ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144 KANARESE SELECTIONS—PART III ಸಬೇಕು, ಆ ನಿಮಿತ್ತಕ್ಕೆ ಒಂದು ಅವಶ್ಯಕತ್ವವನ್ನು ಉಂಟುಮಾಡಬೇಕು, ಉಕ್ಕಿನಿಂದ ಮಾಡಲ್ಪಟ್ಟು ದಾಗಿಯ ಸಾಣೆಯಿಂದ ಹರಿತವಾಗಿಯ ಒರೆಯಲ್ಲಿ ಮರೆಯಾಗಿಯ ಇರುವ ಕತ್ತಿಯು ಸಾಂಗರೋಮಗಳನ್ನು ಹೇಗೆ ಕತ್ತರಿಸುತ್ತಿದೆಯೋ ಹಾಗೆಯೇ ಸಮಯವನ್ನು ಸಾಧಿಸಿಕೊಂಡು ಕರ್ಕಶಹೃದಯನಾಗಿಯೂ ದಯಾರಹಿತನಾಗಿಯ ಒಬ್ಬರಿಗೂ ತನ್ನ ಹೃದಯವನ್ನು ತಿಳಿಸದೆ ಇರುತ್ತಾ ಹೊಂಚಿಕೊಂಡಿದ್ದು ಶತ್ರುವನ್ನು ಕೊಂದುಹಾಕಬೇಕು. ಆದುದರಿಂದ ಎಲೈ, ದೃತರಾಷ್ಟ್ರ ರಾಜನೇ ! ಪಾಂಡವರು ಬಲಪರಾಕ್ರಮಶಾಲಿಗಳಾಗಿಯ ದಾಯಾದರಾಗಿಯ ಇರುವುದರಿಂದ ಅವರ ಭಯವನ್ನು ತಪ್ಪಿಸಿಕೊಳ್ಳುವಂಧ ಉಪಾಯವನ್ನು ಮಾಡಿದರೆ ನೀನು ಭಯವಿಲ್ಲದೆ ನಿನ್ನ ಮಕ್ಕಳೊಡನೆ ಸುಖವಾಗಿ ಬದುಕುತ್ತೀ ಎಂದು ಹೇಳಿ ಕಳಿಂಗನು ತನ್ನ ಮನೆಗೆ ಹೊರಟುಹೋದನು. 5. DURYODHANA ATTEMPTS THE DESTRUCTION OF THE _PANDUS : THE SCAPE. * ೫, ದುರೊಧನನು ಪಾಂಡವರನ್ನು ನಾಶಪಡಿಸುವುದಕ್ಕೆ ಪ್ರಯತ್ನ ಮಾಡಲು ಅವರು ತಪ್ಪಿಸಿಕೊಂಡು ಹೋದುದು, ಕರನೂ ದುಶ್ಯಾಸನನೂ ಶಕುನಿಯ ಕೌರವನೂ ಇವರೆಲ್ಲರೂ ಕಳಿಂಗನ ನೀತಿಯನ್ನು ವಿಸ್ತಾರವಾಗಿ ಕೇಳಿದ ಧೃತರಾಷ್ಟ್ರನ ಬಳಿಗೆ ಬಂದು--ಎಲೈ, ರಾಜನೆ! ಈ ಪಾಂಡವರು ಅತ್ಯಂತ ಬಲಶಾಲಿಗಳಾದುದರಿಂದ ಇವರನ್ನು ಏನಾದರೂ ಒಂದು ಉಪಾಯದಿಂದ ಕೊಲ್ಲಬೇಕೆನಲು ಆ ರಾಜನು-ಎಲೈ, ಕೌರವಾದಿಗಳಿರಾ ! ಆ ಪಾಂಡವರು ನಿಮಗೆ ಏನು ಅಪಕಾರವನ್ನು ಮಾಡಿದ್ದಾರೆ ? ಅವರ ತಂದೆಯಾದ ಪಾಂಡುರಾಜನು ತಾನು ಮಹಾಬಲಪರಾಕ್ರಮಶಾಲಿಯಾದರೂ ಜಾತ್ಯಂಧನಾದ ನನಗೆ ಪಟ್ಟ ವನ್ನು ಕಟ್ಟಿ ನನಗೆ ಸಹಾಯವನ್ನು ಮಾಡಿಕೊಂಡಿದ್ದು ಪರಲೋಕಗತ ನಾದನು. ಆತನು ಮಾಡಿದ ಉಪಕಾರವನ್ನು ನಾನೆಂದಿಗೂ ಮರೆಯೆನು. ನಾನು ಪಾಂಡವರಲ್ಲಿ ಲೇಶಮಾತ್ರವೂ ದ್ವೇಷವನ್ನೆಣಿಸತಕ್ಕವನಲ್ಲ. ನಿಮ್ಮ ಮನಬಂದಂತೆ ನಡಿಸ ಬಹುದು ಎನಲು ಅದಕ್ಕವರು ಎಲೈ, ರಾಜಾ! ನಮ್ಮನ್ನು ಒಬ್ಬರೂ ದೂಷಿಸರು ಎಂದು ಹೇಳಿ ಆ ಮೇಲೆ ಪುರೋಚನನೆಂಬ ಒಬ್ಬ ಶಿಲ್ಪಿಯನ್ನು ಕರೆದು ಅವನಿಗೆ ಹೇಳ ಬೇಕಾದ ಮಾತುಗಳನ್ನು ರಹಸ್ಯವಾಗಿ ಹೇಳಿ ನೀನೀಕಾರ್ಯವನ್ನು ಒಂದು ಪಿಳ್ಳೆಗೂ ಗೋಚರವಾಗದಂತೆ ನಡಿಸು ; ಹೋಗೆಂದು ವೀಳೆಯವನ್ನು ಕೊಟ್ಟು ಕಳುಹಿಸಲು ಅದೇ ಮೇರೆಗೆ ಅವನು ಲಾಕ್ಷಾಗೃಹವನ್ನು ಇಂದ್ರಪ್ರಸ್ಥ ನಗರದಲ್ಲಿ ಮಾಡಿ ಕಾದು ಕೊಂಡಿದ್ದನು. ಅನಂತರದಲ್ಲಿ ಕೌರವರೆಲ್ಲರೂ ಇಂದ್ರ ಪ್ರಸ್ಥನಗರದಲ್ಲಿ ಪಾಂಡವರಿಗಾಗಿ ಕಟ್ಟಿ, ಲ್ಬಟ್ಟು ಸರ್ವಸಾಮಗ್ರಿಯೊಡನೆ ಸಿದ್ಧವಾಗಿರುವ ಅರಮನೆಯಲ್ಲಿ ವಾಸಮಾಡಿಕೊಂಡಿ