ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KANARESE SELECTIONS-PART III 148 KANARESE SELECTIONS-PART III ಲ್ಲಿಯೇ ಮಾರ್ಗಶ್ರಮ ಪರಿಹಾರವಾಗಿ ಆ ಮರದ ಬುಡದಲ್ಲಿಯೇ ಗೊರಕೆಹಾಕುತ್ತಾ ನಿದ್ರೆ ಮಾಡುತ್ತಿದ್ದರು. ಆಗ ಭೀಮನು ಅವರನ್ನು ನೋಡಿ ಶೋಕಸಂಪತ್ತಹೃದಯ ನಾಗಿ ಹಸ್ತಿನಾವತೀ ಪಟ್ಟಣದಲ್ಲಿಯ ಇಂದ್ರಪ್ರಸ್ಥ ಪಟ್ಟಣದಲ್ಲಿಯ ದಿವ್ಯ ಶಯನ ಗಳ ಮೇಲೆ ಮಲಗುತ್ತಿದ್ದ ಇವರಿಗೆ ವ್ಯತ್ಯಾಸವಾಗಿರುವ ಈ ನೆಲದ ಮೇಲೆ ಹೇಗೆ ನಿದ್ರೆ ಬಂದಿತೋ ? ವಸುದೇವನಿಗೆ ತಂಗಿಯ ಕುಂತಿಭೋಜನಿಗೆ ಮಗಳೂ ವಿಚಿತ್ರ ವೀರನಿಗೆ ಸೊಸೆಯ ಪಾಂಡುರಾಜನಿಗೆ ಧರ ಪತ್ನಿ ಯ ಸರ್ವಲಕ್ಷಣ ಸಂಪನ್ನೆ ಯ ಪದ್ಮಗರ್ಭಸದೃಶಕಾಂತಿ ವಿರಾಜಮಾನೆಯ ಕೋಮಲಾಂಗಿಯ ದಿವ್ಯ ಪರ್ಯ೦ಕದ ಮೇಲೆ ಮಲಗುವದಕ್ಕೆ ಯೋಗ್ಯಳೂ ಆಗಿರುವ ಈ ಕುಂತಿದೇವಿಯು ದೇವಾಂಶಸಂಭ ವರಾದ ನಮ್ಮ ೦ಥಾ ಕುಮಾರರನ್ನು ಪಡೆದವಳಾದರೂ ಈ ಅರಣ್ಯದಲ್ಲಿ ದಿಕ್ಕಿಲ್ಲದವ ಳಂತೆ ನಿದ್ರೆ ಹೋಗುವದನ್ನು ನೋಡಬೇಕಾಯಿತು ! ಧರ್ಮಪರನಾಗಿಯ ಮಹಾ ಪರಾಕ್ರಮಶಾಲಿಯಾಗಿಯೂ ತ್ರಿಲೋಕಾಧಿಪತ್ಯಕ್ಕೆ ಯೋಗ್ಯನಾಗಿಯೂ ಇರುವ ಈ ಯಮಜಾತನೂ ಈ ಭೂಮಿಯ ಮೇಲೆ ನಿದ್ರಿಸುತ್ತಾನೆ : ಶಂಘ ಸಮಾನ ಕಾಂತಿ ವಂತನಾಗಿ ಅಸಮಾನ ಶೌರ್ಯ ಧುರಂಧರನಾದ ಈ ಧನಂಜಯನು ಹೇಗೆ ನೆಲದ ಮೇಲೆ ಮಲಗಿದ್ದಾನೆ. ಕನ್ನೈದಿಲೆಯ ಹೂವಿನೋಪಾದಿಯಲ್ಲಿ ಕಪ್ಪಾದ ಕಾಂತಿಯುಳ್ಳ ವರಾಗಿ ರೂಪಸಂಪತ್ತಿನಲ್ಲಿ ಅಶ್ವಿನೀ ದೇವತೆಗಳನ್ನೇ ಅನುಸರಿಸುವಂಧ ನಕುಲಸಹದೇ ವರೂ ಈ ನೆಲದ ಮೇಲೆ ಒರಗಿರುವುದನ್ನು ನೋಡುವುದಕ್ಕಿಂತ ಮತ್ತೊಂದು ದುಃಖ ಉಂಟೇ ? ಎಂದು ಕೊರಗುತ್ತಾ ನಿರ್ಭಿತನಾಗಿ ಕಾದು ಕೊಂಡಿರುತ್ತಿದ್ದನು. 6, THE DEMON HIDIMBA SLAIN BY BHIMA, ಹಿಡಿಂಬ ವಧೆ. ಅನಂತರದಲ್ಲಿ ಪಾಂಡವರು ಮಲಗಿರುವ ಮರಕ್ಕೆ ಸ್ವಲ್ಪ ದೂರವಲ್ಲಿರುವ ಒಂದು ಮತ್ತಿಯ ಮರವನ್ನು , ಆಶ್ರಯಿಸಿಕೊಂಡು ಹಸಿವು ಬಾಯಾರಿಕೆಗಳಿಂದ ಪೀಡಿತನಾಗಿ ಯ ಮಹಾ ಬಲಶಾಲಿಯಾಗಿಯೂ ಕರಾತ್ಮನಾಗಿಯೂ ವಿಕಾರರೂಪವುಳ್ಳವನಾ ಗಿಯ ಕರಾಳವದನನಾಗಿಯ ಕೊತ್ತಿಗಣ್ಣುಗಳುಳ್ಳವನಾಗಿಯೂ ಇರುವಂಧ ಹಿಡಿಂ ಬನೆಂಬ ರಾಕ್ಷಸನು ಬಂದು ಸಾರಿ ಆಕಳಿಸಿ ಮೈಮುರಿದು ಕೊಂಡು ಬಿರುಸಾಗಿರುವ ತಲೆಯ ಕೂದಲನ್ನು ಕೆದರಿಕೊಂಡು ಮನುಷ್ಯ ಗಂಧವನ್ನು ಆಘಣಿಸಿ ಮಾಂಸದ ಮೇಲಣ ಆಶೆಯಿಂದ ತನ್ನ ತಂಗಿಯಾದ ಹಿಡಿಂಬಿಯನ್ನು ನೋಡಿ-ಎಲೆ ಹಿಡಿಂಬಿ ಯೇ ! ಬಹು ಕಾಲದಲ್ಲಿ ಮನಸ್ಸಿಗೆ ಪ್ರಿಯವಾದ ಮನುಷ್ಯ ಮಾಂಸದ ಗಂಧವು ಗಾಳಿ ಯಿಂದ ತಿಳಿಯಬಂದು ನನ್ನ ಬಾಯಿಯ ನೀರನ್ನು ಕರಿಸುತ್ತದೆ. ಈಗ ತುಪ್ಪವನ್ನು ಸುರಿಯುವದಾಗಿಯ ಅತಿ ಮೃದುವಾಗಿಯೂ ಇರುವ ಮನುಷ್ಯನ ಖಂಡವನ್ನು ಅತಿ ತೀಕ್ಷ್ಮವಾದ ನನ್ನ ಎಂಟು ಕೋರದಾಡೆಗಳಿಂದ ಕಚ್ಚಿ ಹೊಸ ರಕ್ತವನ್ನು ನೆರೆಕಟ್ಟು ವಹಾಗೆ ಹೀರಬೇಕು, ಆದುದರಿಂದ ನೀನು ಶೀಘ್ರವಾಗಿ ಹೋಗಿ ಆ ಮನುಷ್ಯರನ್ನು -