ಕಥಾಸಂಗ್ರಹ-೩ನೆಯ ಭಾಗ 147 ಹೀಗೆ ಕೆಲವು ದಿವಸಗಳು ಕಳೆದ ಮೇಲೆ ವಿದುರನು ಹೇಳಿದ್ದ ಸಂಕೇತ ದಿವ ಸವು ಬರಲು ; ಪಾಂಡವರು ಆ ರಾತ್ರಿಯಲ್ಲಿ ಪುರೋಚನ ಸಮೇತವಾಗಿರುವ ಆ ಅರ ಮನೆಗೆ ತಾವೇ ಬೆಂಕಿಯನ್ನು ಹಾಕಿ ತಾವು ಸುರಂಗಮಾರ್ಗವಾಗಿ ತಪ್ಪಿಸಿಕೊಂಡು ಹೋಗುವುದಕ್ಕೆ ಸಿದ್ದವಾಗಿದ್ದರು. ಆ ರಾತ್ರಿಯಲ್ಲಿ ಕುಂತೀದೇವಿಯು ಒಂದು ನಿಮಿ ತ್ರವಾಗಿ ಆ ಪರದ 'ಬ್ರಾಹ್ಮಣರಿಗೆಲ್ಲಾ ಸಮಾರಾಧನೆಯನ್ನು ಮಾಡಿಸಿ ಭೋಜನಾ ನಂತರ ಅವರಿಗೆ ದಕ್ಷಿಣೆ ತಾಂಬೂಲಗಳನ್ನು ಕೊಟ್ಟು ಅವರನ್ನು ಕಳುಹಿಸಿ ತಾನು ಪುತ್ರಸಮೇತಳಾಗಿ ಭೋಜನವನ್ನು ಮಾಡಿ ಸುಖನಿದ್ರೆಗೈಯುತ್ತಿದ್ದಳು. ಇದಲ್ಲದೆ ಪುರೋಚನನು ನೇಮಿಸಿದ ಆ ಶಬರಸ್ತ್ರೀಯು ಅದೇ ದಿವಸದ ರಾತ್ರಿಯಲ್ಲಿ ಕಾಲಪ್ರೇ ಕಿತಳಾಗಿ ತನ್ನ ಐದು ಮಂದಿ ಮಕ್ಕಳನ್ನೂ ಕರೆದುಕೊಂಡು ಜೇನು ಮೊದಲಾದ ಗುರುಪದಾರ್ಧಗಳನ್ನು ತಿಂದು ಮದ್ಯಪಾನವನ್ನು ಮಾಡಿ ಮತ್ತಳಾಗಿ ಅಲ್ಲಿಯೇ ಗಾಢ ನಿದ್ರೆಯನ್ನು ಮಾಡುತ್ತಿದ್ದಳು. ಇತ್ತಲಾ ಭೀಮನು ಅರ್ಧರಾತ್ರಿಯಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿರುವಾಗ ಕುಂತಿ ಮೊದಲಾದ ಐವರನ್ನೂ ಮೊದಲು ಸುರಂಗಮಾರ್ಗದಿಂದ ಆಚೆಗೆ ಕಳುಹಿಸಿ ತಾನು ದೊಡ್ಡ ಸುಂಟರಗಾಳಿ ಬಂದ ವೇಳೆಯಲ್ಲಿ ಮೊದಲು ಪರೋ ಚನನು ಮಲಗಿದ್ದ ಮನೆಗೆ ಯಚ್ಛೇಶ್ವರನನ್ನು ತೋರಿಸಿ ಆ ಮೇಲೆ ತಾವಿದ್ದ ಮನೆಗೆ ಬೆಂಕಿಯನ್ನು ಹಚ್ಚಿ ಸುರಂಗಮಾರ್ಗದಿಂದ ತಾನೂ ಹೊರಟು ತಾಯಿ ಅಣ್ಣ ತಮ್ಮಂದಿ ರೊಡನೆ ಅರಣ್ಯ ಮಾರ್ಗವಾಗಿ ಹೋಗುತ್ತಾ ನಡೆಯಲಾರದೆ ಶ್ರಮಪಡುವ ಧರ್ಮರಾ ಜಾದಿಗಳನ್ನು ಭುಜದ ಮೇಲೂ ಕಂಕುಳಲ್ಲಿಯ ಇಟ್ಟು ಕೊಂಡು ವೇಗದಿಂದ ನಡೆ ಯುತ್ತಾ ಗಂಗಾನದಿಯ ತಡಿಗೆ ಹೋಗಿ ಅಲ್ಲಿ ವಿದುರನು ಆಜ್ಞಾಪಿಸಿದ ದಾಶರಾಜನ ಸಹಾಯದಿಂದ ಹರಿಗೋಲ ಮೇಲೆ ಆ ಗಂಗೆಯನ್ನು ದಾಟಿ ಇನ್ನೂ ಕೆಲವು ಗಾವು ದಗಳ ದೂರವನ್ನು ಹೋಗಿ ಗೊಂಡಾರಣ್ಯದಲ್ಲಿರುವ ಒಂದು ದೊಡ್ಡ ಆಲದ ಮರದ ಕೆಳಗೆ ಅವರೆಲ್ಲರನ್ನೂ ಇಳಿಸಿ ಅಲ್ಲಿ ನಿದ್ರೆಯನ್ನು ಮಾಡುತ್ತಿರುವ ಧರ್ಮರಾಜಾದಿ ಗಳನ್ನು ಒಬ್ಬನೇ ಧೈರ್ಯವಾಗಿ ಕಾದು ಕೊಂಡು ಇರುತ್ತಿದ್ದನು. ಅನಂತರದಲ್ಲಿ ಆ ಭೀಮನು ಎಚ್ಚತ್ತಿರುವ ಧರ್ಮರಾಜನನ್ನು ನೋಡಿ ಅಲ್ಲಿ ಎಚ್ಚರವಾಗಿರುವಂತೆ ಹೇಳಿ ತಾನು ದಾಹತೀರ್ಧವನ್ನು ತೆಗೆದುಕೊಂಡು ಬರಬೇ ಕಂದು ಜಲಪಕ್ಷಿಗಳ ಸ್ವರವನ್ನೇ ಆಲಿಸಿಕೊಂಡು ನಡೆದು ಹೋಗುತ್ತಿದ್ದನು. ಆಗ ಅವನು ಹೆಜ್ಜೆಯಿಟ್ಟ ಸ್ಥಳದಲ್ಲಿರುವ ಮಹಾ ವೃಕ್ಷಗಳೆಲ್ಲಾ ಅವನ ತೊಡೆಗಳಿಗೆ ಸೋಂಕಿ ಸಹಮಲವಾಗಿ ಮುರಿದು ಬೀಳುತ್ತಿದ್ದವು, ಮತ್ತು ಆತನ ಭುಜಬಲ ದಿಂದ ಹುಟ್ಟಿದ ಚಂಡಮಾರುತವು ದಿಕ್ಕುಗಳಲ್ಲಿ ಕಿಕ್ಕಿರಿದು ಅತಿ ಭಯಂಕರವಾದ ಧ್ವನಿಯನ್ನು ಮಾಡುತ್ತಾ ಬೀಸುವುದಕ್ಕೆ ತೊಡಗಿತು. ಹೀಗೆ ಒಂದು ಸರೋವರದ ಬಳಿಗೆ ಹೋಗಿ ಅಲ್ಲಿ ಸ್ವಾನಪಾನಗಳನ್ನು ಮಾಡಿ ತನ್ನ ಉತ್ತರೀಯದಲ್ಲಿಯ ತಾವ ರೆಯ ಎಲೆಗಳಲ್ಲಿಯ ಉದಕವನ್ನು ಕಟ್ಟಿ ಕೊಂಡು ಅಲ್ಲಿಗೆ ಎರಡು ಹರದಾರಿ ದೂರದ ಲ್ಲಿರುವ ತಾವು ಇಳಿದಿದ್ದ ವಟವೃಕ್ಷದ ಬಳಿಗೆ ಬಂದು ಕುಂತಿ ಮೊದಲಾದವರನ್ನೆಬ್ಬಿಸಿ ಅವರಿಗೆ ಪಾನೀಯವನ್ನು ಕೊಡಲು ; ಅವರು ಆ ತಣ್ಣೀರನ್ನು ಕುಡಿದ ಮಾತ್ರದ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೯
ಗೋಚರ