ಕಥಾಸಂಗ್ರಹ-೩ನೆಯ ಭಾಗ 143 ಧರ್ಮಾರ್ಥಕಾಮಗಳಲ್ಲಿ ಒಂದೊಂದನ್ನು ವ್ಯತ್ಯಾಸವಾಗಿ ಆಚರಿಸಿದರೆ ಪರಸ್ಪರ ವಿರೋಧ ಬರುವುದರಿಂದ ಮೂರನ್ನೂ ಸಮವಾಗಿಯೇ ಆಚರಿಸಬೇಕು, ಪುರುಷಾರ್ಧ ವನ್ನು ಬಯಸುವಂಧ ಅರಸು ಗರ್ವವನ್ನು ಬಿಟ್ಟು ದ್ವೇಷಾಸೂಯೆಗಳಿಲ್ಲದೆ ಪ್ರಿಯ ವಚನಗಳನ್ನೇ ಆಡುತ್ತಾ ಶುದ್ಧಾಂತಃಕರಣನಾಗಿ ಬ್ರಾಹ್ಮಣರೊಡನೆ ಆಲೋಚಿಸಿ ಪುಣ್ಯ ಕರ್ಮವನ್ನಾಗಲಿ ಪಾಪಕರ್ಮವನ್ನಾಗಲಿ ಮಾಡಿ ಐಶ್ವರವನ್ನು ಹೊಂದಿ ಆ ಮೇಲೆ ಪಾಪನಿವಾರಣಾರ್ಧವಾಗಿ ಧರ್ಮವನ್ನು ಮಾಡಬೇಕು, ತನ್ನ ಕಾರ್ಯಕ್ರೋ ಸ್ಕರ ಯಾರಿಗಾದರೂ ಆ ಶ್ರೇಯಸ್ಸನ್ನು ಮಾಡಿದರೆ ಆ ಮೇಲೆ ಅವರ ಬಳಿಗೆ ಹೋಗಿ ಬಹಳ ಪಶ್ಚಾತ್ತಾಪಪಟ್ಟು ಕ್ಷಮಿಸಬೇಕೆಂದು ಸಮಾಧಾನವನ್ನು ಮಾಡಬೇಕು. ಮೂಢನಾದವನಿಗೆ ಆಶೆಯನ್ನು ಹುಟ್ಟಿಸಿ ತನ್ನ ಸ್ವಾಧೀನವನ್ನು ಮಾಡಿ ಕೊಳ್ಳಬೇಕು. ಬುದ್ದಿವಂತನಾದವನನ್ನು ಸಮಯೋಚಿತವಾದ ದಾನಗಳಿಂದ ವಶಮಾಡಿಕೊಳ್ಳಬೇಕು. ಶತ್ರುವಿನೊಡನೆ ಸಮಾಧಾನವನ್ನು ಮಾಡಿ ಕೊಂಡೆನಲ್ಲಾ; ಇನ್ನು ಭಯವಿಲ್ಲ ವೆಂದು ಮೈಮರೆತಿರುವ ಪುರುಷನು ವೃಕ್ಷದ ಕೊಂಬೆಯನ್ನು ಹಿಡಿದು ಕೊಂಡು ನಿದ್ರೆಮಾಡು ವವನ ಹಾಗೆ ನಷ್ಟವಾಗುವನು. ಮತ್ತು ಮಂತ್ರಾಲೋಚನೆಯನ್ನು ಮಾಡು ವಂಧವನು ಸೌಧಾಗ್ರದಲ್ಲಾದರೂ ಮೇಲ್ಕ ಚೈನ ಮೇಲಾದರೂ ನಿರ್ಜನವಾದ ವನದಲ್ಲಾದರೂ ಪರ್ವತಾಗ್ರದಲ್ಲಾದರೂ ತನ್ನ ಮುಖ್ಯರಾದ ಆಪ್ತರೊಡನೆ ಕೂಡಿಕೊಂಡು ಆ ಸ್ಥಳಗಳಲ್ಲಿ ಚಿಕ್ಕ ಮಕ್ಕಳೂ ಮಗರೂ ಗಿಣಿ ಗೊರವಂಕ ಇವೇ ಮೊದಲಾದವುಗಳನ್ನೆಲ್ಲಾ ಹೊರಡಿಸಿಬಿಟ್ಟು ನಾಲ್ಕು ದಿಕ್ಕುಗಳನ್ನೂ ನೋಡಿ ಆಲೋಚನೆಯನ್ನು ಮಾಡಬೇಕು, ಆಲೋಚನೆಗೆ ಇಬ್ಬರೇ ಹೊರತು ಆರು ಕಿವಿಯಾದರೆ ಕಾರ್ಯ ಕೆಡುವುದು, ಶತ್ರುಗಳ ಒಲವು ಬರದಿಂದ ಬಡ ವಾಗಿರುವ ಕಾಲದಲ್ಲಿಯ ವ್ಯಾಧಿಯಿಂದ ಪೀಡಿತವಾಗಿರುವ ಸಮಯ ದಲ್ಲಿಯ ಗ್ರಹಾದಿಗಳಿಂದ ತೊಂದರೆ ಪಡುತ್ತಿರುವ ವೇಳೆಯಲ್ಲಿಯ ದೂರಪ್ರಯಾಣದಿಂದ ಕಂಗೆಟ್ಟಿರುವ ಹೊತ್ತಿನಲ್ಲಿಯೂ ಹೋಗಿ ಆ ಶತ್ರುವನ್ನು ಸಂಹರಿಸಬೇಕು, ಶೀಘ್ರವಾಗಿ ಆಗತಕ್ಕಂಧ ಕಾರ್ಯವನ್ನು ತನ್ನ ಬುದ್ದಿ ಯಿಂದಲೇ ಗ್ರಹಿಸಿ ನಡಿಸಬೇಕು. ವಿಳಂಬದಿಂದ ಆಗುವಂಧ ಕಾರ್ಯಕ್ಕೆ ಭಯವು ತಟ್ಟಿ ದರೆ ತಾನು ಭಯ ಪಡುವವನೋಪಾದಿಯಲ್ಲಿ ಪ್ರತಿಕ್ರಿಯೆಯನ್ನು ಮಾಡಬೇಕು, ಭಯವು ಬಂದಾಗ ಧೀರನಾಗಿ ನಿರ್ವಹಿಸಬೇಕು. ಬುದ್ಧಿ ಪ್ರಮಾದದಿಂದ ವಿಾರಿಹೋದ ಕಾರ್ಯಕ್ಕೆ ಯೋಚಿಸದೆ ಮುಂದೆ ಮಾಡತಕ್ಕ ಕಾರ್ಯವನ್ನು ಮೋಸಬೀಳದ ಹಾಗೆ ನಡಿಸಬೇಕು, ಅಜ್ಞಾನದಿಂದ ಶತ್ರುವನ್ನು ನಿಗ್ರಹಿ ಸದೆ ಉಪೇಕ್ಷಿಸಿದರೆ ಕಾಡಿನಲ್ಲಿ ಬಿದ್ದ ಸಣ್ಣ ಕಿಡಿಯೋಪಾದಿಯಲ್ಲಿ ಆ ಶತ್ರುವು ಕಾಲ ವಿಶೇಷದಲ್ಲಿ ಪ್ರಬಲನಾಗಿ ಬಹು ಅನರ್ಧಕ್ಕೆ ಗುರಿಯಾಗುವನು. ತನಗಿಂತ ಅಧಿಕವಾಗಿರುವ ಶತ್ರುವಿನೊಡನೆ ಸಂಧಿಯನ್ನು ಮಾಡಿಕೊಳ್ಳುವಾಗ ಆತನಿಗೆಬೇಕಾದಷ್ಟು ದ್ರವ್ಯವನ್ನು ಕೊಡುತ್ತೇನೆಂದು ಆಶೆಯನ್ನು ತೋರಿಸಿ ಅದನ್ನು ಕೊಡುವುದಕ್ಕೆ ಬಹು ಕಾಲ ಗಡುವು ಕಟ್ಟಿ ಕೊಳ್ಳಬೇಕು, ಆ ಗಡುವು ಸವಿಾಪಿಸಿದರೆ ಅದಕ್ಕೊಂದು ವಿಘ್ನವನ್ನು ಕಲ್ಪಿಸಬೇಕು.” ಆ ವಿಘ್ನಕ್ಕೆ ಒಂದು ನಿವಿತ್ತವನ್ನು ಕಲ್ಪಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೫
ಗೋಚರ