ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146 KANARESE SELECTIONS-PART III ಇತ್ತಲಾ ಧರ್ಮರಾಜಾದಿಗಳು ಇಂದ್ರಪ್ರಸ್ಥ ಪಟ್ಟಣವನ್ನು ಕುರಿತು ತೆರಳು ತಿರಲು ; ಮಾರ್ಗದಲ್ಲಿ ಕುಂತಿಯು-ಎಲೈ, ಧರ್ಮರಾಜನೇ ! ವಿದುರನು ಹೇಳಿದ ಸಂಕೇತವನ್ನು ನಾವು ಕೇಳಬಹುದಾಗಿದ್ದರೆ ಅದನ್ನು ನಮಗೆ ತಿಳಿಸು ಎನಲು ; ಆತನು-ಎಲೈ, ತಾಯೇ ! ಇಂದ್ರಪ್ರಸ್ಥ ಪಟ್ಟಣದಲ್ಲಿ ಕೌರವಾದಿಗಳು ಮಾಡಿರುವ ಅರಗಿನ ಮನೆಯಲ್ಲಿ ಅರ್ಧರಾತ್ರಿಯಲ್ಲಿ ಉಂಟಾಗುವ ಬೆಂಕಿಯಿಂದ ನಾವೆಲ್ಲರೂ ದಹಿಸಲ್ಪಡದ ಹಾಗೆ ಎಚ್ಚರವಾಗಿರಬೇಕೆಂತಲೂ ಆ ಮನೆಗೆ ಬೆಂಕಿಯನ್ನು ಹಾಕುವ ಪುರೋಚನನು ನಮ್ಮ ಆಶ್ರಿತನಾಗಿಯೇ ಇರುತ್ತಾನೆಂತಲೂ ನಾವು ಹಿಂದಿರುಗಿ ಹೋಗದೆ ಆ ಮನೆಯಲ್ಲಿಯೇ ಇದು ಕೊಂಡು ಒಂದು ಸುರಂಗವನ್ನು ಮಾಡಿಸಿ ಅದರ ಮಲಕವಾಗಿ ಅಗ್ನಿ ಭಯವನ್ನು ತಪ್ಪಿಸಿಕೊಳ್ಳಬೇಕೆಂತಲೂ ಉದಯ ಕಾಲದಲ್ಲಿ ಬೇಟೆಯ ನೆವದಿಂದಲೂ ರಾತ್ರಿ ಕಾಲದಲ್ಲಿ ನಕ್ಷತ್ರ ಮಲಕವಾಗಿಯ ಮಾರ್ಗವನ್ನು ತಿಳಿದುಕೊಂಡು ದೇಶಾಂತರಕ್ಕೆ ಹೋಗಬೇಕೇ ಹೊರತಾಗಿ ಹಿಂದಿರುಗಿ ಪಟ್ಟಣಕ್ಕೆ ಬರಕೂಡದೆಂತಲೂ ಭಯಪಡದೆ ಧೈರ್ಯವಾಗಿರಬೇಕೆಂತಲೂ ಅಲ್ಲಿ ಸುರಂಗವನ್ನು ಮಾಡುವುದಕ್ಕೆ ತಾನೇ ಒಬ್ಬ ಆಪ್ತನನ್ನು ಕಳುಹಿಸುತ್ತೇನೆಂತಲೂ ಹೀಗಾದರೆ ನಿಮ್ಮೆ ವರಿಗೂ ಕೇಡು ಬರಲಾರದೆಂತಲೂ ಎದುರನು ಹೇಳಿ ಹೋದನು ಎಂದು ಹೇಳಲು ; ಕುಂತೀದೇವಿಯು ಯೋಚನಾಸರಳಾಗಿ-ನಿಮ್ಮ ಮನ ಬಂದಂತೆ ನಡಿಸಿ ಎಂದು ಹೇಳಿದಳು. ಆಗ ಪಾಂಡವರು ಪ್ರಯಾಣಗತಿಯಿಂದ ಇಂದ್ರಪ್ರಸ್ಥಕ್ಕೆ ಸೇರಿ ಆ ಪಟ್ಟ ಣದ ಮುಖ್ಯಾಧಿಕಾರಿಗಳೇ ಮೊದಲಾದ ಪುರಜನಗಳಿಂದ ಸನ್ಮಾನವನ್ನು ಹೊಂದಿ ಅಚ್ಛಿನ್ನ ಭಕ್ತನಂತೆ ನಟಿಸುತ್ತಿರುವ ಪುರೋಚನನು ತೋರಿಸಿದ ಅರಮನೆಯನ್ನು ಪ್ರವೇ ಶಿಸಿ ಅಲ್ಲಿ ಸಿದ್ಧವಾಗಿರುವ ಷಡ್ರಸೋಪೇತಾನ್ನವನ್ನು ೦ಡು ಬೇಕಾದ ಪಾನೀಯವನ್ನು ಕುಡಿದು ವಿಶ್ರಮಿಸಿಕೊಳ್ಳುತ್ತಾ ಇರುವಾಗ ಧರ್ಮಜನು ತನ್ನ ತಮ್ಮಂದಿರಿಗೆ ಎದು ರನು ಹೇಳಿದ ಸಂಕೇತಾರ್ಧವನ್ನು ತಿಳಿಸಿ ಕೆಲವು ಕಾಲ ಸುಖದಿಂದಿರುತ್ತಿರಲು ; ಒಂದು ದಿವಸ ವಿದುರನು ಕಳುಹಿಸಿದ ಒಬ್ಬ ಕಾಮಾಟದವನು ಬಂದು ಅ೦ತರ೦ಗವಾಗಿ ಧರ್ಮರಾಜನನ್ನು ಕಂಡು-ಎಲೈ, ಯಮ ಜಾತನೇ ! ನಾನು ವಿದುರನು ಕಳುಹಿಸಿದ ಕಾಮಾಟದವನು ; ಆತನು ನಡುದಾರಿಯಲ್ಲಿ ಮೈಚ್ಛ ಭಾಷೆಯಲ್ಲಿ ಉಸುರಿದುದನ್ನೇ ಗುರುತಾಗಿ ಹೇಳಿ ನೀವು ತಪ್ಪಿಸಿಕೊಂಡು ಹೋಗುವಂತೆ ಒಂದು ಸುರಂಗವನ್ನು ಮಾಡಿ ಬರಹೇಳಿದನು ಎನಲು ; ಧರ್ಮರಾಜನು ಆತನಿಗೆ ಬಹುಮಾನವನ್ನು ಕೊಟ್ಟನು. ಆ ಕಾಮಾಟದವನು ರಹಸ್ಯವಾಗಿ ಮೇಲ್ತಾಗದಲ್ಲಿ ಒಬ್ಬನು ಪ್ರವೇಶಿಸುವ ಹಾಗೆ ಬಾಯಿ ಇಟ್ಟು ಒಳಗೆ ವಿಸ್ತಾರವಾಗಿ ಹಳ್ಳವನ್ನು ತೆಗೆದು ಮೇಲು ಬಾಗಿಲು ಮುಚ್ಚಿ ಒಬ್ಬರಿಗೂ ಕಾಣಿಸದ ಹಾಗೆ ಮಾಡಿ ಪುರೋಚನನು ಬೆಂಕಿಯನ್ನು ಹಚ್ಚುವುದಕ್ಕಿರುವ ದಿವಸವನ್ನು ಆತನಿಗೆ ತಿಳುಹಿಸಿ ವಿದುರನ ಬಳಿಗೆ ಹೊರಟು ಹೋದನು. ಈ ಪಾಂಡವರು ಈ ಅರ್ಥವನ್ನು ಒಬ್ಬರಿಗೂ ತಿಳಿಸದೆ ವಂಚಕನಾದ ಪುರೋಚನನನ್ನು ವಂಚಿಸಬೇಕೆಂದು ಸಮಯವನ್ನು ನಿರೀಕ್ಷಿಸುತ್ತಾ ಇರುತ್ತಿದ್ದರು. ಇದಲ್ಲದೆ ಆ ಪುರೋಚನನು ಒಬ್ಬ ವ್ಯಾಧ ಸ್ತ್ರೀಯನ್ನು ಆ ಅರಮನೆಯಲ್ಲಿ ನಡೆದ ಸಂಗತಿಯನ್ನೆಲ್ಲಾ ತನಗೆ ತಿಳಿಸುವ ಹಾಗೆ ನೇಮಿಸಿ ಇಟ್ಟಿದ್ದನು.