ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

140 KANARESE SELECTIONS-PART III ಕೀರವೂ ಒಂದು ಹೆಗ್ಗಣವೂ ಅದರೊಡನೆ ಸ್ನೇಹವನ್ನು ಮಾಡಿಕೊಂಡು ಇರುವುವು. ಈ ಐದು ಜಂತುಗಳೂ ಒಂದು ದಿವಸದಲ್ಲಿ ಸ್ಕೂಲಕಾಯವುಳ್ಳ ಒಂದು ಮೃಗವನ್ನು ನೋಡಿ ಅದನ್ನು ಹಿಡಿದು ಕೊಲ್ಲಬೇಕೆಂದು ಬಹು ಯತ್ನವನ್ನು ಮಾಡಿದರೂ ಶಕ್ತ ವಾಗದು ದರಿಂದ ಆಲೋಚನೆಯನ್ನು ಮಾಡುತ್ತಿರಲು ಅವುಗಳಲ್ಲಿ ನರಿಯು ಹುಲಿ ಮೊದಲಾದ ಜಂತುಗಳನ್ನು ನೋಡಿ ಈ ವನದಲ್ಲಿರುವ ಮೃಗವು ಯೌವನ ವೇಗ ಬಲ ಸ್ಫೂಲತ್ವಗಳುಳ್ಳುದಾದ ಕಾರಣ ನಾವು ಎಷ್ಟು ಪ್ರಯತ್ನಗಳನ್ನು ಮಾಡಿದರೂ ಅದು ನಮ್ಮ ಕೈಗೆ ಸಿಕ್ಕದೆ ಓಡುತ್ತದೆ. ಆದಕಾರಣ ಅದು ಒಂದು ಪ್ರದೇಶದಲ್ಲಿ ನಿದ್ದೆ ಹೋಗುವ ಸಮಯದಲ್ಲಿ ಹೆಗ್ಗಣವು ಅದರ ಕಾಲುಗಳನ್ನು ತನ್ನ ಹಲ್ಲುಗಳಿಂದ ಕಡಿಯಬೇಕು, ಕಾಲುಗಳನ್ನು ಕಡಿದ ಮೇಲೆ ಹೆಬ್ಬುಲಿಯು ಬಂದು ಅದನ್ನು ಕೊಲ್ಲಬೇಕು, ಕೊಂದಮೇಲೆ ಆ ದುಷ್ಟನನ್ನು ನಾವೆಲ್ಲರೂ ಕೂಡಿ ಭಕ್ಷಿಸಬೇಕು ಎಂದು ಹೇಳಿತು. ಆ ಮಾತಿಗೆ ಎಲ್ಲವೂ ಒಪ್ಪಿಕೊಂಡು ಹಾಗೆಯೇ ಆಗಲಿ ಎಂದು ಆ ಮೃಗವು ನಿದ್ದೆ ಹೋಗುವ ಸಮಯದಲ್ಲಿ ಹೆಗ್ಗಣವು ಅದರ ಕಾಲುಗಳನ್ನು ಕಡಿ ಯಲು, ಹೆಬ್ಬುಲಿಯು ಅದನ್ನು ಕೊಲ್ಲಲು ಆ ನರಿಯು ವ್ಯಾಘಾದಿಗಳನ್ನು ಕುರಿತು--ನೀವು ಸ್ನಾನವನ್ನು ಮಾಡಿ ಬನ್ನಿರಿ ಅಷ್ಟು ಪರ್ಯ೦ತರ ನಾನು ಈ ಮೃಗವನ್ನು ಕಾದು ಕೊಂಡಿರುತ್ತೇನೆ ಎನಲು ಆ ಹುಲಿ ಮೊದಲಾದ ಜಂತುಗಳು ಹಾಗೆಯೇ ಆಗಲಿ ಎಂದು ನದಿಯ ತೀರಕ್ಕೆ ಹೋದವು, ಆ ಮೇಲೆ ಹುಲಿಯು ಮುಂಚಿತವಾಗಿ ಸ್ವಾನವನ್ನು ಮಾಡಿ ಬರುವಷ್ಟರೊಳಗೆ ನರಿಯು ಮನಸ್ಸಿನಲ್ಲಿ ಖೇದ ವನ್ನು ತಂದುಕೊಂಡು ಚಿಂತಿಸುತ್ತಿರಲು ಆ ಹುಲಿಯು ನರಿಯನ್ನು ನೋಡಿ. ಎಲೈ, ನರಿಯೇ ! ನೀನು ಬುದ್ದಿ ಸಂಪನ್ನನಾಗಿದ್ದರೂ ಇಷ್ಟೇತಕ್ಕೆ ಚಿಂತಿಸುತ್ತಾ ಇದ್ದೀ ? ನಾವೀಮೃಗವನ್ನು ಭಕಿಸಿಕೊಂಡು ಸುಖವಾಗಿರುವಣ ಎನಲು ಆ ನರಿಯು-ಎಲೆ, ಹುಲಿರಾಯನೆ ! ಹೆಗ್ಗಣವು ನಿನ್ನನ್ನು ದೂಷಿಸಿದ ವಿವರವನ್ನು ಹೇಳುತ್ತೇನೆ ಕೇಳು ಏನಂದರೆ--ನಾನು ಆ ಮೃಗದ ಕಾಲುಗಳನ್ನು ಕಡಿದುದ ರಿಂದ ಅದು ಸತ್ತು ಹೋಗಿ ಹೆಬ್ಬುಲಿಗೆ ಜೀವನವಾಯಿತಲ್ಲದೆ ಈ ಹುಲಿಯ ಸಾಮ ರ್ಧೈವೇನು ? ಇದಕ್ಕೆ ಒರಿಯ ಹೆಮ್ಮೆ ಏತಕ್ಕೆ? ಎಂದು ಇನ್ನೂ ಬಹು ಪ್ರಕಾರವಾಗಿ ನಿನ್ನನ್ನು ದೂಷಿಸಿತು, ನಿನ್ನನ್ನು ದೂಷಿಸಿದುದೇ ನನ್ನ ನ್ನು ದೂಷಿಸಿದ ಹಾಗೆ ನಾನು ಎಣಿಸಿ ಈ ಮಾಂಸವನ್ನು ಮುಟ್ಟಲೊಲ್ಲೆನು ಎನಲು ಹುಲಿಯು-ಎಲೈ ನರಿಯ ! ನೀನು ನನಗೆ ಪರಮಮಿತ್ರನಾದುದರಿಂದ ನಾನು ಈ ಮಾಂಸವನ್ನು ಭಕ್ಷಿಸುವುದಕ್ಕಿಂತ ಮೊದಲೇ ಇದನ್ನು ನನಗೆ ತಿಳಿಸಿಹಿದುದು ಒಳ್ಳೆಯದಾಯಿತು, ನಾನು ಅಪೇಕ್ಷಿಸಿದರೆ ಈ ವನದಲ್ಲಿ ಇನ್ನೂ ಎಷ್ಟು ಮೃಗಗಳಿಲ್ಲ ? ಅವುಗಳನ್ನು ಕೊಂದು ಭಕ್ಷಿಸುವೆನೇ ಹೊರತಾಗಿ ಇದನ್ನು ನಾನು ಮುಟ್ಟುವುದಿಲ್ಲ ಎಂದು ಹೇಳಿ ಯಥೇಚ್ಛವಾಗಿ ಹೊರ ಟುಹೋಯಿತು, ಆನಂತರ ಹೆಗ್ಗಣವು ಬರಲು ನರಿಯು ಆದನ್ನು ನೋಡಿ-ಎಲೈ, ಹೆಗ್ಗಣವೇ ! ಆ ಮುಂಗಿಸಿಯು ನನ್ನ ಸಂಗಡ ಈ ಮೃಗದ ಮಾಂಸವು ಕಠಿಣವಾ ದು ದರಿಂದ ನನಗೆ ರುಚಿಸದು. ಆದರೆ ಹೆಗ್ಗಣದ ಮಾಂಸವು ಮೃದುವಾದುದರಿಂy