ಪುಟ:ಕಥಾಸಂಗ್ರಹ ಸಂಪುಟ ೧.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

150 KANARESE SELECTIONS-PART III ಮತ್ತು ನನಗೆ ಈ ರಾಕ್ಷಸಾದಿಗಳಿಂದ ಲೇಶವೂ ತೊಂದರೆ ಉಂಟಾಗಲಾರದು, ನನ್ನ ಎದುರಿಗೆ ನಿಲ್ಲುವುದಕ್ಕೆ ದೇವೇಂದ್ರಾದಿ ದೇವತೆಗಳೇ ಭಯಪಡುವಾಗ ಈ ರಾಕ್ಷಸ ರೆಷ್ಟು ಮಾತ್ರದವರು ? ನೀನು ಹೋಗಿ ಅಗತ್ಯವಾಗಿ ನಿನ್ನ ಅಣ್ಣನನ್ನು ಕಳುಹಿಸಬ ಹುದು ಎಂದು ಹೇಳಲು ; ಆಕೆಯು ಅವನನ್ನು ಬಿಟ್ಟು ಹೋಗಲಾರದೆ ಅಲ್ಲಿಯೇ ನಿಂತಿದ್ದಳು. ಹೀಗಿರುವಷ್ಟರಲ್ಲಿಯೇ ರೋಷಾರುಣನೇತ್ರಗಳುಳ್ಳವನಾಗಿಯ ಮಹಾಗೌ ದ್ರಾಕಾರಧರನಾಗಿಯೂ ಊರ್ಧ್ವಕೇಶವುಳ್ಳವನಾಗಿಯ ಕಪ್ಪಾದ ಶರೀರವುಳ್ಳವನಾ ಗಿಯ ದಂವಾ ಕರಾಳಮುಖವುಳ್ಳವನಾಗಿಯ ಸಿಂಹದಂತೆ ರೌದ್ರವಾದ ಗರ್ಜನೆ ಯುಳ್ಳವನಾಗಿಯೂ ಮಹಾ ಬಲಶಾಲಿಯಾಗಿಯೂ ಇರುವ ಹಿಡಿಂಬನು ತನ್ನ ತಂಗಿ ಯಾದ ಹಿಡಿಂಬಿಯು ತಡಮಾಡಿದುದರಿಂದ ಅತಿ ಕೋಪಿಷ್ಟನಾಗಿ ಹಬ್ಬಗಳನ್ನು ಕಡಿ ಯುತ್ತಾ ಔಡುಗಳನ್ನು ಕಚ್ಚುತ್ತಾ ಕಣ್ಣುಗಳಿಂದ ರಕ್ತಿಮೆಯನ್ನು ಕಾರುತ್ತಾ ಭುಜ ಯುಗ್ಯವನ್ನು ಅಪ್ಪಳಿಸುತ್ತಾ ಕಾಲುಗಳಿಂದ ನೆಲವನ್ನು ಬಡಿಯುತ್ತಾ ಮೇಘದಂತೆ ಗರ್ಜಿಸುತ್ತಾ ಕೋರೆದಾಡೆಗಳನ್ನು ಮಸೆದು ಕೊಳ್ಳುತ್ತಾ ಹಸಿವು ಬಾಯಾರಿಕೆಗಳಿಂದ ಪೀಡಿತನಾಗಿ--ನನಗೆ ಆಹಾರ ವಿಪ್ಪವನ್ನು ಮಾಡಿದ ದುರಾತ್ಮರಾರು ? ನನ್ನ ದುರಾ ಗ್ರಹವನ್ನು ತಿಳಿದಿದ್ದರೂ ಹಿಡಿಂಬಿಯು ಹಿಂದಿರುಗಿ ಬಾರದೆ ಸಾವಕಾಶವನ್ನು ಮಾಡು ವುದಕ್ಕೆ ಕಾರಣವೇನು ? ಎಂದು ಆ ಹಿಡಿಂಬನು ತಾನು ಕೂತಿದ್ದ ಮರದ ಮೇಲಿನಿಂದ ಕೆಳಕ್ಕೆ ಧುಮುಕಿ ಯುಧಿಷ್ಠಿರಾದಿಗಳಿದ್ದೆಡೆಗೆ ಬರುತ್ತಿರಲು ; ಅತಿಭಯಂಕರನಾಗಿರು ವಂಧ ಆತನ ಬರುವಿಕೆಯನ್ನು ನೋಡಿ ಹಿಡಿಂಬಿಯು ಭೀತಳಾಗಿ ಭೀಮನನ್ನು ನೋಡಿ-ಎಲೈ, ದುಷ್ಟನಾದ ಹಿಡಿಂಬನು ಬರುತ್ತಾನೆ. ನೀನು ಇವರನ್ನು ಎಬ್ಬಿಸಿ ದರೆ ನಾನು ಕಾಮರೂಪಿಯಾದಕಾರಣ ಎಲ್ಲಾದರೂ ಹೊತ್ತು ಕೊಂಡು ಹೋಗುತ್ತೆ - ನೆನಲು ; ಭೀಮನು--ಎಲೈ, ರಾಕ್ಷಸಿಯೇ ! ಈ ಹುಲುರಕ್ಕಸನ ಬರುವಿಕೆಗೆ ಭಯ ಪಟ್ಟು ಶತ್ರು ಭೀಮನಾದ ನಾನು ಇವರ ನಿದ್ರಾಭಂಗವನ್ನು ಮಾಡುವುದಿಲ್ಲ, ನಾನು ಮನುಷ್ಯ ಮಾತ್ರದವನೆಂದು ತಿಳಿಯಬೇಡ, ಈ ನಿಶಾಚರನು ಜೀವದ ಆಶೆಯನ್ನು ತ್ಯಜಿಸಿ ನನ್ನನ್ನು ಕೆಣಕುವುದಕ್ಕೆ ಬರುತ್ತಾನೆ. ನೀನು ಹೆದರದೆ ನಿಶ್ಚಿಂತಳಾಗಿರು ಎನಲು ; ಅಷ್ಟರಲ್ಲೇ ಹಿಡಿಂಬನು ಸವಿಾಪಕ್ಕೆ ಬಂದು ದೊಡ್ಡ ತುರುಬಿನಲ್ಲಿ ಮುಡಿದಿರುವ ಕುಸು ಮಸರವನ್ನೂ ಅತಿಸೂಕ್ಷ್ಮವಾಗಿ ನೆರಿಗೆಯನ್ನು ಹಿಡಿದು ಉಟ್ಟಿರುವ ದಿವ್ಯಾಂಬರವನ್ನೂ ತೊಟ್ಟಿರುವ ೬೦ದಿಗೆ ಪಾಡಗ ಪಾದರಸ ಕಿರುಗಂಟೆ ಒಡ್ಯಾಣ ಕೈಸರ ಕಡಗ ಚಳಕಿ ತಾಳೇಪದಕ ಮುತ್ತಿನಸರ ಚಿನ್ನ ದಸರ ಹರಳೊಲೆ ಮಗು ಬಾವುಲಿ ಮೊದಲಾದ ಆಭರಣಗಳನ್ನೂ ಪೂರ್ಣಚಂದ್ರ ಸಮಾನವಾದ ಮುಖವನ್ನೂ ಅಂದವಾಗಿರುವ ಹುಬ್ಬು ಗಳನ್ನೂ ಸಂಪಿಗೆಯ ಮೊಗ್ಗಿನೋಪಾದಿಯಲ್ಲಿರುವ ಮೂಗನ್ನೂ ಕನ್ನೆ ದಿಲೆಯ ಪುಷ್ಪದ ಎಸಳಿನೋಪಾದಿಯಲ್ಲಿರುವ ನೇತ್ರಗಳನ್ನೂ ಚಿನ್ನದ ಬಣ್ಣಕ್ಕೆ ಸಮಾನವಾದ ಶರೀರವನ್ನೂ ಹೊಂದಿ ಭೀಮನ ಬಳಿಯಲ್ಲಿ ನಲವಿನಿಂದ ನಿಂತಿರುವ ತನ್ನ ತಂಗಿಯನ್ನು ನೋಡಿ ಇವಳು ಪುರುಷಾಭಿಲಾಷೆಯಿಂದ ಹೀಗೆ ಮಾಡಿದಳೆಂದು ಕೋಪಿಸಿಕೊಂಡು--ಎಲೈ, ಹಿಡಿಂ