ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ_೧ನೆಯ ಭಾಗ ಸಿಗೆ ವಂದನೆಯನ್ನು ಮಾಡಿ ಎಲೈ ಗುರುನಾಧನೆ ! ನಾನು ಮಹಾ ಪಾಪಕ್ಕೆ ಒಳ ಗಾದೆನು. ಯಾಕಂದರೆ ಆ ಗೃಹಸ್ಟನ ಮನೆಯಲ್ಲಿ ಭೋಜನವನ್ನು ಮಾಡಿಕೊಂಡು ಮರಕ್ಕೆ ಹೊರಡುವ ವೇಳೆಯಲ್ಲಿ ಆತನ ಮನೆಯ ತೃಣವು ಹೇಗೋ ನನ್ನ ಶಿಖೆಗೆ ತಗಲಿ ಬಂದಿತು ; ಈ ಪಾಪವನ್ನು ನಾನು ಯಾವ ರೀತಿಯಿಂದ ಕಳೆದುಕೊಳ್ಳಲಿ ? ಎಂದು ದುಃಖಿಸಲು ಆ ಯತೀಶ್ವರನು ಕೇಳಿ ಆಶ್ಚರ್ಯಪಟ್ಟು ತೃಣದಿಂದ ಬರುವ ಪಾತಕ ವೇನು ? ಆದರೂ ಇದು ಅಜ್ಞಾನಕೃತವು. ಇದಕ್ಕೆ ದೋಷವಿಲ್ಲವೆಂದನು. ಅದಕ್ಕೆ ಆಷಾಢಭೂತಿಯು-ಸ್ವಾಮಿ ! ಪ್ರಾಜ್ಞರು ವಿಷವನ್ನು ವಿಷವೆಂದು ಹೇಳುವುದಿಲ್ಲ. ಆದರೆ ಪರರ ಒಡವೆಯೇ ವಿಷವೆಂದು ಹೇಳುತ್ತಾರೆ, ಯಾಕಂದರೆ ವಿಷವು ಒಬ್ಬ ನನ್ನು ಕೊಲತ್ತದೆ. ಪರರ ಸೊತ್ತು ಪುತ್ರಪೌತ್ರರನ್ನೂ ಸಹ ಕೊಲ್ಲುತ್ತದೆ ಎಂದು ನೀತಿ ಉಂಟು. ಆದಕಾರಣ 'ಸ್ವಪ್ರ ದಲ್ಲಿಯಾದರೂ ಪರರ ಒಡವೆಗೆ ಆಶಮಾಡಬಾರದು ಎಂದು ಹೇಳಿ ಈ ತೃಣವನ್ನು ಆ ಬ್ರಾಹ್ಮಣನ ಮನೆಗೆ ಸೇರಿಸಿ ಬರುತ್ತೇನೆ ಎಂದು ಗುರು ವಿನ ಅಪ್ಪಣೆಯನ್ನು ತೆಗೆದುಕೊಂಡು ಸ್ವಲ್ಪ ದೂರ ಹಿಂದಕ್ಕೆ ಬಂದು ಒಂದು ಮರದ ಕೆಳಗೆ ಸ್ವಲ್ಪ ಹೊತ್ತು ಕೂತು ಇದ್ದು ಬಾವಿಯಲ್ಲಿ ಸ್ನಾನಮಾಡಿಕೊಂಡು ಹೋಗಿ ಯತೀಶ್ವರನಿಗೆ ವಂದನೆಯನ್ನು ಮಾಡಿ ನಿಲ್ಲಲು ಆ ಸನ್ಯಾಸಿಯು ಆಷಾಢಭೂತಿಯ ಮನೋನಿಶ್ಚಯಕ್ಕೆ ಮೆಚ್ಚಿ ಅವನಲ್ಲಿ ಅತಿ ಪ್ರೀತಿಯುಳ್ಳವನಾಗಿ ಇದ್ದನು. ಹೀಗೆಯೇ ಕೆಲವು ದಿನಗಳಾದ ಮೇಲೆ ಆ ಯತೀಶ್ವರನು ಗಂಗಾಸ್ನಾನ ಮಾಡ ಬೇಕೆಂದು ಕಾಶೀಯಾತ್ರೆಗೆ ಹೊರಟು ನಾನಾ ಜನಪದಗಳನ್ನು ದಾಟಿ ಮಾರ್ಗವಶ ದಿಂದ ಗೊಂಡಾರಣ್ಯದಲ್ಲಿ ಬರುತ್ತಾ ಅಲ್ಲಿ ತಾನು ಶೌಚಕ್ಕೆ ಹೋಗಬೇಕಾಯಿತಾದು ದರಿಂದ ಹೊಡೆದಿದ್ದ ಬೊ೦ತೆಯನ್ನೂ ಯೋಗದಂಡವನ್ನೂ ಆಷಾಢಭೂತಿಯ ಕೈಗೆ ಕೊಟ್ಟು ಅವನನ್ನು ಒಂದು ಮರದ ಕೆಳಗೆ ಕೂತಿರ ಹೇಳಿ ಸ್ವಲ್ಪ ದೂರ ಹೋಗಿ ಒಹಿರ್ಭೂಮಿಗೆ ಕುಳಿತುಕೊಂಡನು. ಅಲ್ಲಿ ಎರಡು ಟಗರುಗಳು ರಾಗದ್ವೇಷದಿಂದ ಪೋಟ್ಟಾಡಿ ತಲೆಗಳು ಒಡೆದು ರಕ್ತ ಸುರಿಯುತ್ತಾ ಇರುವುದನ್ನು ಕಂಡು ಬುದ್ದಿ ಇಲ್ಲದ ಒಂದು ಜಂಬುಕವು ಆ ಟಗರುಗಳ ತಲೆಯಿಂದ ಬೀಳುವ ರಕ್ತವನ್ನು ಪಾನ ಮಾಡಬೇಕೆಂಬ ಆಶೆಯಿಂದ ಆ ಎರಡು ಟಗರುಗಳ ನಡುವೆ ಬಂದು ನಿಂತಿತು. ಆಗ ಟಗರುಗಳೆರಡು ಹಿಂದಕ್ಕೆ ಹೋಗಿ ಅತಿ ರೋಷದಿಂದ ಮುಂದಕ್ಕೆ ಬಂದು ತಾಕಲು ಆ ಜಂಬು ಕವು ನಡುವೆ ಸಿಕ್ಕಿ ಮೃತವಾಯಿತು. ಈ ಯತೀಶ್ವರನು ಆ ವಿನೋದವನ್ನು ನೋಡಿಕೊಂಡು ಬರುವುದಕ್ಕೆ ಆಲಸ್ಯವನ್ನು ಮಾಡಲು ಆಷಾಢಭೂತಿಯು ಆ ವಸ್ತು ಗಳನ್ನು ತೆಗೆದು ಕೊಂಡು ಮಾರ್ಗವನ್ನು ಬಿಟ್ಟು ಅರಣ್ಯ ಮಾರ್ಗದಲ್ಲಿ ಹೊರಟು ತನ್ನ ನಿವಾಸವನ್ನು ಕುರಿತು ಹೋದನು. ಇತ್ತಲೀ ಯತೀಶ್ವರನು ಶೌಚವಾದ ತರುವಾಯ ಕಾಲು ತೊಳೆದು ಕೊಂಡು ನದಿಯಲ್ಲಿ ಸ್ನಾನವನ್ನು ಮಾಡಿ ಆಷಾಢಭೂತಿಯನ್ನು ಕುಳ್ಳಿ ರಿಸಿದ್ದ ಮರದ ಕೆಳಕ್ಕೆ ಬಂದು ಅಲ್ಲಿ ಅವನನ್ನು ಕಾಣದೆ ನಾಲ್ಕು ದಿಕ್ಕುಗಳನ್ನೂ ನೋಡಿ ಕೂಗಿ ಅಲ್ಲಲ್ಲಿ ಹುಡುಕಿದರೂ ಅವನು ಇಲ್ಲ ದುದರಿಂದ ತನ್ನೊಳಗೆ ತಾನೇ ಹೀಗೆ ಹೇಳಿಕೊಂಡನು ಏನಂದರೆ -ದ್ರವ್ಯವನ್ನು ಸಂಪಾದಿಸುವಾಗಲೂ ಅದನ್ನು