ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 KANARESE SELECTIONS--PART I ನೆನೆಸಿ ಆ ದ್ರವ್ಯ ವೆಲ್ಲವನ್ನೂ ತನ್ನ ಕಂಧೆಯಲ್ಲಿ ಹುದುಗಿಸಿ ಬೊ೦ತೆಯನ್ನು ಹೊಲಿದು ಅದನ್ನು ಯಾವಾಗಲೂ ಮೈ ಮೇಲೆ ಹೊದಿದು ಕೊಂಡು ನಿಂತ ಕೆಲವು ದ್ರವ್ಯವನ್ನು ತನ್ನ ಟೊಳ್ಳಾದ ದಂಡ ಕೋಲಿನಲ್ಲಿ ತುಂಬಿ ಅದನ್ನು ತನ್ನ ಕೈಯಲ್ಲಿ ಹಿಡಿದು ಕೊಂಡು ದಿವಾರಾತ್ರಿಗಳಲ್ಲಿಯ ಎಚ್ಚರಿಕೆ ತಪ್ಪದೆ ನೋಡಿಕೊಂಡು ಇದ್ದನು. ಹೀಗಿ ರಲು ಆಷಾಢಭೂತಿ ಎಂಬ ಒಬ್ಬ ಬ್ರಾಹ್ಮಣನು ಈ ರಹಸ್ಯವನ್ನು ಹೇಗೋ ತಿಳಿದು ಆ ದ್ರವ್ಯವನ್ನು ತಾನು ಹೇಗಾದರೂ ಅಪಹರಿಸಬೇಕೆಂದು ಯೋಚಿಸಿ ಶಿಷ್ಯ ವೇಷವನ್ನು ಹಾಕಿಕೊಂಡು ಆ ಸನ್ಯಾಸಿಯ ಬಳಿಗೆ ಬಂದು ಭಯಭಕ್ತಿಯಿಂದ ಅವನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ ಎದ್ದು ಕೈಮುಗಿದು ನಿಂತು ಅತಿವಿನಯದಿಂದ ಸ್ವಾಮಿಾ ! ಲೋಕದಲ್ಲಿ ತಾನು ಗಳಿಸಿದ ಒಡವೆ ಮನೆಯಲ್ಲೇ ಇರುವುದು, ತನ್ನ ಪತ್ರಮಿತ್ರಕಳಾದಿ ಬಾಂಧವರು ಸ್ಮಶಾನದ ಪರಿಯಂತರವೂ ಬಂದು ಹಿಂದಿರುಗು ವರು, ತಾನು ಮಾಡಿದ ಪಾಪುಣ್ಯಗಳೆರಡು ಮಾತ್ರ ತನ್ನ ಸಂಗಡಲೇ ಒರುವವು. ಮತ್ತು ಐಶ್ವರ್ಯವು ನೀರಿನ ಗುಳ್ಳೆಯ ಹಾಗೆ ತೋರಿ ಅಡಗುವುದು. ಯೌವನವೂ. ಅಸ್ಥಿರವಾದುದು. ಆಯುಷ್ಯವು ಶರತ್ಕಾಲದ ಮೇಘದೋಪಾದಿಯಲ್ಲಿ ಗಳಿಗೆಗಳಿಗೆಗೂ ನಾಶವಾಗಿ ಹೋಗುವುದು, ಪ್ರಾಣಿಗಳಿಗೆ ಮುದಿತನವು ಸಮಯವನ್ನು ನೋಡಿ ಹಿಡಿ ಯುವ ಹುಲಿಯಂತಿರುವುದು ಮತ್ತು ರೋಗಗಳು ಶತ್ರುಗಳ ಹಾಗೆ ತಮಗೆ ಅನು ಕೂಲ ಕಾಲವನ್ನು ನಿರೀಕ್ಷಿಸಿಕೊಂಡು ಇವೆ. ಆಯುಷ್ಯವು ಒಡೆದ ಗಡಿಗೆಯಲ್ಲಿ ತುಂಬಿ ಇಟ್ಟ ನೀರಿನ ಹಾಗೆ ಕಡಮೆಯಾಗುತ್ತಾ ಇರುವುದು. ಆದುದರಿಂದ ತಮ್ಮಂಧಾ ಸತ್ಪರುಷರ ಸೇವೆಯನ್ನು ಮಾಡಿ ಕೃತಾರ್ಧನಾಗಬೇಕೆಂದು ಬಂದೆನು, ನನ್ನನ್ನು ಶಿಷ್ಯ ನನ್ನಾಗಿ ಅಂಗೀಕರಿಸಬೇಕೆಂದು ನಾನಾವಿಧವಾದ ತತ್ವವಾಕ್ಯಗಳನ್ನು ಹೇಳಿ ಬಹು ವಿಧವಾಗಿ ಪ್ರಾರ್ಥಿಸಲು ಆ ಯತೀಶ್ವರನು--ಇವನು ಶಿಷ್ಯವೃತ್ತಿಗೆ ಯೋಗ್ಯವೆಂದು ಸಮ್ಮತಿಪಟ್ಟು ಅವನನ್ನು ಕುರಿತು-ನೀನು ನನ್ನ ಬಳಿಯಲ್ಲಿ ಇರು ಎಂದು ಹೇಳಿ ದನು, ಆಗೆ ಆ ಆಷಾಢಭೂತಿಯು ಅತಿವಿನಯಭಯಭಕ್ತಿಯುಕ್ತನಾಗಿ ಈ ಯತೀ ಶ್ವರನ ಇಂಗಿತವನ್ನು ತಿಳಿದು ಕಾಲಕಾಲಕ್ಕೆ ಸರಿಯಾಗಿ ಸೇವೆಯನ್ನು ಮಾಡಿ ಕೊಂಡು ಅವನ ವಿಶ್ವಾಸಕ್ಕೆ ಪಾತ್ರನಾಗಿ ಇದ್ದನು. ಹೀಗಿರುವಲ್ಲಿ ಒಂದಾನೊಂದು ದಿವಸ ಅಲ್ಲಿಗೆ ಸಮೀಪದಲ್ಲಿ ಇರುವ ಅಗ್ರಹಾರದಿಂದ ಒಬ್ಬ ಬ್ರಾಹ್ಮಣನು ಬಂದು ಈ ಸನ್ಯಾಸಿಯನ್ನು ತನ್ನ ಮನೆಗೆ ಭಕ್ಷಕ್ಕೆ ಬರಬೇಕೆಂದು ಕರೆಯಲು ಆ ಯತೀ ಶ್ವರನು ಒಪ್ಪಿ ಕೊಂಡು ಆಪಾಢಭೂತಿ ಎಂಬ ತನ್ನ ಶಿಷ್ಯನನ್ನು ಸಂಗಡ ಕರೆದು ಕೊಂಡು ಆ ಅಗ್ರಹಾರದ ಬ್ರಾಹ್ಮಣನ ಮನೆಗೆ ಹೋಗಲು ಆಗ ಬ್ರಾಹ್ಮಣನು ಅತಿವಿ ನಯದಿಂದ ಮುನಿಯನ್ನು ಸತ್ಕರಿಸಿ ಊರಲ್ಲೆಲ್ಲಾ ಭಿಕ್ಷವನ್ನು ಮಾಡಿಸಿದನು, ಯತಿಯು ಆ ರಾತ್ರಿಯಲ್ಲಿ ಅಲ್ಲಿಯೇ ಇದ್ದು ಬೆಳಗಾದ ಮೇಲೆ ತನ್ನ ನಿವಾಸವಾದ ಮಠಕ್ಕೆ ಹೊರಡುವ ಸಮಯದಲ್ಲಿ ಆಷಾಢಭೂತಿಯು ಆ ಬ್ರಾಹ್ಮಣನ ಮನೆಯ ಒಂದು ಕಾಚಿಪುಳ್ಳೆಯನ್ನು ತನ್ನ ತಲೆಯಲ್ಲಿ ಸಿಕ್ಕಿಸಿಕೊಂಡು ಯತೀಶ್ವರನ ಸಂಗಡ ಸ್ವಲ್ಪ ದೂರ ಬಂದು ತನ್ನ ಶಿಖೆಯಲ್ಲಿ ಇದ್ದ ತೃಣವನ್ನು ಕೈಗೆ ತೆಗೆದುಕೊಂಡು ಸನ್ಯಾ