26 KANAKESE SELECTIONS-PART T ರಕ್ಷಿಸುವಾಗಲೂ ಅದು ನಾಶವಾದರೂ ಅದು ದ್ರಯವಾದರೂ ಒಂದೊಂದು ವಿಧವಾದ ದುಃಖವಿರುವುದು. ಆದುದರಿಂದ ದ್ರವ್ಯವು ದುಃಖಕ್ಕೆ ಕಾರಣವಾದುದು ಎಂದು ನಾನಾಪ್ರಕಾರವಾಗಿ ಪ್ರಲಾಪಿಸಿ ಸಂಕಟಪಡುತ್ತಾ ಹೊರಟುಹೋದನು. 27, THE SICK MUSSULMAN AND HIS LAZY SERVANT. ೨೭, ತುರುಕನೂ ಅವನ ಸೋಮಾರಿಯಾದ ಸೇವಕನೂ. ಮಛಲೀ ಪಟ್ಟಣದಲ್ಲಿ ಒಬ್ಬ ತುರುಕನು ಇದ್ದನು, ಆತನ ಬಳಿಯಲ್ಲಿ ಒಬ್ಬ ಒಕ್ಕಲಿಗನು ಸಂಬಳಕ್ಕೆ ಇರುವನು, ಒಂದಾನೊಂದು ದಿವಸ ಆ ತುರುಕನಿಗೆ ಬಹಳ ವಾಗಿ ಚಳಿಯ ಜ್ವರವೂ ಬಂದು ರಾತ್ರಿಯವರೆಗೂ ಕಡಮೆಯಾಗದೆ ಇತ್ತು. ಆದುದರಿಂದ ತುರುಕನು ಬಹಳ ಸಂಕಟಪಡುತ್ತಾ ತಲೆಬಾಗಲಿನ ಬಳಿಯಲ್ಲಿ ಮಲಗಿ ಕೊಂಡು ಇದ್ದ ತನ್ನ ಬಂಟನನ್ನು ಕೂಗಿ-ಎಲೋ ಸೇವಕನೆ ! ನಾನು ಸಂಕಟವನ್ನು ತಾಳಲಾರೆನು, ಆದುದರಿಂದ ನೀನು ಚಿಕ್ಕ ಪೇಟೆಯಲ್ಲಿ ಇರುವ ವೈದ್ಯನ ಹತ್ತಿರಕ್ಕೆ ಈಗಲೇ ಹೋಗಿ ಅವನಿಗೆ ನನ್ನ ದೇಹಸ್ಥಿತಿಯನ್ನು ತಿಳಿಸಿ ಅವನನ್ನು ಇಲ್ಲಿಗೆ ಕರೆದು ಕೊಂಡು ಬಾ ಎಂದು ಹೇಳಲು ಆ ಸೋಮಾರಿಯಾದ ಆಳು- ಈತನು ನನ್ನ ನಿದ್ರೆ ಯನ್ನು ಕೆಡಿಸುತ್ತಾನಲ್ಲಾ ! ಎಂದು ಅಂದು ಕೊಂಡು ತನ್ನ ತಲೆಯ ಮೇಲಣ ಮುಸು ಕನ್ನು ತೆಗೆಯದೆ- ಬುದ್ಧಿ ! ಇಷ್ಟು ಹೊತ್ತಿನಲ್ಲಿ ಪಂಡಿತನು ಮನೆಯಲ್ಲಿ ಇರುತ್ತಾ ನೋ ? ಇಲ್ಲ ವೋ ? ಎಂದು ಹೇಳಿದನು, ಅದಕ್ಕೆ ಆ ತುರುಕುವೈದ್ಯನು ನಿಶ್ನ ಯವಾಗಿ ಈಗ ಮನೆಯಲ್ಲಿಯೇ ಇರುತ್ತಾನೆ, ಹೋಗಿ ಬಾ ಅನ್ನಲು ಅದಕ್ಕೆ ಆಳು --ಸ್ವಾಮಿಾ ! ನಾನು ಹೋದರೂ ಅವನಿಗೆ ಇಲ್ಲಿಗೆ ಬರುವುದಕ್ಕೆ ಕೂಡುವುದೋ? ಇಲ್ಲ ವೋ ? ಎಂದು ಹೇಳಿದನು. ತುರುಕನು-ಒಂದು ವೇಳೆ ಅವನಿಗೆ ಇಲ್ಲಿ ಬರುವು ದಕ್ಕೆ ಸಮಯ ಸಿಕ್ಕದೆ ಹೋದರೆ ಔಷಧವನ್ನು ಖಂಡಿತವಾಗಿ ಕೊಡುತ್ತಾನೆ. ತೆಗೆದು ಕೊಂಡು ಬಾ ಎನ್ನಲು ಬಂಟನು-ಒಡೆಯನೇ ! ಆ ವೈದ್ಯನ ಬಳಿಯಲ್ಲಿ ತಮ್ಮ ದೇಹದ ರೋಗಕ್ಕೆ ತಕ್ಕ ಔಷಧವ ಮಾಡಲ್ಪಟ್ಟು ಇದೆಯೋ ? ಇಲ್ಲವೋ ? ಎಂದು ಹೇಳಿದನು. ತಿರಿಗಿ ಆ ತುರುಕನು--ಎಲೋ ನೃತ್ಯನೇ ! ಅವನಲ್ಲಿ ಸಿದ್ಧ ವಾದ ಔಷಧವು ಬೇಕಾದಷ್ಟು ಇದೆ. ಬೇಗ ಹೋಗಿ ತೆಗೆದು ಕೊ೦ದು ಬಾ ಎಂದು ಹೇಳಿದುದಕ್ಕೆ ಭತ್ಯನು-ಯಜಮಾನನೆ ! ಒಂದು ವೇಳೆ ಅವನು ಔಷಧವನ್ನು ಕೊಡುವನೋ ? ಇಲ್ಲವೋ ? ಅನ್ನಲು ಮೈಚ್ಛನು ಅವನ ಮಾತಿಗೆ ಅಸಹ್ಯಪಟ್ಟು ಕೊಂಡು-ಎಲೋ ! ಅವನು ಖಂಡಿತವಾಗಿ ಔಷಧವನ್ನು ಕೊಡುತ್ತಾನೆ. ಬೇಗೆ ಹೋಗಿ ತೆಗೆದುಕೊಂಡು ಬಾ ; ಹೋಗು ಅನ್ನಲು ಇವನು--ಸ್ವಾಮಿಾ ! ನಾನು ಹೋಗಿ ಔಷಧವನ್ನು ತರುತ್ತೇನೆ, ಆದರೆ ಅದರಿಂದ ನಿಮಗೆ ಗುಣವಾಗುತ್ತದೋ ? ಇಲ್ಲ ವೋ ? ತಿಳಿಯದು ಅಂದನು. ಆ ತುರುಕನು ಬಹಳ ಕೋಪ ಮಾಡಿ ಎಲೋ ಸೋಮಾರಿಯೇ ! ಹೇಗಾದರೂ ಆಗಲಿ ; ನೀನು ಹೋಗಿ ಬಾ ಅನ್ನಲು
ಪುಟ:ಕಥಾಸಂಗ್ರಹ ಸಂಪುಟ ೧.djvu/೩೮
ಗೋಚರ