ಪುಟ:ಕಥಾಸಂಗ್ರಹ ಸಂಪುಟ ೧.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 KANARESE SELECTIONS-PARTI ನಾನು ತರಲಾರೆನು, ನಿಮ್ಮ ಬಳಿಯಲ್ಲಿರುವ ಸೇವಕರಲ್ಲಿ ಒಬ್ಬನನ್ನು ಕಳುಹಿಸಿದರೆ ಅವನು ಅದನ್ನು ತೆಗೆದು ಕೊಂಡು ಬರುವನೆಂದು ಹೇಳಿದನು. ಅದೇ ಮೇರೆಗೆ ರಾಯನು ತನ್ನ ನೃತ್ಯರಲ್ಲಿ ಹಳಬನೂ ಗಟ್ಟಿ ಗನೂ ಆದ ಒಬ್ಬ ಸೇವಕನನ್ನು ಕರಿಸಿ ಅವನನ್ನು ರಾಮ ಕೃಷ್ಣನ ಸಂಗಡ ಕಳುಹಿಸಿದನು, ಆ ರಾವುತನಿಗೆ ಒಂದೂ ಮುಕ್ಕಾಲು ಮೊಳ ಉದ್ದವಾದ ಗಡ್ಡವಿರುವುದು, ರಾಮಕೃಷ್ಣನು ಅವನನ್ನು ತನ್ನ ಸಂಗಡ ಕರೆದುಕೊಂಡು ಹೋಗಿ-ಆ ದ್ವಾರದಿಂದ ಕುದುರೆಯನ್ನು ನೋಡೆಂದು ಹೇಳಿದನು. ಆಗ ಅವನು ಅದೇ ಪ್ರಕಾರವಾಗಿ ಕನ್ನ ದಲ್ಲಿ ಬೊಗ್ಗಿ ನೋಡಲು ಆ ಕುದುರೆಯು ಅವನ ಗಡ್ಡವನ್ನು ಕಂಡು ಎಂದಿನ ಹಾಗೆ ಹುಲ್ಲು ಕೊಡುತ್ತಾನೆಂದು ತಿಳಿದು ಅವನ ಗಡ್ಡವನ್ನು ಬಲವಾಗಿ 'ಹಿಡಿದು ಕೊಂಡು ಎಳೆಯುವುದಕ್ಕೆ ಆರಂಭಿಸಿತು. ಆಗ ಆ ರಾವತನು ಆಯ್ಕೆ ದೇವರೇ ! ಎಂದು ಕೂಗಿಕೊಂಡು ಅಳುತ್ತಿದ್ದನು, ಆಮೇಲೆ ರಾಮಕೃಷ್ಣನು ತರೆ ಯಾಗಿ ರಾಯನ ಬಳಿಗೆ ಹೋಗಿ ಸೇವಕನಿಗೆ ಸಂಭವಿಸಿದ ಕಷ್ಟವನ್ನು ಹೇಳಲು ರಾಯನು ಅಪ್ಪಾಜಿಯನ್ನು ಸಂಗಡ ಕರೆದುಕೊಂಡು ಒಂದು ಕುದುರೆಯನ್ನು ಹೊರಗೆ ತೆಗೆಸಿ ಅದು ಬಡವಾಗಿರುವುದನ್ನು ನೋಡಿ-ಯಾಕೆ ಕುದುರೆಯು ದುರ್ಬಲವಾಗಿದೆ ? ಎಂದು ಕೇಳಲು ಅದಕ್ಕೆ ರಾಮಕೃಷ್ಣನು ಅಯ್ಯಾ ! ನಾನು ಈ ಪ್ರಕಾರವಾಗಿ ಇಟ್ಟಿರುವಾ ಗಲೇ ರಾವುತನ ಗಡ್ಡವನ್ನು ಹಿಡಿದು ಕೊಂಡಿತು. ಇನ್ನೂ ಚೆನ್ನಾಗಿ ಪೋಷಿಸಿದ್ದರೆ ಇನ್ನೇನು ಮಾಡುತ್ತಾ ಇತ್ತೊ ಎಂದು ಹೇಳಲು ರಾಯನು ಅವನ ಕುಚೇಷ್ಟೆಗೆ ನಕ್ಕು ಅರಮನೆಗೆ ಹೋದನು. 25, THE LARK AND THE MYNA. ೨೫, ಟಿಟ್ಟಿಭವೂ ಗೊರವಂಕವೂ. ಚಂಪಕಾರಣ್ಯದಲ್ಲಿ ಒಂದು ಆಲದ ಮರವು ಇರುವುದು, ಅದರಲ್ಲಿ ಒಂದು ಟಿಟ್ಟಿಭಪಕ್ಷಿಯು ಬಹಳ ದಿವಸಗಳಿಂದ ಗೂಡು ಕಟ್ಟಿ ಕೊಂಡು ಇದ್ದಿತು, ಒಂದು ದಿನ ಆ ಟಿಟ್ಟಿಭವು ಆಹಾರಾರ್ಥವಾಗಿ ಹೊರಗೆ ಹೋಗಿರಲು ಶಕಟನೆಂಬ ಒಂದು ಗೊರವಂಕನು ಬಂದು ಆ ಟಿಟ್ಟಿಭನ ಗೂಡನ್ನು ಸೇರಿಕೊಂಡಿತು, ಆ ಮೇಲೆ ಈ ಟಿಟ್ಟಿಭನು ಬಂದು ತನ್ನ ಗೂಡನ್ನು ಸೇರಿಕೊಂಡಿರುವ ಗೊರವಂಕನನ್ನು ನೋಡಿ ನನ್ನ ಗೂಡಿನಲ್ಲಿ ನೀನು ಇರುವುದಕ್ಕೆ ಕಾರಣವೇನು ? ಎನ್ನಲು ಗೊರವಂಕನು--ಈ ಗೂಡು ನಮ್ಮ ತಂದೆಯ ಕಾಲದಿಂದಲೂ ನನ್ನ ದಾಗಿರುವಲ್ಲಿ ನೀನು ನನ್ನ ದು ಎಂಬು ವುದು ಬಹಳ ಚೆನ್ನಾಗಿದೆ ! ನಿನಗೆ ವಿವೇಕವಿಲ್ಲವೆಂದು ಟಿಟ್ಟಿಭನನ್ನು ಗದರಿಸಲು ಆ ಟಿಟ್ಟಿಭವು ಆಗ್ರಹ ಪಟ್ಟು--ನಿನಗೆ ವಿವೇಕವಿಲ್ಲ, ನೀನು ಇಂಧಾ ದುರಾಚಾರ ವನ್ನು ಮಾಡಿದುದರಿಂದ ನಿನಗೆ ತಕ್ಕ ಬುದ್ದಿ ಯನ್ನು ಕಲಿಸುವೆನೆಂದು ಹೇಳಿತು. ಹೀಗೆ ಒಬ್ಬರಿಗೊಬ್ಬರಿಗೆ ರೋಷಾವೇಶಗಳು ಹುಟ್ಟಿ ಕೆಟ್ಟ ಮಾತುಗಳನ್ನು ಆಡಿಕೊಂಡು ತಮ್ಮ ಕುಲದವರ ಬಳಿಗೆ ಬಂದು ಈ ನ್ಯಾಯವನ್ನು ಅವರಲ್ಲಿ ಹೇಳಿಕೊಳ |