ಪುಟ:ಕಥಾಸಂಗ್ರಹ ಸಂಪುಟ ೧.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 151 ಬಿಯೇ ! ನನ್ನ ಭೋಜನಕ್ಕೆ ಯಾವನು ವಿಘ್ನವನ್ನು ಮಾಡುವನು ? ನಾನು ಹಸಿವಿನಿಂದ ಬಾಧೆ ಪಡುವುದನ್ನು ಎಣಿಸದೆ ನೀನು ಯಾರ ಬಲದಿಂದ ಇಲ್ಲಿ ನಿಂತೆ ? ರಾಕ್ಷಸಕುಲಕ್ಕೆ ಹೀಗೆ ಅಪಕೀರ್ತಿಯನ್ನು ೦ಟುಮಾಡಿದ ನಿನ್ನನ್ನು ಈಗಲೇ ವಧಿಸುತ್ತೇನೆಂದು ಕೋರೆದಾ ಡೆಗಳು ಆದಿರುವಹಾಗೆ ದಂತಗಳನ್ನು ನರನರನೆ ಕಡಿಯುತ್ತಾ ಅಟ್ಟಹಾಸವನ್ನು ಮಾಡಿ ಕೊಂಡು ಹಿಡಿಂಬೆಯನ್ನು ಹೊಡೆಯುವುದಕ್ಕೆ ಕೈಯೆತ್ತಿದನು. ಭೀಮನು ಆ ರಾಕ್ಷ ಸನನ್ನು ನೋಡಿ ತನ್ನ ಅಣ್ಣ ತಮ್ಮಂದಿರಿಗೂ ತಾಯಿಗೂ ನಿದ್ರಾಭಂಗವಾಗಕೂಡದೆಂದೆ ಣಿಸಿಎಲೈ, ರಾಕ್ಷಸಾಧಮನೇ ! ನಿಲ್ಲು ; ನಿಲ್ಲು ! ಎಂದು ಹೇಳಿ ಆತನ ಎದುರಿಗೆ ಹೋಗಿ ನಿಂತು-ಎಲೋ, ಹೇಡಿಯೇ ! ತಂಗಿಯನ್ನು ಕೊಲ್ಲುವುದಕ್ಕೆ ಅಪೇಕ್ಷಿಸಿದ ನಿನ್ನ ದಿಟ್ಟ ತನವನ್ನು ಸುಡಬೇಕು ! ಲೋಕದಲ್ಲಿ ಸ್ತ್ರೀಯರು ಮದನಾಧೀನರಾಗಿ ಪುರು ಷರನ್ನು ಬಯಸುವುದು ಸಹಜವೇ, ನೀನು ಹೆಂಗಸಿನ ಮೇಲೆ ಕೈ ಮಾಡುವುದು ಉಚಿ ತವಲ, ನಿನ್ನಲ್ಲಿ ಬಲವಿದ್ದರೆ ನನ್ನ ಸಂಗಡ ಯುದ ವನ್ನು ಮಾಡು, ನಾನೊಬ್ಬನೇ ನಿನ್ನನ್ನು ಯಮಸನ್ನಿಧಾನಕ್ಕೆ ಕಳುಹಿಸುತ್ತೇನೆ, ಮತ್ತು ನಿನ್ನ ಕರಚರಣಾದ್ಯವಯವಗ ಳೆಲ್ಲವನ್ನೂ ನಾಯಿ ನರಿ ಹದ್ದು ಮುಂತಾದವುಗಳಿಗೆ ಹಂಚಿಕೊಟ್ಟು ಈ ವನವನ್ನು ಅರಾಕ್ಷಸವಾಗಿ ಮಾಡಿ ಸರ್ವರಿಗೂ ಸಂತೋಷವನ್ನುಂಟುಮಾಡುತ್ತೇನೆಂದು ಹೇಳಲು ; ಹಿಡಿಂಬನು-ಎಲೈ, ನರಾಧಮನೇ ! ನಿನ್ನನ್ನು ನೀನೇ ಯಾಕೆ ಹೊಗಳಿಕೆ (ು ? ಸಾಮರ್ಥ್ಯವಿದ್ದರೆ ನಿನ್ನ ಭುಜಬಲವನ್ನು ತೋರಿಸು ಮೊದಲು ನಿನ್ನನ್ನು ಕೊಂದು ನಿನ್ನ ರಕ್ತವನ್ನು ಹೀರಿ ಆ ಮೇಲೆ ಇಲ್ಲಿ ಮಲಗಿರುವವರ ಮಾಂಸವನ್ನು ತಿಂದು ಅನಂತರ ಈ ದುಷ್ಟಳನ್ನು ಸಂಹರಿಸುತ್ತೇನೆಂದು ಹೇಳಿ ಯುದ್ಧ ಸನ್ನದ್ಧನಾಗಿ ಕಾಣಿಸಿಕೊಳ್ಳಲು ; ಭೀಮಪರಾಕ್ರಮಶಾಲಿಯಾದ ಭೀಮಸೇನನು* ಮುಖದಲ್ಲಿ ಮುಗುಳುನಗೆಯನ್ನು ತೋರಿಸುತ್ತಾ ಚಾಚಿರುವ ಹಿಡಿಂಬನ ತೋಳುಗಳನ್ನು ತನ್ನ ಬಾ ಹುದಂಡಗಳಿಂದ ಸಿಂಹವು ಕ್ಷುದ್ರಮೃಗಗಳನ್ನು ಹಿಡಿದು ಕೊಳ್ಳುವಂತೆ ಗಟ್ಟಿ ಯಾಗಿ ಹಿಡಿದು ಕೊಳ್ಳಲು ; ಆ ರಾಕ್ಷಸನು ಭೀಮನ ಭುಜಬಲಕ್ಕೆ ಆಶ್ಚರ್ಯಪಟ್ಟು ರೋಷದಿಂ ದ ಆತನನ್ನು ಬಿಗಿದಪ್ಪಿಕೊಂಡು ಅಟ್ಟಹಾಸವನ್ನು ಮಾಡಲು ; ಭೀಮನು ಇನ್ನೂ ಕೋಪಿಸಿಕೊಂಡು. ರಾಕ ಸನ ಸಿಂಹನಾದದಿಂದ ಇವರಿಗೆ ಎಚ್ಚರವಾದೀತು ಎಂದು ಎಣಿಸಿ ಆ ರಾಕ್ಷಸನನ್ನು ದೂರವಾಗಿ ಆಚೆಗೆ ಎಳೆದುಕೊಂಡು ಹೋಗಿ ಮತ್ತೆ ಮಾವು ತಾಳೆ ಹೊಂಗೆ ಮುಂತಾದ ಮರಗಳಿಂದಲೂ ಪರ್ವತ ಶಿಖರಗಳಿಂದಲೂ ಗುಂಡು ಕಲ್ಲು ಗಳಿಂದಲೂ ಅವನೊಡನೆ ಹೆಣಗಾಡುತ್ತಿದ್ದನು, ಆ ಮೇಲೆ ಈ ಸಾಮು ಸರಿಯಲ್ಲ ವೆಂದೆ ಣಿಸಿ ಬಾಹುಯುದ್ಧವನ್ನು ಮಾಡುವುದಕ್ಕೆ ತೊಡಗಿ ಇಬ್ಬರೂ ಮದದಾನೆಗಳೋಪಾದಿ ಯಲ್ಲಿ ರೋಷಭೀಷಣಾಕಾರಗಳಿಂದ ಕೂಡಿದವರಾಗಿ ಸರಿಮಿಗಿಲಾಗಿ ಹತ್ತಿಕೊಂಡು ಮಗುಚಿ ವಿಂಗಡಿಸುತ್ತಾ ಭುಜಗಳಿಗೆ ಭುಜಗಳನ್ನು ಆನಿಸಿ ತಳ್ಳುತ್ತಾ ಒಳಹೊಕ್ಕು ಒಬ್ಬರನ್ನೊಬ್ಬರು ಎತ್ತಿ ಹಾಕುತ್ತಾ ಸಿಕ್ಕಿದರೆ ತಿರಿಗಿಹಾಕುತ್ತಾ ಕರಕೌಶಲ್ಯಗಳನ್ನು ತೋರಿಸುತ್ತಾ ಲಾಗಗಳನ್ನು ಹಾಕಿ ಪೆಟ್ಟು ತಪ್ಪಿಸಿಕೊಂಡು ಎಡಗೈಯಿಂದ ಕೊರ ಳನ್ನು ಒತ್ತಿ ಹಿಡಿದು ಮಂಡಿಗೆ ಮಂಡಿಯನ್ನು ತಾಡಿಸಿ ತಲೆ ಕೆಳಗಾಗಿ ತಳ್ಳುತ್ತಾ ವಾರೆ