಲ ರೂ ವರ್ತಕನನ್ನು ಜರಿದು-ಮನುಷ್ಯರನ್ನು ಹದ್ದು ಎತ್ತಿ ಕೊಂಡು ಹೋಗುವುದುಂಟೇ ? ಎಂದು ಕೇಳಲು ಅವನು--ಎಲೈ ಧರಾತ್ಮರುಗಳಿರಾ ! ಮನು ಸ್ಯರನ್ನು ಹದ್ದು ಎತ್ತಿ ಕೊಂಡು ಹೋಗುವುದುಂಟೇ ? ಎಂದು ಕೇಳಿದಿರಾ ? ಇಲಿಗಳು ಕಬ್ಬಿಣವನ್ನು ತಿನ್ನು ವುದುಂಟೇ ? ವಿಚಾರಿಸಿರಿ ಎನ್ನಲು ಅವನ ಉಪಾಯಕ್ಕೆ ಮೆಚ್ಚಿ ಸಭೆಯವರು ವಿಚಾರದಿಂದ ಕೂರವರ್ಮನನ್ನು ದಂಡಿಸಿ ಆ ಕಬ್ಬಿಣವನ್ನು ಮಾರಿದ ಹಣವನ್ನೂ ಆವರೆಗೆ ಆದ ಬಡ್ಡಿಯನ್ನೂ ವಿವೇಕದರ್ಪಣನಿಗೆ ಕೊಡಿಸಿ ಹುಡುಗನನ್ನು ಕರತರಿಸಿ ಕ್ರೂರವರ್ಮನ ವಶಕ್ಕೆ ಕೊಡಿಸಿ ಇಬ್ಬರನ್ನೂ ಕಳುಹಿಸಿಬಿಟ್ಟರು. 22, THE EVIL OF BAD COMPANY. ೨೨, ದುಸ್ಸಹವಾಸ ದೋಷ. ಬ್ರಹ್ಮಪುರವೆಂಬ ಅಗ್ರಹಾರದಲ್ಲಿರುವ ಪುಣ್ಯಶೀಲನೆಂಬ ಬ್ರಾಹ್ಮಣನ ಬಳಿಯಲ್ಲಿ ಒಂದು ಆಕಳು ಇದ್ದಿತು. ಅದು ಬಹಳ ಸಾಧುವಾಗಿ ಹಾಲು ಕೊಟ್ಟುಕೊಂಡು ಇರುವುದು, ಅದೇ ಊರಿನಲ್ಲಿ ದುರ್ಣಯನೆಂಬ ತಳವಾರನ ಮನೆಯಲ್ಲಿ ಇರುವ ಒಂದು ಆಕಳು ರಾತ್ರಿ ಕಾಲವೆಲ್ಲಾ ಕಳ್ಳಮೇವನ್ನು ಮೇದು ಪ್ರಾತಃಕಾಲಕ್ಕೆ ಸರಿಯಾಗಿ ಬಂದು ಮನೆಯನ್ನು ಸೇರುವುದು, ಹೀಗಿರುವಲ್ಲಿ ಒಂದಾನೊಂದು ದಿವಸ ಈ ಎರಡು ಆಕಳುಗಳೂ ಅಡವಿಯಲ್ಲಿ ಮೇಯುತ್ತಾ ಇರುವಾಗ ಕಳ್ಳ ಹಸುವು ಆ ಸಾಧುವಾದ ಆಕಳನ್ನು ನೋಡಿ ನೀನು ಬಡವಾಗಿರುವುದಕ್ಕೆ ಕಾರಣವೇನು ? ಎನ್ನಲು ಅದಕ್ಕೆ ಆ ಹಸುವು-ನನ್ನ ಒಡೆಯನು ದರಿದ್ರನಾದ ಕಾರಣ ಮನೆಯಲ್ಲಿ ನನಗೆ ಸಾಕಾಗು ವಷ್ಟು ಹುಲ್ಲು ಇಲ್ಲದಿರುವುದೇ ಈ ಪ್ರಕಾರ ಕೃಶವಾಗುವುದಕ್ಕೆ ಕಾರಣವು ಎಂದು ಹೇಳಿತು. ಆಗ ಆ ದುಷ್ಟ ಗೋವು-ಈ ದಿವಸ ನೀನು ನನ್ನ ಬಳಿಯಲ್ಲಿ ಇದ್ದರೆ ನಿನಗೆ * ಸವನ್ನು ಪೂರ್ಣವಾಗಿ ಕೊಡಿಸುವೆನು ಎಂದು ಹೇಳಲು ಅದು ಆ ಮಾತನ್ನು