152 KANARESE SELECTIONS-PART III ಪಾಟಿನಲ್ಲಿ ಅಮುಕಿಕೊಂಡು ಹೊಕ್ಕು ಲಂಘಿಸಿ ನೂಕುತ್ತಾ ಚಕ್ರದೋಪಾದಿಯಲ್ಲಿ ಗರಗರನೆ ತಿರುಗುತ್ತಾ ತಮ್ಮ ಪಾದಗಳ ಪೆಟ್ಟಿ ನಿಂದ ಹೊದೆಗಳನ್ನೂ ಮರಗಳನ್ನೂ ಬಳ್ಳಿಗಳನ್ನೂ ಧ್ವಂಸಮಾಡುತ್ತಾ ಬಾರಿಬಾರಿಗೂ ಉಲ್ಲಾಸದಿಂದ ಕೈಗಳನ್ನು ಅಪ್ಪಳಿ ಸುತ್ತಾ ಕಲ್ಲುಗಳಂತಿರುವ ಮುಷ್ಟಿಗಳಿಂದ ಒಬ್ಬರನ್ನೊಬ್ಬರು ತಿವಿಯುತ್ತಾ ಅಟ್ಟಹಾಸ ಗಳಿಂದ ದಿಗಂತರವನ್ನು ಮುಚ್ಚುತ್ತಾ ಒಬ್ಬರೊಬ್ಬರ ಮೇಲೆ ರೋಷಯುಕ್ತರಾಗಿ ಸೆಣ ಸಾಡುತ್ತಿರುವ ಸಮಯದಲ್ಲಿ ಮರದ ಕೆಳಗೆ ನಿದ್ರೆಯನ್ನು ಮಾಡುತ್ತಾ ಇದ್ದ ಕುಂತೀ ಧರ್ಮರಾಜಾದಿಗಳು ಎಚ್ಚತ್ತು, ಎದುರಿನಲ್ಲಿ ನಿಂತಿರುವ ಹಿಡಿಂಬಿಯಿಂದ ಸಕಲ ವೃತ್ತಾಂತವನ್ನೂ ತಿಳಿದು ಭೀಮನಿಗೆ ಇಂಥಾ ಕಷ್ಟ ಬಂದಿತೆ ? ಅಯ್ಯೋ ! ಎಂದು ಕ್ಷೇತಪಡುತ್ತಿದ್ದರು. ಆಗ ಅರ್ಜುನನು ಭೀಮನ ಸವಿಾಪಕ್ಕೆ ಹೋಗಿ--ಎಲೈ ? ಮಹಾತ್ಮನೇ ! ನಾವು ನಿದ್ರೆಯಿಂದ ಈ ವೃತ್ತಾಂತವನ್ನು ತಿಳಿಯದೆ ಹೋದೆವು. ಈಗ ಕುಂತೀಧರ್ಮ ಜರನ್ನು ನಕುಲಸಹದೇವರು ನೋಡಿಕೊಳ್ಳುತ್ತಿದ್ದಾರೆ ನಾನು ನಿನಗೆ ಸಹಾಯಮಾಡು ವುದಕ್ಕಾಗಿ ಬಂದೆನು, ನೀನು ಸ್ವಲ್ಪ ಹೊತ್ತು ಸುಮ್ಮನಿರು ಎನಲು ; ಭೀಮನು ಎಲೈ, ತಮ್ಮನೆ ! ನನ್ನ ಬಾಹುಮಧ್ಯದಲ್ಲಿ ಸಿಕ್ಕಿರುವ ಈ ಕಳ್ಳನು ಪ್ರಾಣಸಹಿತ ಎಲ್ಲಿಗೆ ಹೋದಾನು? ನೀನು ಭಯಪಡಬೇಡ, ಸುಮ್ಮನೆ ನೋಡುತ್ತಿರು ಎನಲು ; ಅರ್ಜುನನುಎಲೈ, ಭೀಮನೇ ! ನೀನು ನಿನ್ನೆ ಯ ರಾತ್ರಿಯಿಂದ ಇನ್ನೂ ಯುದ್ಧವನ್ನು ಪೂರಯಿ ಸಲಿಲ್ಲ, ಪ್ರಾತಃಕಾಲವಾಗುತ್ತಾ ಬಂದಿತು, ಇವನನ್ನು ಕೊಲ್ಲುವುದಕ್ಕೆ ಯಾಕೆ ತಡ ಮಾಡುತ್ತೀಯೆ ? ಇನ್ನು ಮೇಲೆ ಸಂಧ್ಯಾ ಸಮಯ ಬರುತ್ತಿದೆ. ರೌದ್ರವೆಂಬ ಹೆಸರುಳ್ಳ ಸಮಯದಲ್ಲಿ ರಾಕ್ಷಸರಿಗೆ ಬಲಹಚ್ಚುವದೆಂದು ಲೋಕರೂಢಿಯಿರುವುದರಿಂದ ಈತನೆ ಸಂಗಡ ವಿನೋದಗಳನ್ನು ಮಾಡದೆ ಶೀಘ್ರ ವಾಗಿ ಕೊಲ್ಲು ಎನಲು ; ಆ ಕ್ಷಣವೇ ಭೀಮನು ತನ್ನ ಭುಜಬಲವನ್ನು ತೋರಿಸುತ್ತಾ ಆ ರಾಕ್ಷಸನ ತೋಳುಗಳನ್ನು ತನ್ನ ಹಸ್ತದಿಂದ ಹಿಡಿದು ನೂರುಸಾರಿ ಗರಗರನೆ ತಿರಿಗಿಸಿ ಅವನನ್ನು ಕುರಿತು-ಎಲೈ, ರಾಕ್ಷ ಸಾಧಮನೇ ! ಇಷ್ಟು ಕಾಲವೂ ಮನುಷ್ಯರಿಗೆ ಹಿಂಸೆಯನ್ನು ಮಾಡುತ್ತಾ ಮಾಂಸಗ ಳನ್ನು ಮೆಚ್ಚು ಪುಷ್ಟನಾಗಿ ಭೂಮಿಗೆ ಹೊರೆಯಾಗಿ ಬದುಕಿದೆ ಇನ್ನು ಮೇಲೆ ಸುಮ್ಮನೆ ಸತ್ತು ಹೋಗು. ಈ ವನವು ಈ ಹೊತ್ತು ಮೊದಲ್ಗೊಂಡು ನಿಷ್ಕಂಟವಾಗಿ ಸಕಲಜನಸಂಚಾರಯೋಗ್ಯವಾಗಿರಲಿ ಎಂದು ಹೇಳಿ ಅವನನ್ನು ಮೇಲಕ್ಕೆ ಎತ್ತಿ ಭೂಮಿ ಗೆ ಬಡಿದು ತನ್ನ ಪಾದಗಳಿಂದ ಉಜ್ಜುತ್ತಾ ಕುತ್ತಿಗೆಯನ್ನು ಹಿಡಿದು ನುಲಿಯಲು ; ಆ ಹಿಡಿಂಬನು ಮಳೆಯಲ್ಲಿ ನೆನೆದಿರುವೆ ಭೇರಿಯ ಶಬ್ದದಂತೆ ವಿಕಾರ ಧ್ವನಿಯನ್ನು ಮಾಡುತ್ತಾ ಮರಣವನ್ನೈದಿದನು. ಆಗ ಕುಂತೀ ಧಮ್ಮರಾಜಾದಿಗಳೂ ದೇವತೆಗಳೂ ಅತ್ಯಂತ ಹರ್ಷಿತರಾದರು. ಆ ತರುವಾಯ ಅರು ನನು-ಈ ವನ ಸಮೀಪದಲ್ಲಿ ಒಂದು ಪಟ್ಟಣವಿರುವಂತೆ ಕಾಣಿಸುತ್ತದೆ. ಈ ಗದ್ದಲವನ್ನು ಆ ಪಟ್ಟಣದವರು ತಿಳಿದರೆ ಅವರ ಮೂಲಕ ನಮ್ಮ ವೃತ್ತಾಂತವು ಕೌರವರಿಗೆ ಹೇಗಾದರೂ ತಿಳಿಯಬರುತ್ತದೆ. ಆದಕಾರಣ ಇಲ್ಲಿಂದ ಶೀಘ್ರ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೬೪
ಗೋಚರ