ಪುಟ:ಕಥಾಸಂಗ್ರಹ ಸಂಪುಟ ೧.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

154 KANARESE SELECTIONS-PART III ಹಿಡಿಂಬವಧೆಯು ಬಹು ಜನಾನಂದಕರವಾಯಿತು, ಇಲ್ಲಿಗೆ ಸಮೀಪದಲ್ಲಿ ಏಕಚಕ್ರವು ರವೆಂಬೊಂದು ಪಟ್ಟಣವಿದೆ. ಆ ಪಟ್ಟಣವು ರಮಣೀಯವಾಗಿರುವುದರಿಂದ ನಿಮಗೆ ವಾಸಯೋಗ್ಯವಾಗಿ ಇರುವುದು, ಆ ಪಟ್ಟಣಕ್ಕೆ ನಾನೂ ಒಂದು ವೇಳೆ ಬರುತ್ತೇನೆ. ನೀವು ಪ್ರಚ್ಛನ್ನರೂಪದಿಂದ ಇರಿ ಎಂದು ಹೇಳಿ ಹೋದನು. ಅದೇಪ್ರಕಾರ ಪಾಂಡ ವರು ಏಕಚಕ್ರನಗರಕ್ಕೆ ಬಂದು ಅಲ್ಲಿ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಇಳಿದುಕೊಂಡು ಆ ಪಟ್ಟಣದ ಬಳಿಯಲ್ಲಿರುವ ನಾನಾ ಪ್ರಕಾರವಾದ ವನಗಳನ್ನೂ ರಮಣೀಯವಾದ ಭೂಪ್ರದೇಶಗಳನ್ನೂ ಎಮಲೋದಕವುಳ್ಳ ಸರಸ್ಸುಗಳನ್ನೂ ನೋಡುತ್ತಾ ಕಾಲಹರಣ ಮಾಡುತ್ತಿದ್ದರು, ಮತ್ತು ಭೀಮಾ‌ುನನಕುಲಸಹದೇವರು ಭಿಕ್ಷೆಯನ್ನು ಮಾಡಿ ಕೊಂಡು ಬಂದು ಆ ಅನ್ನ ದಿಂದ ಕುಂತೀಧರ್ಮರಾಜರನ್ನು ಪೋಷಿಸುತ್ತಾ ಶಮದ ಮಾದಿ ಸದ್ಗುಣಗಳಿಂದ ಅಲ್ಲಿದ್ದ ಜನರ ಮನೋರಂಜನವನ್ನು ಮಾಡುತ್ತಾ ಕಾಲಕ್ಷೇಪ ಮಾಡಿಕೊಂಡಿದ್ದರು. ಆ ಪಟ್ಟಣದ ಜನರು ಈ ಪಾಂಡವರನ್ನು ನೋಡಿ ನೋಡತಕ್ಕೆ ಆಕಾರವು ಇವರ-ಗಿಯ ವಿಶುದ್ಧ ಸ್ವಭಾವವುಳ್ಳವರಾಗಿಯ ದೇವಕುಮಾರ ಸಮಾನರಾಗಿ ಯ ಸತ್ವ ಲಕ್ಷಣ ಸಂಪನ್ನರಾಗಿಯೂ ಇರುವ ಈ ಕುಮಾರರು ರಾಜ್ಯಾರರೇ ಹೊರ ತಾಗಿ ಭಿಕ್ಷಾ ಯೋಗ್ಯರಲ್ಲ, ಸುಕುಮಾರಶರೀರಿಗಳಾದ ಇವರನ್ನು ನೋಡಿದರೆ ಏನೋ ಒಂದು ನಿಮಿತ್ತದಿಂದ ಪ್ರಚ್ಛನ್ನ ರಾಗಿ ಈ ರೀತಿಯಲ್ಲಿದ್ದಾರೆಂದು ಒಬ್ಬರಸಂಗಡಿ ಬ್ಬರು ಹೇಳಿಕೊಳ್ಳುತ್ತಾ ಅವರಿಗೆ ಹೆಚ್ಚಾಗಿ ಭಿಕ್ಷೆಯನ್ನಿ ಕುತ್ತಾ ಆದರಿಸುತ್ತಿದ್ದರು. ಹೀಗೆ ಭೀಮಾದಿಗಳು ಭಿಕ್ಷೆಯನ್ನು ತಂದು ತಾಯಿಯ ವಶಕ್ಕೆ ಒಪ್ಪಿಸಲು ; ಅವಳು ತಂದ ಅನ್ನದಲ್ಲಿ ಅರ್ಧಭಾಗವನ್ನು ಸರಿಯಾಗಿ ಭೀಮನಿಗೆ ಕೊಟ್ಟು ಉಳಿದ ಅರ್ಧ ವನ್ನು ತಾನೈದು ಮಂದಿಗಳೂ ಭುಜಿಸುತ್ತಿದ್ದರು, ಆದರೆ ಭೀಮನು ಮೊದಲು ರಾಜ ಯೋಗ್ಯವಾಗಿಯೂ ಷಡ್ರಸೋಪೇತವಾಗಿಯೂ ಇರುವ ಅನ್ನವನ್ನು ಅಪರಿಮಿತವಾಗಿ ಭಕ್ಷಿಸಿದವನಾದುದರಿಂದ ಆ ಭಿಕ್ಷಾಶನದಿಂದ ತೃಪ್ತಿಯನ್ನು ಹೊಂದದೆ, ದಿನದಿನಕ್ಕೂ ಶರೀರದಲ್ಲಿ ಇರುವ ಕಾಂತಿಯ ತಪ್ಪಿ ಬಡವಾಗುತ್ತಾ ಬಂದನು. ಅವರೆಲ್ಲರೂ ತಂದ ಭಿಕ್ಷಾನ ದಲ್ಲಿ ಅರ್ಧವು ಉರಿಯುತ್ತಲಿರುವ ಬೆಂಕಿಯಲ್ಲಿ ಬಿದ್ದ ತುಪ್ಪದ ಹನಿಯೋಪಾದಿ 'ಯಲ್ಲಿ ಆತನಿಗೆ ಯಾವ ಮೂಲೆಗೂ ಸಾಲದೆ ಇತ್ತು ಈ ಪ್ರಕಾರದಲ್ಲಿ ಆ ಮಹಾನು ಭಾವರು ಕೆಲವು ದಿವಸ ಕಾಲಕ್ಷೇಪ ಮಾಡುತ್ತಿರಲು ; ಆ ಭೀಮನು ಒಬ್ಬ ಕುಂಬಾ ರನಿಗೆ ನೂರು ಸಾರಿ ತರುವ ಮಣ್ಣನ್ನು ಒಂದೇಸಾರಿ ತಂದು ಹಾಕಲು ; ಆತನು ಇವ ನಿಗೆ ಒಂದು ದೊಡ್ಡ ಗುಡಾಣವನ್ನು ಮಾಡಿಕೊಟ್ಟನು, ಭೀಮನು ಅದನ್ನು ಬಲದ ಅಂಗೈಯಲ್ಲಿ ಇಟ್ಟು ಕೊಂಡು ತಾನೊಬ್ಬನೇ ಭಿಕ್ಷಾರ್ಥವಾಗಿ ಹೋಗಲು ; ಜನರು ಅವನನ್ನು ನೋಡಿ ನಗುತ್ತಾ ಬೇಕಾದ ಭಕ್ಷ್ಯ ಭೋಜ್ಯಗಳನ್ನು ಭಿಕ್ಷೆಯಾಗಿ ಆ ಗುಡಾಣಕ್ಕೆ ತಂದುಹಾಕುತ್ತಾ ಇದ್ದರು. ಭೀಮನು ಆ ಗುಡಾಣದ ತುಂಬಾ ಭಿಕ್ಷೆ ಯನ್ನು ತಂದು ಅದನ್ನೆಲ್ಲಾ ತಾನೊಬ್ಬನೇ ತಿಂದು-ಈ ಅನ್ನವು ಲೇಶವಾದರೂ ನನ್ನ ಹಸಿವಿಗೆ ಸಾಲದೆಂದು ನಿತ್ಯವೂ ತಾಯಿಯ ಸಂಗಡ ಗುಣಗುಟ್ಟುತ್ತಾ ಇರುತ್ತಿದ್ದನು. 8