ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೬ನೆಯ ಭಾಗ 149 ಹುಡುಕಿ ಕಂಡು ಅವರನ್ನು ಸಂಹರಿಸಿ ನನ್ನ ಬಳಿಗೆ ತೆಗೆದುಕೊಂಡು ಬಾ ನಾವಿಬ್ಬರೂ ಆ ಮಾಂಸವನ್ನು ಹೊಟ್ಟೆ ತುಂಬಾ ಉಂಡು ತೃಪ್ತಿ ಪಟ್ಟು ಸಂತೋಷದಿಂದ ಕೈತಪ್ಪಳೆ ಗಳನ್ನು ಹಾಕಿಕೊಂಡು ಸಂಗೀತವನ್ನು ಹಾಡುತ್ತಾ ನಾಟ್ಯವಾಡೋಣ ಎಂದು ಹೇಳಿ ಕಳುಹಿಸಲು ; ಆ ಹಿಡಿಂಬಿಯು ವೃಕ್ಷಗಳ ಮೇಲೆ ನಡೆಯುತ್ತಾ ಪಾಂಡವರಿದ್ದ ತಾವಿಗೆ ಬಂದು ಸುಕುಮಾರಶರೀರಿಗಳಾಗಿಯ ರೂಪಸಂಪನ್ನರಾಗಿಯ ನೆಲದ ಮೇಲೆ ಮಲಗಿರುವ ಧರ್ಮರಾಜಾದಿಗಳನ್ನೂ ಅವರ ಬಳಿಯಲ್ಲಿ ಯೌವನ ಸಂಪನ್ನ ನಾಗಿಯ ಆಜಾನುಬಾಹುವಾಗಿಯ ವಿಶಾಲವಾದ ಎದೆಯುಳ್ಳವನಾಗಿಯ ಅಸಮಾನಸೌಂದರ್ಯಶಾಲಿಯಾಗಿಯ ಉನ್ನತಾಕಾರವುಳ್ಳವನಾಗಿಯ ಸಿಂಹಸ್ಯ? ಧನಾಗಿಯ ದಿವ್ಯ ಕಾಂತಿ ಸಂಪನ್ನ ನಾಗಿಯೂ ಕ೦ಬುಗ್ರೀವನಾಗಿಯ ಕಮಲಪತ್ರಾ ಕನಾಗಿಯೂ ಇರುವ ಎತ್ತರವಾಗಿದ್ದ ಭೀಮನನ್ನು ನೋಡಿ ಕಾಮಬಾಣಪೀಡಿತೆ ಯಾಗಿ ಆತನನ್ನು ಮದುವೆಮಾಡಿಕೊಳ್ಳಬೇಕೆಂದು ಮನಸ್ಸಿನಲ್ಲಿ ಆಲೋಚನೆ ಮಾಡಿ ತಾನು ಕಾಮರೂಪಿಯಾದುದರಿಂದ ತನ್ನ ರೌದ್ರವಾದ ರಾಕ್ಷಸಾಕಾರವನ್ನು ಬಿಟ್ಟು ಅತಿ ರಮಣೀಯವಾದ ಮನುಷ್ಯ ಸ್ತ್ರೀ ರೂಪವನ್ನು ಧರಿಸಿ ಸರ್ವಾಲಂಕಾರಶೋಭಿತೆ ಯಾಗಿ ಮಂದಗಮನದಿಂದ ಆತನ ಇಂಗಿತಗಳನ್ನೇ ದೃಷ್ಟಿಸಿ ನೋಡುತ್ತಾ ಆತನ ಸಮೀಪಕ್ಕೆ ಬಂದು ಸೇರಲು ; ಭೀಮನು ಅತಿ ಲಲಿತಾಕೃತಿಯುಳ್ಳವಳಾಗಿಯ ಚಂದ್ರ ಮುಖ ಶೋಭಿತೆಯಾಗಿಯ ಕಮಲಲೋಚನೆಯಾಗಿಯ ಕುಟಿಲವಾದ ಮುಂಗು ರುಳುಳ್ಳವಳಾಗಿಯ ನಸುನಗುತ್ತಾ ತನ್ನ ಸವಿಾಪದಲ್ಲಿ ನಿಂತಿರುವವಳನ್ನು ನೋಡಿ ಆಶ್ಚರ್ಯಪಡುತ್ತಿದ್ದನು. ಆ ಬಳಿಕ ಅವಳು ಉಚಿತಪ್ರಕಾರದಿಂದ ಆತನಿಗೆ ತನ್ನ ವಿಲಾಸಗಳನ್ನು ತೋರಿ ಸಿ ನಾಚಿಕೆಯಿಂದ ತಲೆಯನ್ನು ಬೊಗ್ಗಿಸಿ ಮುಖದಲ್ಲಿ ಮುಗುಳುನಗೆಯನ್ನು ತೋರಿ ಸುತ್ತಾ ಇಂತೆಂದಳು-ಎಲೈ, ಮಹಾಪುರುಷನೇ ! ನೀನು ಯಾರು ? ಎಲ್ಲಿಂದ ಬಂದೆ ? ದೇವಕುಮಾರಕರೋಪಾದಿಯಲ್ಲಿ ಮಲಗಿರುವ ಈ ಕುಮಾರಕರು ಯಾರು ? ಸ್ವಂತ ಮನೆಯಲ್ಲಿ ಸುಖದಿಂದ ಮಲಗಿರುವ ಹಾಗೆ ಎಷಮವಾದ ಈ ವನದಲ್ಲಿ ನಿಶ್ಚಿತೆಯಾಗಿ ಮಲಗಿರುವ ಈ ಮುದುಕಿಯು ನಿನಗೇನಾಗಬೇಕು ? ಈ ಮಹಾರಣ್ಯವು ರಾಕ್ಷಸ ಭೂಯಿಷ್ಠವಾದುದೆಂದು ತಿಳಿದೂ ಇಲ್ಲಿ ಹೇಗಿದ್ದೀರಿ ? ಈ ಅರಣ್ಯದಲ್ಲಿ ಹಿಡಿಂಬನೆಂಬ ಒಬ್ಬ ರಾಕ್ಷಸನು ಪಾಪಾತ್ಮನಾಗಿ ದುಷ್ಟ ಸ್ವಭಾವದಿಂದ ಮನುಷ್ಯ ಮಾಂಸವನ್ನು ಬಯಸಿ ನಿಮ್ಮನ್ನು ಕೊಂದು ತರುವಹಾಗೆ ನನ್ನನ್ನು ಇಲ್ಲಿಗೆ ಕಳುಹಿಸಿದನು, ಆದರೆ ನಾನು ನಿನ್ನ ರೂಪಾತಿಶಯಕ್ಕೆ ಮೋಹಿಸಿ ನಿನ್ನನ್ನು ಗಂಡನನ್ನಾಗಿ ವರಿಸಿದ್ದೇನೆ. ಇದು ಸತ್ಯವು ನೀನು ನನ್ನ ಮನೋಭೀಷ್ಟ ವನ್ನು ಸಲ್ಲಿಸಿದರೆ ನಿಮಗೆ ರಾಕ್ಷಸರಿಂದುಂಟಾಗುವ ಭಯವನ್ನು ತಪ್ಪಿಸುತ್ತೇನೆ, ನೀನು ನನ್ನನ್ನು ವರಿಸುವುದಕ್ಕೆ ಸಮ್ಮತಿ ಪಡದಿದ್ದರೆ ನನ್ನ ಪ್ರಾಣವು ನಿಲ್ಲಲಾರದು ಎನಲು ; ಭೀಮನು ಎಲೈ, ಕೋಮಲಾಂಗಿಯೇ ! ನೀನು ಹೇಳುವುದು ಯುಕ್ತವೇ ಸರಿ ಆದರೂ ನನಗೆ ಜೈಷ್ಣಭಾತವಾಗಿರುವ ಈ ಯುಧಿ ಪ್ಲರನು ಕನ್ಯಾಪರಿಗ್ರಹ ಮಾಡುವದಕ್ಕಿಂತ ಮುಂಚೆ ನಾನು ಹೇಗೆ ನಿನ್ನನ್ನು ವರಿಸಲಿ ?