ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

142 KANARESE SELECTIONS-PART III ಯಾಗುವಂತೆ ಆತನ ದೋಷಗಳು ಮರೆಯಾಗಿ ಹೋಗುವುವು, ಕೊಲ್ಲ ತಕ್ಕಂಥ ಶತ್ರುವು ಏನಾದರೂ ಒಂದು ವಿಧದಿಂದ ತಪ್ಪಿಸಿಕೊಂಡರೆ ಅವನ ಮನೆಗೆ ಬೆಂಕೆಯನ್ನು ಹಾಕಿಯಾದರೂ ಯಾರಾದರೂ ಭಿಕ್ಷುಕರ ಮುಖಾಂತರದಿಂದ ಅವನಿಗೆ ವಿಷವನ್ನು ಹಾಕಿಸಿಯಾದರೂ ಅಗತ್ಯವಾಗಿ ಅವನನ್ನು ಕೊಂದುಹಾಕಬೇಕು, ಶತ್ರುವು ಏನಾದರೂ ಒಂದು ದುರಾಲೋಚನೆಯಿಂದ ತನ್ನ ಬಳಿಗೆ ಬಂದರೆ ಅವನಿಗೆ ಪ್ರತ್ಯುತ್ತಾನಾಭಿವಂದನೆ ಗಳನ್ನು ಮಾಡಿ ಬೇಕಾದ ವಸ್ತುಗಳನ್ನು ಕೊಟ್ಟು ಸ್ನೇಹಭಾವದ ನಂಬಿಕೆಯನ್ನು ಉಂಟುಮಾಡಿ ಸಮಯವರಿತು ಅವನನ್ನು ಕೊಂದುಹಾಕಬೇಕು. ವಿಶ್ವಾಸಕ್ಕೆ ಯೋಗ್ಯನಾಗಿರುವಂಧವನಲ್ಲಿಯೂ ತಾನು ಪೂರ್ಣ ವಿಶ್ವಾಸವಿಡ ಕೂಡದು ವಿಶ್ವಾಸ ಯೋಗ್ಯನಲ್ಲದವನನ್ನು ಹತ್ತಿರಕ್ಕೆ ಸೇರಿಸಕೂಡದು, ಯಾವ ರಹಸ್ಯವಾದರೂ ಅದನ್ನು ತಾನೊಬ್ಬನೇ ವಿಚಾರಿಸಿ ನಡಿಸಬೇಕೇ ಹೊರತು ಮತ್ತೊ ಬೃರ ಸಂಗಡ ಆಲೋಚಿಸಕೂಡದು, ಒಬ್ಬರಲ್ಲಿಯೂ ವಿಶ್ವಾಸವಿಡದೆ ಹೋದರೆ ತನ್ನ ಕಾರ್ಯವು ಕೈಗೂಡುವುದು ಹೇಗೆಂದರೆ-ಬೇರೆ ವೇಷವನ್ನು ಧರಿಸಿಕೊಂಡು ಜೋಗಿ ಜಂಗಮ ದಾಸಯ್ಯ ಇವರ ಹಾಗೆ ತೋರ್ಪಡಿಸುವ ಬುದ್ದಿವಂತರಾದ ಗೂಢ ಚಾರರನ್ನು ಸ್ವರಾಷ್ಟ್ರದಲ್ಲಾದರೂ ಪರರಾಷ್ಟ್ರದಲ್ಲಾದರೂ ನೇಮಿಸಿ ಉದ್ಯಾನವನ ಗಳಲ್ಲಿಯ ಜಗತಿಯ ಕಟ್ಟೆಗಳಲ್ಲಿಯ ದೇವಾಲಯಗಳಲ್ಲಿಯ ಅರವಟ್ಟಿಗೆ ಗಳಲ್ಲಿಯ ಬಾಹ್ಯ ಪ್ರದೇಶಗಳಲ್ಲಿಯೂ ಹಜಾರಗಳಲ್ಲಿಯೂ ಬ್ರಾಹ್ಮಣರ ಮನೆಗಳ ಲ್ಲಿಯ ಜೂಜಾಡುವ ಸ್ಥಳ ಗಳಲ್ಲಿಯ ಪರ್ವತ ವನಪ್ರದೇಶಗಳಲ್ಲಿಯೂ ಜಾತ್ರೆಗಳ ಲ್ಲಿಯ ಪುಣ್ಯನದೀ ತೀರಿಗಳಲ್ಲಿಯ ಮಂತ್ರಿಗಳಲ್ಲಿಯ ಪುರೋಹಿತರಲ್ಲಿಯೂ ಸರ್ವಾಧಿಕಾರಿಗಳಲ್ಲಿಯ ದಳಪತಿಗಳಲ್ಲಿಯ ಬಾಗಿಲು ಕಾಯುವವರಲ್ಲಿಯ ಅಂತಃಪುರಸಂಚಾರಿಗಳಲ್ಲಿಯ ಸೆರೆಮನೆಯ ಅಧಿಕಾರಿಗಳಲ್ಲಿಯೂ ಬೊಕ್ಕಸದ ಗುರಿ ಕಾರರಲ್ಲಿಯ ಧರ್ಮಾನುಸಾರವಾಗಿ ನಡೆಯುವ ವಿದ್ವಾಂಸರ ಸಮೂಹದಲ್ಲಿಯ ಅವಸರದವರಲ್ಲಿಯ ಚಾವಡಿಯ ಅಧಿಕಾರಿಗಳಲ್ಲಿಯ ತಳವಾರರಲ್ಲಿಯ ದುರ್ಗದ ಠಾಣೆದವರಲ್ಲಿಯ ಉಕ್ಕಡದವರಲ್ಲಿಯ ಇನ್ನೂ ಇವೇ ಮುಂತಾದ ಸ್ಥಳಗಳಲ್ಲಿ ನಡೆ ಯುವ ಸ್ವರಾಷ್ಟ್ರ ಸರರಾಷ್ಟ್ರ ವಿಚಾರಗಳನ್ನು ತಿಳಿಯಬೇಕು. ತನಗಿಂತ ಬಲಿಷ್ಠ ನಾದ ವನು ತನ್ನಿಂದ ಧನವನ್ನೇನಾದರೂ ಅಪೇಕ್ಷಿಸಿದರೆ ವೃಕ್ಷವ್ರ ಪುಸಿ ಫಲಾಖೆಯನ್ನು ತೋರಿಸುತ್ತಾ ಫಲಿಸದೆ ಇರುವಹಾಗೂ ಫಲಿಸಿದರೂ ಹತ್ತುವುದಕ್ಕಾಗದೆ ಇರುವ ಹಾಗೂ ಹತ್ತಿದರೂ ಕಾಯಾಗಿರುವ ಹಾಗೂ ಒಂದು ವೇಳೆ ಹಣ್ಣಾಗಿದ್ದರೂ ಭಕ್ತಿಸಿದರೆ ಜೀರ್ಣಕ್ಕೆ ಬಾರದೆ ಇರುವ ಹಾಗೂ ಆ ಶತ್ರುವಿಗೆ ಕೈ ಮುಗಿದು ವಿನಯವನ್ನು ನಟಿಸುತ್ತಾ ಆತನನ್ನು ಕೊಲ್ಲುವ ಸಮಯ ಬರುವ ಪರ್ಯ೦ತರವೂ ಹಣವನ್ನು ಕೊಡುತ್ತೇನೆಂದು ಭಾಷೆಯನ್ನು ಮಾಡಿಕೊಟ್ಟು ಒಂದು ವೇಳೆ ಹಣವಿಲ್ಲದೆ ಹೋದರೆ ಇದ್ದಷ್ಟನ್ನಾದರೂ ಕೊಡುವವನ ಹಾಗೆ ಒಳ್ಳೆಯ ಮಾತುಗಳನ್ನಾಡುತ್ತಾ ತನಗೆ ಹಣವು ಕೈಸೇರಿದ ಮೇಲೆ ಪ್ರಭುತ್ವದ ಮೋಡಿಯಿಂದ ಆತನು ಬಂದು ಕೇಳುವುದಕ್ಕೆ ಸಮಯವನ್ನು ಸಾಧಿಸಿ ಕೇಳಿದರೆ ಕೊಟ್ಟು ಬಿಡುವವನ ಹಾಗೆ ಅಭಿನಯಿಸಿ ಕೊಡದೆ ಕಾಲಹರಣವನ್ನು ಮಾಡುತ್ತಾ ಆತನನ್ನು ಕಡೆಗೂ ವಂಚಿಸಬೇಕು.