ಪುಟ:ಕಥಾಸಂಗ್ರಹ ಸಂಪುಟ ೧.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 23 ಆ ಪಕ್ಷಿ ಗಳು ಕೇಳಿ--ನಾವು ಪಕ್ಷಿಗಳು ; ನಮಗೆ ಮನೆ ಅಂದರೆ ಏನು ? ಅಡವಿಯ ಲ್ಲಿದ್ದ ಫಲಗಳನ್ನು ತಿಂದುಕೊಂಡು ವಸತಿಯಾದ ಸ್ಥಳದಲ್ಲಿ ನಿದ್ರೆ ಮಾಡಿಕೊಂಡು ಇರಬೇಕಲ್ಲದೆ ಈ ಕಲಹದಿಂದ ಏನು ಪ್ರಯೋಜನವೆಂದು ಎಷ್ಟು ಪ್ರಕಾರವಾಗಿ ತಿಳಿಯ ಹೇಳಿದರೂ ಕೇಳದೆ ರಾಜಾಸ್ತಾನಕ್ಕೆ ಹೋಗುವೆವೆಂದು ಗರ್ವದಿಂದ ಆಮ ರಾವತಿ ಎಂಬ ಪಟ್ಟಣವನ್ನಾಳುವ ಬಾಹುಬಲನೆಂಬ ರಾಯನ ಬಳಿಗಾಗಿ ಹೊರಟುವು. ಇದಕ್ಕಿಂತ ಮುಂಚೆ ಆ ರಾಯನು ತನ್ನ ರಾಜ್ಯದಲ್ಲಿ ಇರುವ ವೈದ್ಯರನ್ನು ಕರಿಸಿ ತನ್ನ ಶರೀರವು ಪುಷ್ಟಿ ಯಾಗುವುದಕ್ಕೆ ಏನನ್ನು ಭಕ್ಷಿಸಬೇಕೆಂದು ಕೇಳಲು ಆ ವೈದ್ಯರು ಓ ರಾಯನೇ? ತುಪ್ಪದಿಂದ ಬುದ್ದಿಯ ಹಾಲಿನಿಂದ ಆಯುಷ್ಯವೂ ಶಾಕಗಳಿಂದ ರೋಗವೂ ಮಾಂಸದಿಂದ ಮಾಂಸವೂ ವೃದ್ದಿಯನ್ನು ಹೊಂದುವುವು ಎಂದು ಶಾಸ್ತ್ರವಿರು ವುದರಿಂದ ನೀನು ಹಗಲು ಭೋಜನದಲ್ಲಿ ಮೃಗಮಾಂಸವನ್ನೂ ರಾತ್ರಿ ಭೋಜನದಲ್ಲಿ ಪಕಿ ಮಾಂಸವನ್ನೂ ಭಕ್ತಿ ಸೆಂದು ಹೇಳಲು ರಾಯನು ಬೇಟೆಗಾರರನ್ನು ಕರಿಸಿ ನಿತ್ಯವೂ ಮೃಗಗಳನ್ನೂ ಪಕ್ಷಿ ಗಳನ್ನೂ ತಂದು ಕೊಡುವ ಹಾಗೆ ಅವರಿಗೆ ಕಟ್ಟಳೆಯನ್ನು ಮಾಡಲು ಅವರು ಅದೇ ಮೇರೆಗೆ ತಂದು ಕೊಡುತ್ತಾ ಇದ್ದರು. ಹೀಗಿರುವಲ್ಲಿ ಒಂದು ದಿನ ಬೇಟೆಗಾರರಿಗೆ ಪಕ್ಷಿಗಳು ಎಲ್ಲಿಯೂ ಸಿಕ್ಕದೆ ಇರಲು ಸಾಯಂಕಾಲದ ಪರ್ಯ೦ತ ರವೂ ತಿರುಗಿಕೊಂಡು ಕಡೆಗೆ ಒಂದು ಜೇನುಹಳಿಯನ್ನು ಕೈಯಲ್ಲಿ ಹಿಡಿದು ಕೊಂಡು ರಾಯನ ಸಮ್ಮುಖಕ್ಕೆ ಒಂದು-ಸ್ವಾಮಿ ! ಎಷ್ಟು ಪ್ರಯಾಸಪಟ್ಟಾಗ ಈ ದಿನ ಪಕ್ಷಿಗಳು ದೊರೆಯದೆ ಹೋದವೆಂದು ಬಿನ್ನ ಹವನ್ನು ಮಾಡಲು - ರಾಯನು ಬೇಟೆಗಾರರ ಮೇಲೆ ಕೋಪವನ್ನು ಮಾಡುತ್ತಾ ಇರುವ ಸಮಯದಲ್ಲಿ ಈ ಟಿಟ್ಟಿಭ ಶಕಟಗಳು ಬರುವುದನ್ನು ಕಂಡು ಊಳಿಗದವರು ಬಂದು ರಾಯನಿಗೆ ಬಿನ್ನಹವನ್ನು ಮಾಡಲು ಅಲ್ಲಿದ್ದ ಬೇಟೆಗಾರರೊಳಗೆ ಒಬ್ಬನು ಆ ಎರಡು ಪಕ್ಷಿ ಗಳನ್ನೂ ಹೊಡೆದು ಅರಮನೆಯಲ್ಲಿರುವ ಅಡಿಗೆಯವರಿಗೆ ಕೊಟ್ಟು ಬಿಟ್ಟನು. ಆದುದರಿಂದ ವಿವಾದವನ್ನು ಮಾಡಿಕೊಂಡು ರಾಜಾಸ್ಥಾನಗಳಿಗೆ ಹೋದವರು ಈ ಪ್ರಕಾರ ಕೆಟ್ಟು ಹೋಗುವರು. 26, THE ASCETIC AND HIS HYPOCRITICAL DISCIPLE. - ೨೬ ಸನ್ಯಾಸಿಯೂ ಅವನ ಕಪಟಶಿಷ್ಯನೂ. ಕಾವೇರೀತೀರದಲ್ಲಿ ಧರಪುರವೆಂಬ ಒಂದು ಅಗ್ರಹಾರವು ಇರುವುದು, ಅಲ್ಲಿ ವೇದಶರನೆಂಬ ಯತೀಶ್ವರನು ಮಠದಲ್ಲಿ ವಾಸಮಾಡಿಕೊಂಡು ಭಿಕ್ಷಾನ್ನದಿಂದಲೇ ಜೀವಿಸುತ್ತಾ ಬಹು ಕಾಲದಿಂದ ಅನೇಕ ದ್ರವ್ಯವನ್ನು ಸಂಪಾದಿಸಿ ಅವುಗಳನ್ನು ಇಡುವುದು ಎಲ್ಲಿ ? ಎಂದು ಯೋಚಿಸಿದನು. ತಾನು ಉಣ್ಣದೆಯ ಉಡದೆಯ ದಾನ ಧರಗಳನ್ನು ಮಾಡದೆಯ ಕೂಡಿಸಿದ ದ್ರವ್ಯಗಳೆಲ್ಲಾ ಅರಸುಗಳಿ೦ದಾಗಲಿ ಬೆಂಕಿಯಿಂ ದಾಗಲಿ ಹೂಳಿಟ್ಟ ಸ್ಥಳದಲ್ಲಾಗಲಿ ನಾಶನವಾಗಿ ಹೋಗುವುವು ಎಂದು ನೀತಿ ಇರುವುದ ರಿಂದ ಈ ದ್ರವ್ಯಕ್ಕೆ ಯಾವ ರೀತಿಯಿಂದಲೂ ಲಯವಿಲ್ಲದ ಹಾಗೆ ಮಾಡಬೇಕೆಂದು ೬'