ಕಥಾಸಂಗ್ರಹ_ ೧ನೆಯ ಭಾಗ 21 ಗಿರುವುದನ್ನೂ ನೋಡಿ ರಾಮಕೃಷ್ಣನನ್ನು ಕುರಿತು-ಈ ಬೆಕ್ಕಿನ ಮರಿಯು ಇದೇಕೆ ಹೀಗೆ ಬಡವಾಗಿದೆ ? ಎಂದು ಕೇಳಲು ಅವನು--ಸ್ವಾಮಿ ! ಈ ಮರಿಯು ಹಾಲನ್ನು ಕಂಡರೆ ಕುಡಿಯದೆ ಓಡಿ ಹೋಗುತ್ತದೆ. ಆದುದರಿಂದ ಕಡಮೆ ಬೆಕ್ಕುಗಳ ಹಾಗೆ ಪುಷ್ಟಿಯಾಗಿಲ್ಲವೆಂದು ಹೇಳಲು ರಾಯನು ಅವನ ಮಾತನ್ನು ನಂಬದೆ ಹಾಲನ್ನು ತರಿಸಿ ಇರಿಸಲು ಅದು ಅದನ್ನು ಕಂಡ ಒಡನೆ ಓಡಿಹೋಗುತ್ತಿರಲು ಅದರ ತುಟಿಯು ಸುಟ್ಟು ಇರುವ ಗುರುತನ್ನು ಕಂಡು--ಬಿಸಿ ತಗುಲಿದ ಬೆಕ್ಕು ಒಲೆಯ ಬಳಿಯನ್ನು ಸೇರದು ಎಂಬ ಗಾದೆಗೆ ಸರಿಯಾಗಿದೆ ಎಂದು ಹೇಳಿ ರಾಮಕೃಷ್ಣನ ಕುಚೇಷ್ಟೆ ಗೆ ನಕ್ಕು ಅವ ನನ್ನು ಕಳುಹಿಸಿಬಿಟ್ಟನು. 24, TENNALARAMAKRISHNA AND THE KING'S COLT. ೨೪, ತೆನ್ನಾಲರಾಮಕೃಷ್ಣನೂ ರಾಯನ ಕುದುರೆಯ ಮರಿಯೂ. ಗೌಡ ದೇಶದಲ್ಲಿ ಅಚ್ಚುತರಾಯನೆಂಬ ಒಬ್ಬ ಅರಸನು ಇದ್ದನು, ಆ ರಾಯನು ಒಂದು ದಿವಸ ಕೆಲವು ಕುದುರೆಯ ಮರಿಗಳನ್ನು ತರಿಸಿ ತನ್ನ ಪಟ್ಟಣದೊಳಗೆ ಇದ್ದ ಜನರೆಲ್ಲರನ್ನೂ ಕರಿಸಿ ಒಬ್ಬೊಬ್ಬರಿಗೆ ಒಂದೊಂದು ಕುದುರೆಯ ಮರಿಯನ್ನು ಕೊಟ್ಟು ಅವುಗಳನ್ನು ಸಾಕುವುದಕ್ಕೆ ತಾನು ತಿಂಗಳಿಗೆ ಪ್ರತಿಯೊಬ್ಬರಿಗೂ ಮರು ಮರು ವರಹಗಳನ್ನು ಕೊಡುವುದಾಗಿ ಹೇಳಿ--ಇದರ ಸಹಾಯದಿಂದ ತ್ವರೆಯಾಗಿ ದೊಡ್ಡವು ಗಳಾಗುವ ಹಾಗೆ ಚನ್ನಾಗಿ ಸಾಕಿ ಅವುಗಳನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ ಎಂದು ಆಜ್ಞಾಪಿಸಿ ಎಲ್ಲರನ್ನೂ ಕಳುಹಿಸಿದನು. ಅದೇ ಮೇರೆಗೆ ಅವರೆಲ್ಲರೂ ಆ ಮರಿ ಗಳನ್ನು ಬಹಳ ಚೆನ್ನಾಗಿ ಪೋಷಿಸಿಕೊಂಡು ಬರುತ್ತಾ ಇದ್ದರು. ತೆನ್ನಾಲರಾಮ ಕೃಷ್ಣನು ಮಾತ್ರ ತನ್ನ ಮನೆಯ ಅಂಗಳದಲ್ಲಿ ಕುದುರೆ ಮರಿಯನ್ನು ನಿಲ್ಲಿಸಿ ಅದರ ಸುತ್ತಲೂ ಗೋಡೆಯನ್ನು ಹಾಕಿ ಆ ಗೋಡೆಯ ಒಂದು ಪಕ್ಕದಲ್ಲಿ ಒಂದು ದ್ವಾರವನ್ನು ಮಾಡಿ ಒಳಗೆ ಅದರ ಮತಿಯ ಎದುರಿಗೆ ಒಂದು ಹಳ್ಳವನ್ನು ಮಾಡಿ ಬೆಳಗಿನ ಹೊತ್ತು ಒಂದು ಹಿಡಿ ಹುಲ್ಲನ್ನು ಆ ದ್ವಾರದಿಂದಲೇ ಕೊಟ್ಟು ಅದೇ ದ್ವಾರದಿಂದ ಆ ಹಳ್ಳದಲ್ಲಿ ಕುಡಿಯುವುದಕ್ಕೆ ಸ್ವಲ್ಪ ನೀರನ್ನು ಬಿಡುತ್ತಾ ಸಾಯಂಕಾಲದಲ್ಲಿಯೂ ಅದೇ ಮೇರೆಗೆ ಮಾಡುತ್ತಾ ಬಂದನು, ಈ ಪ್ರಕಾರ ಮೂರು ಸಂವತ್ಸರಗಳಾದ ತರುವಾಯ ರಾಯನು ಕುದುರೆಯ ಮರಿಗಳನ್ನು ತೆಗೆದು ಕೊಂಡು ಬರಬೇಕೆಂದು ಎಲ್ಲರಿಗೂ ಅಪ್ಪಣೆಯನ್ನು ಮಾಡಲು ಅದೇ ಮೇರೆಗೆ ಜನರೆಲ್ಲರೂ ತೆಗೆದು ಕೊಂಡು ಬಂದರು. ಅವರು ತಂದ ಮರಿಗಳೆಲ್ಲವೂ ರಕ್ತ ಮಾಂಸ ಕೂಡಿ ಮೈಬ೦ದು ಹೊಳೆಯುತ್ತಿದ್ದುವು. ಹೀಗೆ ಇರುವ ಮರಿಗಳನ್ನು ರಾಯನು ನೋಡಿ ಸಂತೋಷಪಟ್ಟು ತೆನ್ನಾಲರಾಮಕೃಷ್ಣನು ಮಾತ್ರ ಇನ್ನೂ ಕುದುರೆಯ ಮರಿಯನ್ನು ತರಲಿಲ್ಲ ವೆಂಬುದನ್ನು ತಿಳಿದು ಅವನನ್ನು ಕರಸಿ-- ನೀನು ಕುದುರೆಯ ಮರಿಯನ್ನು ಇನ್ನೂ ಯಾಕೆ ತೆಗೆದು ಕೊಂಡು ಬರಲಿಲ್ಲ ವೆಂದು ಕೆ ಗಲು ರಾಮಕೃಷ್ಣನು-ನನ್ನ ಪೋಷಣೆಯಲ್ಲಿ ಇರುವ ಕುದುರೆಯ ಮರಿಯನ್ನು
ಪುಟ:ಕಥಾಸಂಗ್ರಹ ಸಂಪುಟ ೧.djvu/೩೩
ಗೋಚರ