ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 141 ನೀನು ಸಮ್ಮತಿಸಿದರೆ ನಾನು ಅದನ್ನು ಭಕ್ಷಿಸುತ್ತೇನೆ ಎಂದು ಹೇಳಿತು ಎನಲು ಹೆಗ್ಗ ಣವು ಆ ಮಾತನ್ನು ಕೇಳಿ ಭಯಪಟ್ಟು ಬಿಲವನ್ನು ಹೊಕ್ಕಿ ಕೊಂಡಿತು, ತೋಳವು ಬಂದ ಮೇಲೆ ನರಿಯು ಅದನ್ನು ಕುರಿತು-ಎಲೈ, ತೋಳನೇ ! ಹೆಬ್ಬುಲಿಯು ಕುಟುಂಬಸ ಮೇತವಾಗಿ ಬರುತ್ತದೆ. ಅದು ನಮಗೆ ಸೌಖ್ಯವನ್ನು ಮಾಡುವ ರೀತಿಯು ತೋರುವು ದಿಲ್ಲ, ನಿನಗೆ ತೋರಿದ ರೀತಿಯಲ್ಲಿ ನಡೆದುಕೋ ಎನಲು ತೋಳವು ಭಯಪಟ್ಟು ಹೊರಟು ಹೋಗಲು ಆ ನರಿಯು ಮುಂಗಿಸಿ ಬಂದ ಮೇಲೆ-ಎಲೈ, ಕೀರನೇ ! ನನ್ನ ಬಾಹುಬಲದಿಂದ ಹುಲಿ ಮೊದಲಾದ ಸಮಸ್ತ ಬ೦ತುಗಳೂ ಹೆದರಿ ಓಡಿಹೋದವು. ನೀನು ಸಮರ್ಥನಾದರೆ ನನ್ನೊಡನೆ ಯುದ್ಧವನ್ನು ಮಾಡಿ ನನ್ನನ್ನು ಜಯಿಸಿ ಈ ಮಾಂಸ ವನ್ನು ಭಕ್ಷಿ ಸು ಎನಲು ಆ ಮುಂಗಿಸಿಯು-ಹುಲಿಯ ತೋಳವೂ ಬುದ್ದಿಯುಳ್ಳ ಹೆಗ್ಗಣವೂ ನಿನಗೆ ಭಯಪಟ್ಟು ಓಡಿಹೋದುದರಿಂದ ನೀನು ವೀರಾಗ್ರೇಸರನು. ನಿನ್ನೊ ಡನೆ ಹೋರುವುದಕ್ಕೆ ನಾನು ಸಮರ್ಧನಲ್ಲ ಎಂದು ಹೇಳಿ ಅದೂ ಓಡಿಹೋಯಿತು, ಈ ಪ್ರಕಾರ ತನ್ನ ಉಪಾಯ ಬಲದಿಂದ ಆ ಮೃಗಗಳನ್ನೆಲ್ಲಾ ದಾಟಿಸಿ ನರಿಯು ತಾನೊಂದೇ ಆ ಮೃಗ ಮಾಂಸವನ್ನು ಸ್ವಚ್ಛೆಯಾಗಿ ಭಕ್ಷಿಸಿತು. ಅರಸನಾದವನು ಭಯಗ್ರಸ್ತನಾದವನಿಗೆ ಭಯವನ್ನು ತೋರಿಸುತ್ತಾ ಶೂರೆನಾ ದವನಿಗೆ ಕೈಮುಗಿಯುತ್ತಾ ಲುಬ್ಬನಾದವನಿಗೆ ಹಣವನ್ನು ಕೊಡುತ್ತೇನೆಂದು ಆಶೆಯನ್ನು ಹುಟ್ಟಿಸುತ್ತಾ ಸಮಾನ ಬಲಶಾಲಿಯೊಡನೆ ಸ್ನೇಹವನ್ನು ಬಳಸುತ್ತಾ ತನ್ನ ಅರ್ಧಕ್ಕೆ ದ್ರೋಹವನ್ನು ಎಣಿಸಿದವನು ಮಗನಾದರೂ ಸ್ನೇಹಿತನಾದರೂ ಅಣ್ಣನಾ ದರೂ ತಮ್ಮನಾದರೂ ತಂದೆಯಾದರೂ ಗುರುವಾದರೂ ದಾಕ್ಷಿಣ್ಯವನ್ನು ನೋಡದೆ ಅವನನ್ನು ಸಂಹರಿಸಬೇಕು. - ಆಣೆಯನ್ನು ಇಟ್ಟು ಕೊಂಡಾದರೂ ನಂಗೆಯನ್ನು ಕೊಟ್ಟಾದರೂ ಶತ್ರುಎ ನೊಡನೆ ಸಂಧಿ ಮಾಡಿಕೊಂಡು ಹೊ೦ಚೆ ಆತನನ್ನು ಕೊಂದುಹಾಕಬೇಕು, ಅದರಿಂದ ದೋಷವಿಲ್ಲ ಎಂದು ಭಾರ್ಗವನು ಹೇಳಿದ್ದಾನೆ. ತನಗೆ ಭಯವು ಬರುವ ಪರ್ಯ೦ತ ರವೂ ಭಯಪಟ್ಟಿರುವವನೋಪಾದಿಯಲ್ಲಿ ಇದ್ದುಕೊಂಡು ಭಯವು ಬಂದಾಗ ನಿರ್ಭೀ ತನ ಹಾಗೆ ಕಾಣಿಸಬೇಕು. ಶತ್ರುವಿಗೆ ಆಪತ್ತು ಒ೦ದಾಗ ದಯೆಯಿಂದ ಬಿಟ್ಟು ಬಿಟ್ಟರೆ ಆತನು ಮೃತ್ಯು ಪ್ರಾಯನಾಗುವನು ಮನಸ್ಸಿನಲ್ಲಿ ಕೋಪವಿದ್ದರೂ ಸ್ನೇಹಿತನೋಪಾದಿಯಲ್ಲಿ ನಗುನಗುತ್ತಾ ಮಾತಾ ಡುವುದರಿಂದ ತನ್ನ ಕೋಪವು ಪರರಿಗೆ ತಿಳಿಯದ ಹಾಗೆ ಇರಬೇಕು, ಕೊಲ್ಲುವು ದಕ್ಕೆ ಎಣಿಸುವಾಗಲೂ ಕೊಲ್ಲುವಾಗಲೂ ಕೊಂದ ಮೇಲೆಯ ಕ್ಷೇಶದಿಂದ ತಪ್ಪಿ ಸುವವನೋಪಾದಿಯಲ್ಲಿ ಪ್ರಿಯವಾಗಿಯೇ ಮಾತಾಡುತ್ತಿರಬೇಕು, ಶತ್ರುವಾದವನಿಗೆ ಒಳ್ಳೆಯ ಮಾತುಗಳನ್ನಾಡಿ ಬೇಕಾದ ವಸ್ತುಗಳನ್ನು ಕೊಟ್ಟು ಉಪಚಾರಗಳನ್ನು ಮಾಡಿ ನಂಬಿಕೆಯನ್ನು ಕೊಟ್ಟು ಸ್ವಲ್ಪ ಅಣಿ ತಪ್ಪಿದ ವೇಳೆಯಲ್ಲಿ ಅವನನ್ನು ಕೊಂದು ಹಾಕಬೇಕು, ಮನಸ್ಸಿನಲ್ಲಿ ಎಷ್ಟು ದ್ವೇಷವಿದ್ದರೂ ಧರ್ಮಮಾರ್ಗವನ್ನೇ ಅನುಸರಿಸಿ ದವನಂತೆ ನಟಿಸುತ್ತಾ ಇದ್ದರೆ ಕಪ್ಪ ಮೇಘಗಳು ಸೂರ್ಯನ ಪ್ರಕಾಶದಿಂದ ಮರೆ