ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 KANARESE SELECTIONS-PART I ನಂಬಿ ಆ ರಾತ್ರಿಯಲ್ಲಿ ತನ್ನ ಮನೆಗೆ ಹೋಗದೆ ಈ ದುಷ್ಪಗೋವಿನ ಸಂಗಡಲೇ ಇದ್ದಿತು, ಆ ಎರಡು ಗೋವುಗಳು ಕತ್ತಲೆಯಾದ ತರುವಾಯ ಅರಮನೆಯ ಗದ್ದೆ ಯನ್ನು ಹೊಕ್ಕು ಹುಲ್ಲನ್ನು ಮೇಯುತ್ತಾ ಇದ್ದುವು ದುಷ್ಟ ಆಕಳು ಶೀಘ್ರವಾಗಿ ಕಬಳವನ್ನು ತೆಗೆದುಕೊಳ್ಳುತ್ತಾ ಕಾವಲವರನ್ನು ಕಂಡು ಜೊತೆಯ ಹಸುವಿಗೆ ಹೇಳದೆ ಓಡಿ ಹೋಯಿತು. ಈ ಸಾಧುವಾದ ಆಕಳು ಬಹು ದಿವಸಕ್ಕೆ ಪೂರ್ಣವಾದ ಗ್ರಾಸ ದೊರಕಿತೆಂಬ ಸಂತೋಷದಿಂದ ನಿಧಾನವಾಗಿ ಮೇಯುತ್ತಿರಲು ಆ ಆಕಳನ್ನು ನೋಡಿ ಕಾವಲವರು ಹೊಂಚಿಕೊಂಡು ಸವಿಾಪಕ್ಕೆ ಬಂದು ದೊಣ್ಣೆಗಳಿಂದ ಹೊಡೆದು ಚಾವ ಡಿಗೆ ಹಿಡಿದು ತಂದು ಆ ವಿಪ್ರನನ್ನು ಕರಿಸಿ ಬಹಳ ದಿನಗಳಿಂದ ಅರಮನೆಯ ಗದ್ದೆ ಯನ್ನು ಮೇದುದಕ್ಕೆ ಅಪರಾಧವನ್ನು ಕೊಡಬೇಕೆಂದು ಬಹಳವಾಗಿ ಬಾಧೆಪಡಿಸಿ ಅವನಿಂದ ಅಪರಾಧವನ್ನು ತೆಗೆದು ಕೊಂಡು ಆಕಳನ್ನು ಅವನ ವಶಕ್ಕೆ ಕೊಟ್ಟು ಭಯ ವಿರುವ ಹಾಗೆ ಹೇಳಿ ಕಳುಹಿಸಿದರು. ಆ ವಿಪ್ರನು ಮನೆಗೆ ಬಂದು ಮಹಾ ಕೋಪದಿಂದ ಆಕಳನ್ನು ಹೊಡೆದು ಕೊರಳಿಗೆ ದಂಡಿಯನ್ನು ಕಟ್ಟಿ ಮಂದೆಗೆ ಬಿಡಲು ಆ ಮಂದೆಯ ಲ್ಲಿದ್ದ ದುಷ್ಟಗೋವು ಇದನ್ನು ನೋಡಿ ಕೊರಳಿಗೆ ದಂಡಿಯು ಬರುವುದಕ್ಕೆ ಕಾರಣ ವೇನೆಂದು ಕೇಳಲು ಆ ಸಾಧುವಾದ ಹಸುವು-ನಿನ್ನ ಸಹವಾಸವೇ ಹೀಗಾಗುವುದಕ್ಕೆ ಕಾರಣವೆಂದು ಹೇಳಿ ಅದರ ಜೊತೆಯನ್ನು ಬಿಟ್ಟು ಬಿಟ್ಟಿತು. ಆದಕಾರಣ ದುರ್ಜನರ ಸಹವಾಸವನ್ನು ಮಾಡಿದರೆ ಸಜ್ಜನರಿಗೆ ಕೇಡು ಬರುವುದು. 23, TENNALARAMAKRISHNA AND THE KING'S KITTEN. ೨೩. ತೆನ್ನಾಲರಾಮಕೃಷ್ಣನೂ ಅರಸಿನ ಬೆಕ್ಕಿನ ಮರಿಯೂ. ಅಚ್ಯುತರಾಯನು ಒಂದು ದಿವಸ ತವರಿನ ಪ್ರತಿಮನೆಯವರಿಗೂ ಒಂದೊಂದು ಬೆಕ್ಕಿನ ಮರಿಯನ್ನೂ ಒಂದೊಂದು ಆಕಳನ್ನೂ ಕೊಟ್ಟು ಈ ಆಕಳಿನ ಹಾಲನ್ನು ಬೆಕ್ಕಿಗೆ ಹಾಕಿ ಚೆನ್ನಾಗಿ ಸಾಕಿ ನಾವು ಹೇಳಿ ಕಳುಹಿಸಿದಾಗ ಅವುಗಳನ್ನು ತೆಗೆದು ಕೊಂಡು ಬರಬೇಕು ಎಂದು ಆಜ್ಞಾಪಿಸಿದನು. ಆಗ ತೆನ್ನಾ ಲರಾಮಕೃಷ್ಣನು ತಾನೂ ಒಂದು ಬೆಕ್ಕನ್ನೂ ಆಕಳನ್ನೂ ತೆಗೆದು ಕೊಂಡು ಹೋಗಿ ಆಕಳಿನ ಹಾಲನ್ನು ಉಕ್ಕುವ ಹಾಗೆ ಕಾಯಿಸಿ ಬೆಕ್ಕಿನ ಮರಿಯ ಮುಂದೆ ಇಟ್ಟನು. ಅದು ಹಾಲನ್ನು ಕುಡಿಯು ವುದಕ್ಕೆ ಬಾಯಿ ಹಾಕಿದುದರಿಂದ ಅದರ ತುಟಿಯು ಗಾಯವಾಗುವಂತೆ ಸುಡಲು ಆ ದಿವಸ ಮೊದಲ್ಗೊಂಡು ಆ ಬೆಕ್ಕಿನ ಮರಿಯು ಹಾಲನ್ನು ಕಂಡಕೂಡಲೆ ಹೆದರಿ ದೂರಕ್ಕೆ ಓಡಿ ಹೋಗುತ್ತಾ ಇತ್ತು. ಇಲ್ಲಿ ಹೀಗಿರಲು ಮಿಕ್ಕ ಜನರೆಲ್ಲರೂ ಕ್ರಮ ವಾಗಿ ಹಾಲು ಹಾಕಿ ಅವುಗಳನ್ನು ಸಾಕುತ್ತಾ ಬಂದರು. ತರುವಾಯ ಆರು ತಿಂಗ ಭುಗಳಾದ ಮೇಲೆ ರಾಯರು-ಬೆಕ್ಕಿನ ಮರಿಗಳನ್ನು ತೆಗೆದು ಕೊಂಡು ಬರಬೇಕೆಂದು ಎಲ್ಲರಿಗೂ ಹೇಳಿ ಕಳುಹಿಸಲು ಆಗ ಎಲ್ಲರೂ ತೆಗೆದು ಕೊಂಡು ಬಂದರು. ರಾಯರು ಎಲ್ಲಾ ಬೆಕ್ಕು ಗಳೂ ಪುಷ್ಟಿಯಾಗಿರುವುದನ್ನೂ ರಾಮಕೃಷ್ಣನ ಬೆಕ್ಕು ಮಾತ್ರ ಬಗೆ