ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 153 ವಾಗಿ ಹೋಗಬೇಕೆನಲು ; ಎಲ್ಲರೂ ಆ ವನವನ್ನು ಬಿಟ್ಟು ಮುಂದಕ್ಕೆ ಹೊರಟರು: ಹಿಡಿಂಬಿಯು ಅವರ ಹಿಂಗಡೆಯಲ್ಲಿಯೇ ನಡೆದಳು. ಹೀಗೆ ಸ್ವಲ್ಪ ದೂರ ಹೋದ ಮೇಲೆ ಆ ಹಿಡಿಂಬಿಯು ಕುಂತೀಧರ್ಮರಾಜರಿಗೆ ನಮಸ್ಕರಿಸಿ ಕೈಕಟ್ಟಿ ನಿಂತುಕೊಂಡು ಕುಂತಿಯ ಸಂಗಡ ಎಲ್‌, ತಾಯೇ ! ನಾನು ಭೀಮನನ್ನು ನೋಡಿದುದು ಮೊದಲು ಆತನನ್ನೇ ವರಿಸಿ ಇದ್ದೇನೆ. ಆತನೆನಗೆ ಪತಿಯಾಗದೆ ಹೋದರೆ ನನ್ನ ಪ್ರಾಣಗಳು ನಿಲ್ಲ ಲಾರವು. ಆದು ದರಿಂದ ನೀವು ಆತನನ್ನು ಒಡಂಬಡಿಸಿ ನನಗೆ ಪ್ರಾಣದಾನವನ್ನು ಮಾಡ ಬೇಕು, ನಾನು ದುಷ್ಟ ಎಂದು ಎಣಿಸಬೇಡಿರಿ ನಾನು ಸಾಲಕಟಂಕಟಾ ಎಂಬ ಅಪ್ಪರಸ್ತ್ರೀಯು ; ನಾನು ತ್ರಿಕಾಲಜ್ಞಳು, ನಿಮ್ಮನ್ನು ಧೃತರಾಷ್ಟ್ರನು ವಾರಣಾವ ತಕೆ ಕಳುಹಿಸಿದುದನ್ನೂ ನೀವು ಎದುರನ ಸಹಾಯದಿಂದ ಅರಗಿನ ಮನೆಯಿಂದ ತಪ್ಪಿಸಿ ಕೊಂಡುದನ್ನೂ ಇಲ್ಲಿಂದಮುಂದೆ ಹೋದರೆ ಶಾಲಿಹೋತಾಶ್ರಮದಲ್ಲಿ ನಿಮಗೆ ವೇದ ವ್ಯಾಸರ ಸಂದರ್ಶನ ಉಂಟಾಗುವುದನ್ನೂ ಅವರ ಅನುಗ್ರಹದಿಂದ ಮುಂದೆ ನಿಮಗಾಗ ತಕ್ಕ ಶುಭವನ್ನೂ ಬಲ್ಲೆನು ಎಂದು ಹೇಳಲು ; ಆ ಕುಂತಿಯು ಧರ್ಮಜನೊಡನೆ ಇವಳು ದುಷ್ಟಸ್ತ್ರೀಯಲ್ಲ, ಭೀಮನು ಪರಿಗ್ರಹಿಸ ಬಹುದೆಂದು ಹೇಳಲು ; ಅನಂತರ ದಲ್ಲಿ ಧರ್ಮಜನು ಭೀಮನನ್ನು ಕರೆದು--ನೀನು ನಮ್ಮಿಬ್ಬರ ಅಪ್ಪಣೆಯ ಪ್ರಕಾರ ಈಕೆ ಯನ್ನು ಪರಿಗ್ರಹಿಸು ಎಂದು ಆಜ್ಞಾಪಿಸಲು ; ಭೀಮನು ಸಮ್ಮತಿಸಿ ಅವಳನ್ನು ವರಿಸಿ ದನು. ಹೀಗೆ ಇವರು ಬಹು ದೂರವನ್ನು ನಡೆದುಕೊಂಡು ಶಾಲಿಹೋತ್ರಾ ಶ್ರಮವನ್ನು ಸೇರಿದರು. 7, BHIMA SLAYS THE DEMON BAKA. - ೭, ಬಕಾಸುರ ಸಂಹಾರ. ಆ ಬಳಿಕ ಪಾಂಡವರು ಶಾಲಿಹೋತಾಶ್ರಮದಲ್ಲಿ ಆ ಮಹಾನುಭಾವನ ದೆಸೆ ಯಿಂದ ಸತ್ತರಾಗಿ ಜಟೆಗಳನ್ನು ಧರಿಸಿ ನಾರುಸೀರೆಗಳನ್ನು ಟ್ಟು ಕೃಷ್ಣಾ ಜಿನವನ್ನು ಹೊದೆದು ಕೊಂಡು ತಾಪಸವೇಷವನ್ನು ಧರಿಸಿಕೊಂಡು ಬ್ರಾಹ್ಮಣರೋಪಾದಿಯಲ್ಲಿ ವೇದವೇದಾಂಗಗಳನ್ನು ಓದುತ್ತಾ ಉಪನಿಷತ್ಸಾರಾಯಣವನ್ನು ಮಾಡುತ್ತಾ ನೀತಿ ಶಾಸ್ತ್ರ ಧರ್ಮಶಾಸ್ತ್ರಗಳನ್ನು ಪಠಿಸುತ್ತಾ ಶಾಲಿಹೋತ್ರನ ಅಪ್ಪಣೆಯನ್ನು ತೆಗೆದು ಕೊಂಡು ಆ ವನದಿಂದ ಹೊರಟು ಬರುವ ಮಾರ್ಗದಲ್ಲಿ ದುಷ್ಟಮೃಗಗಳನ್ನು ಕೊಲ್ಲುತ್ತಾ ಅತಿರಿತದಿಂದ ಮತೃತ್ರಿಗರ್ತ ಪಾಂಚಾಲ ದೇಶಗಳನ್ನೂ ನಾನಾಬಿದುರಿನ ಅರಣ್ಯ ಗಳನ್ನೂ ರಮಣೀಯ ವನ ಪ್ರದೇಶಗಳನ್ನೂ ವಿಮಲೋದಕಗಳುಳ್ಳ ಸರೋವರಗಳನ್ನೂ ದಾಟುತ್ತಾ ಮಾರ್ಗದಲ್ಲಿ ನಡೆಯಲಾರದ ತಮ್ಮ ತಾಯಿಯನ್ನು ಉಪಚರಿಸುತ್ತಾ ಕೆಲವು ಪ್ರದೇಶಗಳಲ್ಲಿ ಪ್ರಚ್ಛನ್ನರಾಗಿ ಹೋಗುತ್ತಾ ಮಾರ್ಗದಲ್ಲಿ ತಮ್ಮ ಮುತ್ತಪ್ಪ ನಾದ ವ್ಯಾಸಮುನೀಶ್ವರನನ್ನು ಕಂಡು ಆತನ ಪಾದಗಳಿಗೆ ಕುಂತೀ ಸಮೇತರಾಗಿ ನಮಸ್ಕರಿಸಿ ವಿನಯದಿಂದ ನಿಂತಿರಲು ; ಆ ವ್ಯಾಸನು--ಎಲೈ, ಮಹಾತ್ಮರಿರಾ !