ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ೩ನೆಯ ಭಾಗ 145 ರುವುದರಿಂದ ವಿಶೇಷ ಪ್ರಯೋಜನವೂ ಕ್ಷೇಮವೂ ಉಂಟೆಂದು ಅದಕ್ಕೆಲ್ಲಾ ತಕ್ಕ ಕಾರಣಗಳನ್ನು ಕಲ್ಪಿಸಿ, ಪ್ರಯಾಣವನ್ನು ಮಾಡಿಸಿ ಅವರನ್ನು ಕಳುಹಿಸಿಬಿಡಲು ; ಮೇಲೆ ಮಾರಣವತಿಯನ್ನು ಬಿಟ್ಟು ಹೋಗುತ್ತಿರುವ ಪಾಂಡವರು ತಮ್ಮ ಮಾರ್ಗದಲ್ಲಿ ಹಿಂದೆಯೇ ಬರುವ ಭೀಷ್ಮಾದಿಗಳನ್ನೂ ಪುರಜನರನ್ನೂ ಹಿಂದಿರುಗಿ ಹೋಗುವ ಹಾಗೆ ಬೇಡಿಕೊಳ್ಳುತ್ತಿರಲು ; ಅವರೆಲ್ಲರೂ ಬಹು ವ್ಯಸನಾಕ್ರಾಂತರಾಗಿ ಕಂಬನಿಗಳನ್ನು ತುಂಬುತ್ತಾ ಆ ಪಾಂಡವರನ್ನು ಹರಸಿ ಹಿಂದಿರುಗಿ ಹಸ್ತಿನಾವತಿ ಪಟ್ಟಣಕ್ಕೆ ಹೋದರು. ಆದರೆ ಈ ಕೌರವಾದಿಗಳು ಮಾಡಿದ ದುರಾಲೋಚನೆಯನ್ನು ತಿಳಿದಿದ್ದ ವಿದುರನು ಆ ಪಾಂಡವರ ಮೇಲಣ ಮೋಹದಿಂದ ಅವರಿಗೆ ಉಂಟಾಗುವ ಆಪತ್ತು ನಾಶವಾಗಿ ಹೋಗುವ ಹಾಗೆ ತಕ್ಕ ತೋಡನ್ನು ಮಾಡಿ ಈ ವಿವರವನ್ನು ಧರ್ಮರಾಜನಿಗೆ ತಿಳಿಸ ಬೇಕೆಂದು ಇನ್ನೂ ಸ್ವಲ್ಪ ದೂರ ಅವರ ಸಂಗಡವೇ ಹೋಗಿ, ಅಲ್ಲಿ ಮತ್ತೊಬ್ಬರಿಗೂ ತಿಳಿಯದ ಹಾಗೆ ಧರ್ಮರಾಜನನ್ನು ಕುರಿತು ಮೈಚ್ ಭಾಷೆಯಲ್ಲಿ ಗೂಢಾರ್ಧವಾಗಿ ಹೇಳಿದನು. ಏನಂದರೆ--ಎಲೈ, ಧರ್ಮರಾಜನೇ ! ನೀನು ಸಕಲ ಭಾಷೆಗಳನ್ನೂ ತಿಳಿ ದಂಥವನು. ಲೋಕದಲ್ಲಿ ಪೂರ್ವೋತ್ತರ ವೃತ್ತಾಂತಗಳನ್ನು ವಿಚಾರಿಸಿ ಬುದ್ದಿ ಬಲ ದಿಂದ ನಡೆಯುತ್ತಿರುವಂಧ ಪುರುಷನು ಸ್ವಸಂರಕ್ಷಣ ರೂಪಧರ್ಮವನ್ನೂ ಬಂಧುಜನ ವಿರೋಧವನ್ನೂ ತಿಳಿದು ತನಗೆ ಶತ್ರುಗಳಿಂದ ಬರುವ ಆಪತ್ತುಗಳನ್ನು ತಪ್ಪಿಸಿಕೊಳ್ಳು ವುದನ್ನೇ ಹುಡುಕುತ್ತಾ ಇರಬೇಕು, ಕಬ್ಬಿಣ ಉಕ್ಕುಗಳಿಂದ ಮಾಡಲ್ಪಡದೆ ಇರುವು ವಾಗಿದ್ದರೂ ಅತಿ ತೀಕ್ಷ್ಯವಾಗಿ ಶರೀರವನ್ನು ಖಂಡಖಂಡಗಳಾಗಿ ಕೊಯ್ಯುವಂಥ ಶಸ್ತ್ರಾಸ್ತವು ಇಂಥಾದುದೆಂದು ತಿಳಿದಿರುವಂಥವನನ್ನು ಶತ್ರುಗಳು ಸಂಹರಿಸಲಾರರು. ಪೊದೆಗಳನ್ನು ಕೆಡಿಸುವುದಾಗಿಯೂ ಶೈತ್ಯವನ್ನು ಹೋಗಲಾಡಿಸುವುದಾಗಿಯೂ ಒಬ್ಬ ರಿಗೂ ತಿಳಿಯದಂತೆ ಗೋಪ್ಯವಾಗಿ ಒಂದು ಮರದ ಪೊಟ್ರೆ ಯಲ್ಲಿ ಇರುವ ವಸ್ತುವಿ ನಂತೆ ತನಗೆ ಬಾಧೆಯನ್ನು ಉಂಟುಮಾಡದ ಹಾಗೆ ಎಚ್ಚರವಾಗಿ ನಡೆದುಕೊಳ್ಳು ವವನು ಬಹುಕಾಲ ಬದುಕುವನು, ಕಣ್ಣು ಇಲ್ಲದೆ ಇರುವಂಧವನು ಮಾರ್ಗವನ್ನೂ ತಿಳಿಯಲಾರನು. ಧೈರ್ಯವಿಲ್ಲದ ಪುರುಷನು ತಾನು ಐಶ್ವರ್ಯವಂತನಾಗುವ ಹಾಗೆ ಒಂದು ಕಾರ್ಯವನ್ನೂ ಮಾಡಲಾರನು. ಈ ಅರ್ಧವನ್ನು ನೀನು ತಿಳಿದಿರು, ಮತ್ತು ಪ್ರಾಜ್ಞರಾಗಿರುವಂಧವರು ಲೋಹಾದಿಗಳಿಂದ ನಿರ್ಮಿತವಾದ ಅಸ್ತ್ರವನ್ನು ಶತ್ರುವಿ ನಿಂದ ಹೊಂದುವುದೇ ಇಲ್ಲ, ಒಂದು ವೇಳೆ ಹೊಂದಿದರೂ ಮುಳ್ಳು ಹಂದಿಯು ಅಗ್ನಿ ಯಿಂದ ಒಂದು ಮಾರ್ಗಕ್ಕೆ ಭಯತಟ್ಟಿದರೆ ಮತ್ತೊಂದು ಮಾರ್ಗದಿಂದ ತಪ್ಪಿಸಿ ಕೊಂಡು ಹೋಗುವ ಹಾಗೆ ಆ ಶಸ್ತ್ರದಿಂದುಂಟಾಗುವ ಅಪಾಯವನ್ನು ತಪ್ಪಿಸಿಕೊಳ್ಳು ವರು. ಹಗಲಿನಲ್ಲಿ ಸಂಚಾರದಿಂದಲೂ ರಾತ್ರಿಯಲ್ಲಿ ನಕ್ಷತ್ರಗಳಿಂದಲೂ ಮಾರ್ಗವನ್ನು ತಿಳಿಯಬೇಕು. ತನ್ನ ನಿಮಿತ್ತವಾಗಿ ಪಂಚೇಂದ್ರಿಯಗಳನ್ನು ನಿಗ್ರಹಿಸಿದಲ್ಲದೆ ಸ್ವಸಂರ ಕ್ಷಣೆ ಆಗುವುದಿಲ್ಲವೆಂದು ಹೇಳಿದ ವಿದುರನ ಮಾತನ್ನು ಕೇಳಿ, ಧರ್ಮರಾಜನು. ನೀನು ಹೇಳಿದುದಕ್ಕೆಲ್ಲಾ ಅರ್ಧವಾಯಿತು ಎನಲು ; ವಿದುರನು ಅವರೆಲ್ಲರನ್ನೂ ಹರಸಿ ತಾನು ಹಿಂದಿರುಗಿ ಪಟ್ಟಣಕ್ಕೆ ಬಂದನು.